ಬಾಲ್ಯಕಾಲದ ಬೊಜ್ಜು

ಪ್ರಮುಖವಾದ ಸಮಸ್ಯೆ ಆದರೆ ನಿರ್ಲಕ್ಷಿಸಲಾಗಿದೆ

Team Udayavani, Oct 6, 2019, 5:08 AM IST

bojju

“ಮಗು ದಪ್ಪವಾಗಿದೆ, ದೊಡ್ಡವರಾದಾಗ ಸರಿ ಹೋಗುತ್ತದೆ’ – ತಮ್ಮ ಮಕ್ಕಳು ಅಧಿಕ ದೇಹತೂಕ ಬೆಳೆಸಿಕೊಂಡಾಗ ಹೆತ್ತವರು ಸಾಮಾನ್ಯವಾಗಿ ಹೇಳುವುದಾಗಿದೆ. ಆದರೆ ಈ ತಪ್ಪು ಕಲ್ಪನೆಯು ಮಕ್ಕಳಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷಿತವಾಗಿರುವ ಗಂಭೀರ ಆರೋಗ್ಯ ಸಮಸ್ಯೆಯೊಂದಕ್ಕೆ ಕಾರಣವಾಗಬಲ್ಲುದು – ಅದುವೇ ಬಾಲ್ಯದ ಬೊಜ್ಜು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2016ರಲ್ಲಿ 0ಯಿಂದ 5 ವರ್ಷ ವಯೋಮಾನದ ಅಂದಾಜು 41 ಮಿಲಿಯ ಮಕ್ಕಳು ಅಧಿಕ ದೇಹತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರು. ಬೊಜ್ಜು ಕಾಣಿಸಿಕೊಳ್ಳುವ ಪ್ರಮಾಣವು ಈಗ 1975ಕ್ಕಿಂತ ಮೂರು ಪಟ್ಟು ಹೆಚ್ಚಿದೆ! ಈ ಭಾರೀ ಹೆಚ್ಚಳವು ಅನೇಕ ಕಾರಣಗಳಿಂದ ಆಗಿರಬಹುದು. ಆದರೆ ಪ್ರಧಾನವಾದ ಒಂದು ಕಾರಣ ಎಂದರೆ, ಬಾಲ್ಯಕಾಲದಲ್ಲಿ ಬೊಜ್ಜು ಹೊಂದಿರುವ ಮಕ್ಕಳು ಬೊಜ್ಜು ಹೊಂದಿರುವ ಪ್ರೌಢರಾಗಿ ಬೆಳೆಯುವ ಸಾಧ್ಯತೆಯೇ ಹೆಚ್ಚು.

ಅನುವಂಶವಾಹಿ ಪ್ರಭಾವದಿಂದ ಬೊಜ್ಜು ಉಂಟಾಗುತ್ತದೆ ಎಂಬುದು ನಿಜವಾದರೂ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ ಸೇವಿಸುವ ಆಹಾರ ಹೆಚ್ಚಿದಾಗ ಬೊಜ್ಜು ಸಂಗ್ರಹವಾಗುತ್ತದೆ. ಓಡುವುದು, ಸ್ಕಿಪ್ಪಿಂಗ್‌, ಸೈಕ್ಲಿಂಗ್‌ ಮತ್ತು ಹೊರಾಂಗಣ ಆಟಗಳಲ್ಲಿ ತೊಡಗಿಕೊಳ್ಳುವ ಮಕ್ಕಳು ಈಗ ಸತತವಾಗಿ ಮೊಬೈಲ್‌ ಇತ್ಯಾದಿ ಗ್ಯಾಜೆಟ್‌ಗಳ ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿ ದೇಹದಲ್ಲಿ ಕ್ಯಾಲೊರಿಗಳು ದಹನವಾಗುವುದು ಕಡಿಮೆಯಾಗುತ್ತದೆ. ಹೆತ್ತವರು ತಮ್ಮ ಮಕ್ಕಳ ತುಂಟತನವನ್ನು ಕಡಿಮೆ ಮಾಡಲು ಮೊಬೈಲ್‌ ಫೋನ್‌ ಇತ್ಯಾದಿಗಳನ್ನು ಮಕ್ಕಳ ಕೈಗೆ ನೀಡುವ ಮೂಲಕ ತಮಗರಿವಿಲ್ಲದಂತೆಯೇ ಅನಾರೋಗ್ಯಕರ ಚಾಲಿ ಬೆಳೆದುಬರಲು ಪ್ರೋತ್ಸಾಹಿಸುತ್ತಿದ್ದಾರೆ. ಆಹಾರಾಭ್ಯಾಸದಲ್ಲೂ ಅನಾರೋಗ್ಯಕರ ಬದಲಾವಣೆಗಳು ಆಗಿವೆ. ಮಕ್ಕಳು ಮತ್ತು ಹದಿಹರಯದವರು ಆರೋಗ್ಯಕರ ಮತ್ತು ಪುಷ್ಟಿಯುತವಾದ ಹಣ್ಣುಹಂಪಲು ಅಥವಾ ಉಪಾಹಾರದ ಬದಲು ಬರ್ಗರ್‌ ಅಥವಾ ಪಿಜಾlವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದು ಸಹಜವಾಗಿಯೇ ಹೆಚ್ಚು ಕ್ಯಾಲೊರಿಯುಳ್ಳ ಆಹಾರವಾಗಿದೆ. ಹೆಚ್ಚು ಕ್ಯಾಲೊರಿ ಸೇವನೆ ಮತ್ತು ಶಕ್ತಿ ಖರ್ಚಾಗುವುದು ಕಡಿಮೆಯಾಗಿರುವುದರಿಂದ ಅಸಮತೋಲನ ಉಂಟಾಗುತ್ತದೆ. ಈ ಅಸಮತೋಲನವು ದೀರ್ಘ‌ಕಾಲ ಹಾಗೆಯೇ ಉಳಿದರೆ ಕ್ರಮೇಣವಾಗಿ ಬೊಜ್ಜು ಉಂಟಾಗುತ್ತದೆ.

ಬೊಜ್ಜು ಹೊಂದಿರುವ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಹೃದ್ರೋಗಗಳಂತಹ ಕಾಯಿಲೆಗಳು ಮತ್ತು ಜೀವನಶೈಲಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಆತಂಕ, ಖನ್ನತೆ, ಉದ್ವಿಗ್ನತೆ ಮತ್ತು ಆತ್ಮವಿಶ್ವಾಸ ಕುಸಿತದಂತಹ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ಇವು ಸಾಮಾಜಿಕ ಸಹಭಾಗಿತ್ವದ (Social Participation), ಒಳಗೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಮಕ್ಕಳು ಅಸ್ತಮಾದಂತಹ ಉಸಿರಾಟ ಸಮಸ್ಯೆ, ನಿದ್ರಾಹೀನತೆ, ಉಸಿರುಗಟ್ಟುವಿಕೆ ತೊಂದರೆಗಳಿಂದಲೂ ಬಳಲುವ ಸಾಧ್ಯತೆಯಿದೆ.

ಆದರೆ ನೋಡಲು ದಪ್ಪವಾಗಿರುವ ಮಕ್ಕಳೆಲ್ಲರೂ ಅಧಿಕ ದೇಹ ತೂಕ ಅಥವಾ ಬೊಜ್ಜನ್ನು ಹೊಂದಿರಲಾರರು. ಹಾಗಾದರೆ ನಿಮ್ಮ ಮಗು ಬೊಜ್ಜು ಹೊಂದಿದೆಯೇ ಇಲ್ಲವೇ ಎಂದು ತಿಳಿಯುವುದು ಹೇಗೆ? ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ದೇಹತೂಕವನ್ನು ಬಿಎಂಐ (ಬಾಡಿ ಮಾಸ್‌ ಇಂಡೆಕ್ಸ್‌ – ದೇಹಪರಿಮಾಣ ಸೂಚ್ಯಂಕ)ನ ಮೂಲಕ ವ್ಯಾಖ್ಯಾನಿಸುತ್ತದೆ. ಇದು ವ್ಯಕ್ತಿಯ ದೇಹತೂಕ (ಕಿಲೊಗ್ರಾಮ್‌ಗಳಲ್ಲಿ) ವನ್ನು ಆತ/ಆಕೆಯ ಎತ್ತರ (ಮೀಟರ್‌ಗಳಲ್ಲಿ) ವಿಭಾಗಿಸಿ ದೊರೆಯುವ ಮೊತ್ತ. 30 ಅಥವಾ ಅದಕ್ಕಿಂತ ಹೆಚ್ಚು ಅಂಕವನ್ನು ಬೊಜ್ಜು ಎಂದು ಪರಿಗಣಿಸಲಾಗಿದೆ. ಆನ್‌ಲೈನ್‌ನಲ್ಲಿ ಈಗ ಬಿಎಂಐ ಕ್ಯಾಲ್ಕುಲೇಟರ್‌ಗಳು ಲಭ್ಯವಿದ್ದು, ನಮ್ಮ ನಮ್ಮ ಬಿಎಂಐಯನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.

ಅಕ್ಟೋಬರ್‌ 11ನ್ನು ಪ್ರತಿವರ್ಷ ಜಾಗತಿಕ ಬೊಜ್ಜು ದಿನವನ್ನಾಗಿ ಗುರುತಿಸಿ ಆಚರಿಸಲಾಗುತ್ತದೆ. ಬೊಜ್ಜು ಮತ್ತು ಅಧಿಕ ದೇಹತೂಕ ಎಂಬ ನಿರ್ಲಕ್ಷಿತ ಅನಾರೋಗ್ಯಕರ ದೇಹಸ್ಥಿತಿಯ ಬಗ್ಗೆ ಅರಿವು ಬೆಳೆಸಿಕೊಳ್ಳಲು ಇದು ಸುಸಂದರ್ಭ. ಆಕ್ಯುಪೇಶನಲ್‌ ಥೆರಪಿಯ ದೃಷ್ಟಿಕೋನದಿಂದ ಹೇಳುವುದಾದರೆ, ಆರೋಗ್ಯಕರ ಜೀವನಶೈಲಿಯನ್ನು ಸಾಧಿಸುವುದಕ್ಕೆ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಸಮತೋಲನವನ್ನು ಕಾಪಾಡಿಕೊಳ್ಳುವುದು ಒಳಿತು.

ಆದ್ದರಿಂದ ಇಂದಿನಿಂದಲೇ ಮನೆಯ ಎಲ್ಲರೂ ಒಟ್ಟಾಗಿ ವಾಕಿಂಗ್‌ ಹೋಗುವಂತಹ ಸರಳ ವ್ಯಾಯಾಮ, ದೈಹಿಕ ಚಟುವಟಿಕೆಗಳನ್ನು ದಿನವೂ ಅನುಸರಿಸಲು ಆರಂಭಿಸಿ. ನಿಮ್ಮ ಮಕ್ಕಳು ಮನೆಯ ಹತ್ತಿರದ ಪಾರ್ಕ್‌ ಅಥವಾ ಅಂಗಣದಲ್ಲಿ ದಿನವೂ ಕೊಂಚ ಹೊತ್ತು ಬೆವರಿಳಿಯುವಂತೆ ಆಟವಾಡಲಿ.

ಮಕ್ಕಳು ಶಾಲಾ ಸಮಯದ ಬಳಿಕ ಆಟೋಟ, ನೃತ್ಯದಂತಹ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸಿ. ಇದರಿಂದ ಅವರ ದೈಹಿಕ ಚಟುವಟಿಕೆ ಮಾತ್ರವಲ್ಲದೆ ಸಾಮಾಜಿಕ ಸಂವಹನವೂ ಉತ್ತಮಗೊಳ್ಳುತ್ತದೆ. ಟಿವಿ ಮತ್ತು ಮೊಬೈಲ್‌ ಫೋನ್‌ನಂತಹ ಗ್ಯಾಜೆಟ್‌ಗಳ ಮುಂದೆ ಕಳೆಯುವ ಸಮಯ ದಿನಕ್ಕೆ ಒಂದೆರಡು ತಾಸುಗಳಿಗೆ ಮಿತಿಗೊಳ್ಳಲಿ. ಏನನ್ನು ತಿನ್ನಬೇಕು ಎಂಬ ಆಯ್ಕೆ ಎದುರಾದಾಗ ಆರೋಗ್ಯಕರವಾದವುಗಳನ್ನೇ ಆರಿಸಿಕೊಳ್ಳುವ ವಿವೇಕವನ್ನು ಮಕ್ಕಳಿಗೆ ಕಲಿಸಿಕೊಡಿ. ದೈನಿಕ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಹಂಪಲು ಮತ್ತು ತರಕಾರಿಗಳಿರಲಿ. ಪ್ರತಿದಿನವೂ ನಿಮ್ಮ ಮಗು ಅಗತ್ಯವಿದ್ದಷ್ಟು ಹೊತ್ತು ಚೆನ್ನಾಗಿ ನಿದ್ದೆ ಮಾಡಲಿ. ಈ ಸಮತೋಲನದಿಂದ ಆರೋಗ್ಯಕರ ಜೀವನ ಸಾಧ್ಯವಾಗುತ್ತದೆ. ಇದುವೇ ಆಕ್ಯುಪೇಶನಲ್‌ ಥೆರಪಿ ಎಂಬ ವೈದ್ಯಕೀಯ ವಿಭಾಗದ ಉದ್ದೇಶ ಮತ್ತು ಗುರಿಯಾಗಿದೆ. ಆದ್ದರಿಂದ ಯಾವುದೇ ಸಂಶಯಗಳು ಎದುರಾದಾಗ ನಿಮ್ಮ ಸನಿಹದ ಆಕ್ಯುಪೇಶನಲ್‌ ಥೆರಪಿಸ್ಟ್‌ ಬಳಿ ಸಲಹೆ ಪಡೆಯಿರಿ. ನಿಮ್ಮ ಮಕ್ಕಳು, ಅವರ ಮಕ್ಕಳು ಮತ್ತು ಭವಿಷ್ಯದ ಜನಾಂಗ ಆರೋಗ್ಯಕರ ಭವಿಷ್ಯವನ್ನು ಹೊಂದಲಿ.

– ಸುಝಾನಾ ರೂಪಾಲ್‌ ಗೆರಾರ್ಡ್‌,
ಅಂತಿಮ ವರ್ಷದ ಬಿಒಟಿ ವಿದ್ಯಾರ್ಥಿನಿ

– ಗುರುಪ್ರಸಾದ್‌ ವಿ.,
ಸಹಾಯಕ ಪ್ರಾಧ್ಯಾಪಕರು, ಆಕ್ಯುಪೇಶನಲ್‌ ಥೆರಪಿ ವಿಭಾಗ, ಎಂಸಿಎಚ್‌ಪಿ

ಟಾಪ್ ನ್ಯೂಸ್

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.