ರೇಷ್ಮೇ ಬೆಳೆ ಕಡಿಮೆ ಬಂಡವಾಳ, ಹೆಚ್ಚಿನ ಲಾಭ


Team Udayavani, Oct 6, 2019, 3:00 AM IST

reshme

ದೇವನಹಳ್ಳಿ: ರೇಷ್ಮೇ ಕೃಷಿ ಅನೇಕ ರೈತರಿಗೆ ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವಲ್ಲಿ ಮಹತ್ತ‌ರ ಪಾತ್ರ ವಹಿಸಿದೆ. ಕಡಿಮೆ ಜಾಗದಲ್ಲಿ , ಕಡಿಮೆ ಬಂಡವಾಳದಲ್ಲಿ ಅವಧಿ ಮತ್ತು ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ನೀಡುವ ರೇಷ್ಮೇ ಬೆಳೆಯಾಗಿದೆ ಎಂದು ರೇಷ್ಮೇ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕುಮಾರಸ್ವಾಮಿ ಹೇಳಿದರು. ತಾಲೂಕಿನ ಕೊಯಿರಾ ಗ್ರಾಮದ ರೈತ ಚಿಕ್ಕೇಗೌಡರ ಮರಕಡ್ಡಿ ರೇಷ್ಮೇ ತೋಟ ಮತ್ತು ಕೊಳವೆ ಭಾವಿಗಳಿಗೆ ಅಳವಡಿಸಿರುವ ಇಂಗು ಗುಂಡಿ ಪರಿಶೀಲಿಸಿ ಮಾತನಾಡಿದರು.

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ರೇಷ್ಮೇ ಬೆಳೆ ಬೆಳೆಯಲಾಗುತ್ತಿದ್ದು, ಒಟ್ಟು 6944.60 ಹೆಕ್ಟೇರ್‌ ಪ್ರದೇಶದಲ್ಲಿ 6624 ರೈತರು ರೇಷ್ಮೇ ಕೃಷಿಯಲ್ಲಿ ತೊಡಗಿದ್ದಾರೆ. ರೇಷ್ಮೇ ಕೃಷಿ ಅನೇಕ ರೈತರಿಗೆ, ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಡಿಮೆ ಜಾಗ, ಕಡಿಮೆ ಬಂಡವಾಳ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ನೀಡುವ ಬೆಳೆಯಾಗಿದೆ ಎಂದರು.

2019-20 ನೇ ಸಾಲಿನಲ್ಲಿ 102 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೇ ವಿಸ‌¤ರಿಸಿ 59.80 ಲಕ್ಷ ಮಿಶ್ರ ತಳಿ ಮತ್ತು 5.20 ಲಕ್ಷ ದ್ವಿತಳಿ ರೇಷ್ಮೇ ಮೊಟ್ಟೆಗಳನ್ನು ಚಾಕಿ ಮಾಡಿಸಿ, 3887 ಮೆಟ್ರಿಕ್‌ ಟನ್‌ ಮಿಶ್ರ ತಳಿ ರೇಷ್ಮೇ ಗೂಡು ಹಾಗೂ 338 ಮೆಟ್ರಿಕ್‌ ಟನ್‌ ದ್ವಿತಳಿ ರೇಷ್ಮೇ ಗೂಡುಗಳನ್ನು ಉತ್ಪಾದಿಸಿ, ಕ್ರಮವಾಗಿ 539.90 ಮೆಟ್ರಿಕ್‌ ಟನ್‌ ಮತ್ತು 52 ಮೆಟ್ರಿಕ್‌ ಟನ್‌ ರೇಷ್ಮೇ ನೂಲನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.

ಬೈವೋಲ್ಟಿನ್‌ ಬೆಳೆಯುವ 200 ರೈತರಲ್ಲಿ ಕೊಯಿರಾ ಚಿಕ್ಕೇಗೌಡ ಎಲ್ಲರ ಮಾದರಿ ಆಗಿದ್ದಾರೆ. ರೇಷ್ಮೇ ಸೊಪ್ಪು ಕತ್ತರಸುವ ಹೊಸ ಆವಿಷ್ಕಾರದ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ. ರಸ ಗೊಬ್ಬರಗಳನ್ನು ಬಳಕೆ ಮಾಡದೆ ಸಾವಯುವ ಗೊಬ್ಬರವನ್ನು ಬಳಸಿಕೊಂಡು ರೇಷ್ಮೇ ಕೃಷಿ ಮಾಡುತ್ತಿರುವುದು ವಿಶೇಷವಾಗಿದೆ ಎಂದು ಶ್ಲಾಘಿಸಿದರು.

ರೈತ ಚಿಕ್ಕೇಗೌಡ ಮಾತನಾಡಿ 3.10 ಎಕರೆಯಲ್ಲಿ ರೇಷ್ಮೇ ಮರಕ‌ಡ್ಡಿ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಕಳೆದ 1 ವರ್ಷದಿಂದ ಬೈವೋಲ್ಟಿನ್‌ ಗೂಡು ಉತ್ಪಾದಿಸಲಾಗುತ್ತಿದೆ. ಕಳೆದ 5 ವರ್ಷಗಳಿಂದ ಕೃಷಿ ಹೊಂಡದಲ್ಲಿ ಶೇಖರಣೆ ಆಗುವ 10 ಲಕ್ಷ ಲೀಟರ್‌ ನೀರು ಬೆಳೆಗೆ ಸಹಕಾರಿ ಆಗಿದೆ.

450 ಅಡಿ ಕೊಳವೆ ಭಾವಿ ಕೊರೆಸಿದಾಗ ನೀರು ಇದ್ದು, ನಂತರ ಕೆಲವೇ ತಿಂಗಳಿನಲ್ಲಿ ಅಂರ್ತಜಲ ಬತ್ತಿ ಹೋಗಿದು, ಈಗಿರುವ ಕೃಷಿ ಹೊಂಡವನ್ನು ವಿಸ್ತರಿಸಿ ಒಂದು ಕೋಟಿ ಲೀಟರ್‌ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಲು ಚಿಂತಿಸುತ್ತಿದ್ದೇನೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ವೇಳೆಯಲ್ಲಿ ತಾಲೂಕು ರೇಷ್ಮೇ ಇಲಾಖೆ ಸಹಾಯಕ ನಿರ್ದೇಶಕಿ ಗಾಯಿತ್ರೀ, ವಲಯ ಅಧಿಕಾರಿ ಮುನಿರಾಜು ಮತ್ತಿತರರು ಇದ್ದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.