“ಕನ್ಯೆ” ಪದ ಬದಲಾಯಿಸಿ… ಹೋರಾಟಗಾರರ ಬೇಡಿಕೆಗೆ ಬಾಂಗ್ಲಾ ಕೋರ್ಟ್ ಮನ್ನಣೆ
ಮಹತ್ತರ ತೀರ್ಪು ನೀಡಿದ ಬಾಂಗ್ಲಾ ನ್ಯಾಯಾಲಯ
Team Udayavani, Oct 9, 2019, 8:15 PM IST
ಢಾಕ: ಕನ್ಯೆ ಎಂಬ ಪದವನ್ನು ಬಾಂಗ್ಲಾದೇಶದ ಮುಸ್ಲಿಂ ವಿವಾಹ ಪ್ರಮಾಣಪತ್ರಗಳಿಂದ ತೆಗೆದುಹಾಕಬೇಕೆಂದು ಸ್ತ್ರೀ ಪರ ಹೋರಾಟಗಾರರು ಸಲ್ಲಿಸಿರುವ ಮೇಲ್ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಮಹತ್ತರವಾದ ತೀರ್ಪು ನೀಡಿದೆ. ಪ್ರಮಾಣ ಪತ್ರದಲ್ಲಿ ಕನ್ಯೆ ಎಂಬ ಪದದ ಬದಲು ಪರ್ಯಾಯ ಪದವನ್ನು ಸೂಚಿಸಿದೆ.
ದಕ್ಷಿಣ ಏಷ್ಯಾದ ಮುಸ್ಲಿಂ ವಿವಾಹ ಕಾನೂನುಗಳ ಪ್ರಕಾರ, ವಧುವನ್ನು ಆಯ್ಕೆ ಮಾಡುವಾಗ ಮೂರು ಆಯ್ಕೆಗಳನ್ನು ಅನುಸರಿಸಲಾಗುತ್ತದೆ. ಕುಮಾರಿ, ವಿಧವೆ ಹಾಗೂ ವಿಚ್ಚೇದಿತೆ ಎಂಬ ವಿಗಂಡನೆಗಳ ಆಧಾರದ ಮೇಲೆ ವಧುವನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕುಮಾರಿ ಅವಿವಾಹಿತೆ ಎಂದು ಸೂಚಿಸಿದ್ದರು, ಆದರೆ ವಿಸ್ತರಣೆ ರೂಪ ಕನ್ಯೆ ಎಂಬುದಾಗಿದೆ ಅಲ್ಲದೇ ಈ ಪದ ಬಳಕೆಯಿಂದ ಅವಳ ಅಸ್ತಿತ್ವವನ್ನು ಪ್ರಶ್ನಿಸಿದಂತೆ ಆಗುತ್ತದೆ ಎಂಬುದು ಹೋರಾಟಗಾರರ ವಾದವಾಗಿತ್ತು.
ಭಾನುವಾರ ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿರುವ ನ್ಯಾಯಾಲಯ ಮುಂದಿನ ದಿನಗಳಲ್ಲಿ ಈ ಪದ ಬಳಕೆಯನ್ನು ನಿಷೇಧ ಮಾಡುವುದಾಗಿ ಹೇಳಿದ್ದು, ಪರ್ಯಾಯ ಪದವಾಗಿ ಒಬಿಬಾಹಿತೊ ಎಂದು ಬದಲಾಯಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ನ್ಯಾಯಾಲಯ ತನ್ನ ಸಂಕ್ಷಿಪ್ತ ತೀರ್ಪಿನಲ್ಲಿ ಈ ಪದದ ವಿವರಣೆ ನೀಡಿದ್ದು, ಅದು ಹುಡುಗಿ ಅಥವಾ ಅವಿವಾಹಿತ ಎಂದು ನಿರ್ದಿಷ್ಟ ಅರ್ಥವನ್ನು ಸೂಚಿಸುತ್ತದೆ ಎಂದು ತಿಳಿಸಿದೆ.
ಈ ಪ್ರಕರಣ ಕುರಿತಾಗಿ ಸಂಪೂರ್ಣ ತೀರ್ಪನ್ನು ಅಕ್ಟೋಬರ್ ಅಂತ್ಯಕ್ಕೆ ನೀಡುವುದಾಗಿ ನ್ಯಾಯಾಲಯ ತಿಳಿಸಿದ್ದು, ಪ್ರಮಾಣಪತ್ರದಲ್ಲಿನ ಬದಲಾವಣೆಯನ್ನು ಅಂದಿನಿಂದ ಜಾರಿಯಾಗುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.