ಪ್ಲೇ ಆಫ್ಗೆ ನೆಗೆದ ಯುಪಿ ಯೋಧಾ
Team Udayavani, Oct 6, 2019, 6:19 AM IST
ಗ್ರೇಟರ್ ನೊಯ್ಡಾ (ಯುಪಿ): ಪ್ರೊ ಕಬಡ್ಡಿ ಏಳನೇ ಆವೃತ್ತಿ ಗ್ರೇಟರ್ ನೊಯ್ಡಾ ಚರಣದ ಮೊದಲ ದಿನದ ಪಂದ್ಯದಲ್ಲೇ ಆತಿಥೇಯ ಯುಪಿ ಯೋಧಾ ಜಯಭೇರಿ ಮೊಳಗಿಸಿ ಪ್ಲೇ ಆಫ್ಗೆ ನೆಗೆಯಿತು. ಶನಿವಾರದ ಮುಖಾಮುಖೀಯಲ್ಲಿ ಯೋಧಾ ಅಗ್ರಸ್ಥಾನಿ ದಬಾಂಗ್ ಡೆಲ್ಲಿಗೆ 50-33 ಅಂತರದ ಸೋಲುಣಿಸಿತು. ಇದರೊಂದಿಗೆ ಪ್ಲೇ ಆಫ್ ಕನಸು ಕಾಣುತ್ತಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ಕೂಟದಿಂದ ಹೊರಬಿತ್ತು.
ದಿನದ ದ್ವಿತೀಯ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 39-33 ಅಂತರದಿಂದ ಗುಜರಾತ್ ಫಾರ್ಚೂನ್‌ಜೈಂಟ್ಸ್‌ಗೆ ಸೋಲುಣಿಸಿತು.
ಮೋನು ಮ್ಯಾಜಿಕ್
ಈಗಾಗಲೇ 5 ತಂಡಗಳು ಪ್ಲೇ ಆಫ್ಗೇರಿದ್ದವು. ಅಂತಿಮ ಸ್ಥಾನಕ್ಕಾಗಿ ಯುಪಿ ಯೋಧಾ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಯುಪಿಗೆ ಒಂದು ಗೆಲುವು ಸಾಧಿಸಿದರೆ ಸಾಕಿತ್ತು. ಅದರಂತೆ ಯುಪಿ ತವರಿನ ನೆಲದ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿ ಅರ್ಹವಾಗಿ 6ನೇ ತಂಡವಾಗಿ ಪ್ಲೇ ಆಫ್ಗೆ ನೆಗೆಯಿತು.
ಯುಪಿ ಗೆಲುವಿನಲ್ಲಿ ರೈಡರ್ ಮೋನು ಗೋಯತ್ (11 ರೈಡಿಂಗ್ ಅಂಕ), ಶ್ರೀಕಾಂತ್ ಯಾದವ್ (9 ರೈಡಿಂಗ್ ಅಂಕ) ಮಿಂಚಿದರೆ, ನಿತೇಶ್ ಕುಮಾರ್ (6 ಟ್ಯಾಕಲ್ ಅಂಕ), ಸುಮಿತ್ (5 ಟ್ಯಾಕಲ್ ಅಂಕ) ಅಮೋಘ ಪ್ರದರ್ಶನ ನೀಡಿದರು.
ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದ್ದರಿಂದ ಡೆಲ್ಲಿ ಈ ಪಂದ್ಯದಲ್ಲಿ ಮೀಸಲು ಆಟಗಾರರನ್ನು ಕಣಕ್ಕಿಳಿಸಿತು. ಇದು ದುಬಾರಿಯಾಗಿ ಪರಿಣ ಮಿಸಿತು. ನೀರಜ್ ನರ್ವಾಲ್ (11 ರೈಡಿಂಗ್ ಅಂಕ), ಸೋಮ್‌ಬೀರ್ (9 ಟ್ಯಾಕಲ್ ಅಂಕ) ಹಾಗೂ ಮಿರಾಜ್ ಶೇಖ್ (7 ಅಂಕ) ಸಾಧಾರಣ ಆಟವನ್ನಷ್ಟೇ ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.