ಸಚಿವರಿಂದ ಸೂಕ್ತ ಅಭಿವೃದ್ಧಿ ಕ್ರಮ: ನಳಿನ್
ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ
Team Udayavani, Oct 7, 2019, 5:55 AM IST
ಮಂಗಳೂರು: ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ತನಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಅವರು ರವಿವಾರ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣದಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಕೋಟ ಶ್ರೀನಿವಾಸ ಪೂಜಾರಿ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದು, ಅವರ ನೇತೃತ್ವದಲ್ಲಿ ಜಿಲ್ಲೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಪ್ರತಿ ಸೋಮವಾರ ಕಚೇರಿಯಲ್ಲಿ ಲಭ್ಯ
ತಾನು ಈ ಕಚೇರಿಯಲ್ಲಿ ಪ್ರತಿ ಸೋಮವಾರ ಸಾರ್ವಜನಿಕರಿಗೆ ಲಭ್ಯವಿರುತ್ತೇನೆ. ಕಚೇರಿಗೆ ಅನುಭವೀ ಅಧಿಕಾರಿಗಳನ್ನು ನೇಮಿಸಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಮತ್ತು ಅಭಿವೃದ್ಧಿ ಯೋಜನೆಗಳ ವೇಗ ವರ್ಧಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶಾಸಕರಾದ ಸಂಜೀವ ಮಠಂದೂರು ಮತ್ತು ಉಮಾನಾಥ ಕೋಟ್ಯಾನ್, ಜಿ.ಪಂ. ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕೃಷ್ಣ ಜೆ. ಪಾಲೆಮಾರ್, ಮೋನಪ್ಪ ಭಂಡಾರಿ, ಬಿಜೆಪಿ ನಾಯಕರಾದ ಉದಯ ಕುಮಾರ್ ಶೆಟ್ಟಿ, ರವಿಶಂಕರ ಮಿಜಾರು, ಯಶ್‌ಪಾಲ್ ಸುವರ್ಣ, ಅನ್ವರ್ ಮಾಣಿಪ್ಪಾಡಿ, ಹರಿಕೃಷ್ಣ ಬಂಟ್ವಾಳ, ಸುಲೋಚನಾ ಭಟ್ ಉಪಸ್ಥಿತರಿದ್ದರು.
ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ 1,200 ಕೋಟಿ ರೂ. ಮಧ್ಯಂತರ
ನೆರವು ಬಿಡುಗಡೆ ಮಾಡಿದೆ. ಪೂರ್ಣ ಪ್ರಮಾಣದ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಆದರೆ ರಾಜ್ಯ ಬಿಜೆಪಿ ಸರಕಾರದ ವಿರುದ್ಧ
ಏನೂ ಕಾರಣ ಸಿಗದೆ ವಿಪಕ್ಷಗಳು ಬಿಡುಗಡೆ ಆಗಿರುವ ಮೊತ್ತದ ಕುರಿತು ಆರೋಪ ಮಾಡುತ್ತಿವೆ ಎಂದರು.
ಆರೋಪ ಮಾಡುತ್ತಿರುವವರು ಮಾಜಿ ಮುಖ್ಯಮಂತ್ರಿಗಳು. ಅವರಿಗೆ ಈ ಹಿಂದೆ ಸರಕಾರ ನಡೆಸಿ ಗೊತ್ತಿದೆ. ಆಗಲೂ ನೆರೆ, ಬರ ಬಂದಿತ್ತು. ಆಗ ಅವರದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ಎಷ್ಟು ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದ್ದಾರೆ? ಹಾಗೆ ನೋಡಿದರೆ, ಈಗಿನ ವಿಪಕ್ಷಗಳು ಆಡಳಿತದಲ್ಲಿದ್ದಾಗ ರಾಜ್ಯವನ್ನು ಲೂಟಿ ಮಾಡಿದ್ದೇ ಹೆಚ್ಚು. ಆ ಮೊತ್ತವನ್ನು ನೈಸರ್ಗಿಕ ವಿಕೋಪ ಪರಿಹಾರಕ್ಕೆ ನೀಡಿದರೂ ಸಾಕಾಗುತ್ತಿತ್ತು ಎಂದು ನಳಿನ್ ವ್ಯಂಗ್ಯವಾಡಿದರು.
ನೆರೆ ಪರಿಹಾರ: ವಿಪಕ್ಷ ಟೀಕೆಗೆ ತಿರುಗೇಟು
2004ರಿಂದ 2014ರ ವರೆಗೆ ಮತ್ತು ಆ ಬಳಿಕ 2014ರಿಂದ 2019ರ ಅವ ಧಿ
ಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಲಭಿಸಿದ ಪ್ರಕೃತಿ ವಿಕೋಪ ಪರಿಹಾರ ಮೊತ್ತ ಎಷ್ಟೆಷ್ಟು ಎಂಬುದನ್ನು ವಿಪಕ್ಷಗಳು ತುಲನೆ ಮಾಡಿ ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.