ಸ್ಟಾರ್ಸ್ ಇಲ್ಲ ದೇವ್ರೆ ಎಲ್ಲಾ

ಪ್ರೇಕ್ಷಕ ದೇವರು ಬೇಕಾಗಿದ್ದಾರೆ...

Team Udayavani, Oct 11, 2019, 5:56 AM IST

u-28

ಈ ವಾರ ಬಿಡುಗಡೆಯಾಗುತ್ತಿರುವ ಮೂರು ಸಿನಿಮಾಗಳು ತಮ್ಮ ತಮ್ಮ ಕಂಟೆಂಟ್‌ ಮೂಲಕ ಭರವಸೆ ಮೂಡಿಸಿವೆ. ಆದರೆ, ಆ ತಂಡದಲ್ಲಿ ಯಾರೊಬ್ಬರು ಸ್ಟಾರ್ ಇಲ್ಲ. ಸ್ಟಾರ್ ಇಲ್ಲದಿದ್ದರೆ ಸಿನಿಮಾ ಓಪನಿಂಗ್‌ ತೆಗೆದುಕೊಳ್ಳುವುದಿಲ್ಲ ಮತ್ತು
ಚಿತ್ರರಂಗದ ಕಮರ್ಷಿಯಲ್‌ ಲೆಕ್ಕಾಚಾರಗಳಿಂದ ದೂರವೇ ಉಳಿದು ಬಿಡುತ್ತದೆ. ಈಗ ಮೂರೂ ತಂಡಕ್ಕೂ ಈ ಭಯ ಕಾಡುತ್ತಿರೋದು ಸುಳ್ಳಲ್ಲ. ಅದೇ ಕಾರಣದಿಂದ ಅವರಿಗೆ ಈಗ ಪ್ರೇಕ್ಷಕರೇ ದೇವರು.

“ನಮ್ಮಲ್ಲಿ ಯಾರೂ ಸ್ಟಾರ್ ಇಲ್ಲ. ಬಾಯಿ ಮಾತಿನ ಮೂಲಕವೇ ಸಿನಿಮಾ ಪ್ರಚಾರವಾಗಬೇಕು …’ ಹೀಗೆ ಸಂಕೋಚದಿಂದಲೇ ಹೇಳಿಕೊಂಡರು ಯುವ ನಿರ್ದೇಶಕ ಚೇತನ್‌ ಕುಮಾರ್‌. ಇದೇ ಮಾತನ್ನು “ಲುಂಗಿ’ ಚಿತ್ರತಂಡ ಕೂಡಾ ಹೇಳಿತ್ತು. ಈ ವಾರ ಸಂಪೂರ್ಣ ಹೊಸಬರೇ ಸೇರಿ ಮಾಡಿರುವ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. “ದೇವರು ಬೇಕಾಗಿದ್ದಾರೆ’, “ಲುಂಗಿ’ ಹಾಗೂ “ವೃತ್ರ’. ವಾರ ವಾರ ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಅದರಲ್ಲೇನು ವಿಶೇಷ ಎಂದು ಕೇಳಬಹುದು. ವಿಶೇಷ ಇರೋದೇ ಅಲ್ಲಿ. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಅಂಶಗಳೊಂದಿಗೆ ಬಿಡುಗಡೆಯಾಗುವ ಹೊಸಬರ ಸಿನಿಮಾಕ್ಕೂ ಬ್ರಿಡ್ಜ್ ಎನಿಸಿಕೊಂಡು ಬಿಡುಗಡೆಯಾಗುತ್ತಿರುವ ಸಿನಿಮಾಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತವೆ. ಈ ವಾರ ಬಿಡುಗಡೆಯಾಗುತ್ತಿರುವ ಮೂರು ಸಿನಿಮಾಗಳು ತಮ್ಮ ತಮ್ಮ ಕಂಟೆಂಟ್‌ ಮೂಲಕ ಭರವಸೆ ಮೂಡಿಸಿವೆ. ಆದರೆ, ಆ ತಂಡದಲ್ಲಿ ಯಾರೊಬ್ಬರು ಸ್ಟಾರ್ ಇಲ್ಲ. ಸ್ಟಾರ್ ಇಲ್ಲದಿದ್ದರೆ ಸಿನಿಮಾ ಓಪನಿಂಗ್‌ ತೆಗೆದುಕೊಳ್ಳುವುದಿಲ್ಲ ಮತ್ತು ಚಿತ್ರರಂಗದ ಕಮರ್ಷಿಯಲ್‌ ಲೆಕ್ಕಾಚಾರಗಳಿಂದ ದೂರವೇ ಉಳಿದು ಬಿಡುತ್ತದೆ. ಈಗ ಮೂರೂ ತಂಡಕ್ಕೂ ಈ ಭಯ ಕಾಡುತ್ತಿರೋದು ಸುಳ್ಳಲ್ಲ. ಅದೇ ಕಾರಣದಿಂದ ಅವರಿಗೆ ಈಗ ಪ್ರೇಕ್ಷಕರೇ ದೇವರು.

ಹೊಸಬರಾದರೂ ಒಂದು ಕಮರ್ಷಿಯಲ್‌ ಸಿನಿಮಾ ಮಾಡಿ, ಹಾಡು, ಫೈಟ್‌, ಕಲರ್‌ಫ‌ುಲ್‌ ಲೊಕೇಶನ್‌ ಮೂಲಕ ಸಿನಿಮಾ ಬಿಡುಗಡೆ ಮುಂಚೆ ಪ್ರೇಕ್ಷಕರ ಗಮನ ಸೆಳೆಯೋದು ಸುಲಭ. ಆದರೆ, ಕಂಟೆಂಟ್‌ ಸಿನಿಮಾಗಳ ಸಮಸ್ಯೆಯೇ ಅದು. ಏನು ಹೇಳಬೇಕು ಮತ್ತು ಎಷ್ಟು ಹೇಳಬೇಕು ಎಂಬ ಪ್ರಶ್ನೆ ಅವರಿಗೆ ಕಾಡುತ್ತಿರುತ್ತದೆ. ಟ್ರೇಲರ್‌ ಸ್ವಲ್ಪ ದೀರ್ಘ‌ವಾದರೂ ಕಂಟೆಂಟ್‌ ರಿವೀಲ್‌ ಆಗುವ ಭಯದ ಜೊತೆಗೆ ಜನ ರಿಜೆಕ್ಟ್ ಲಿಸ್ಟ್‌ಗೆ ಮೊದಲೇ ಹಾಕಿಬಿಟ್ಟರೆ ಎಂಬ ಟೆನ್ಸ್ ನ್‌. ಇಂತಹ ಗೊಂದಲ, ಟೆನ್ಸ್ ನ್‌ಗಳ ನಡುವೆಯೇ ಸಂಪೂರ್ಣ ಹೊಸಬರ ಮೂರು ಚಿತ್ರಗಳು ಟ್ರೇಲರ್‌, ಪೋಸ್ಟರ್‌ ಮೂಲಕ ಗಮನ ಸೆಳೆದು ಈ ವಾರ ತೆರೆ ಕಾಣುತ್ತಿವೆ. ಚೇತನ್‌ ಕುಮಾರ್‌ ನಿರ್ದೇಶನದ “ದೇವರು ಬೇಕಾಗಿದ್ದಾರೆ’ ಚಿತ್ರದ ಟ್ರೇಲರ್‌, ಚಿತ್ರದಲ್ಲೊಂದು ಗಟ್ಟಿ ಕಥಾವಸ್ತುವಿರುವ ಸೂಚನೆ ನೀಡಿದೆ. ತನ್ನಿಂದ ದೂರವಾಗಿರುವ ತಂದೆ-ತಾಯಿಯನ್ನು ಮತ್ತೆ ತನಗೆ ಕೊಡಿಸೆಂದು ಕೇಳಲು ದೇವರನ್ನು ಹುಡುಕಿಕೊಂಡು ಹೋಗುವ ಮುಗ್ಧ ಮಗುವಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ಚಿತ್ರದ ಟ್ರೇಲರ್‌ ಹಿಟ್‌ ಆಗಿದೆ. ಚಿತ್ರದ ಕಥೆ ಮಗುವಿನ ಸುತ್ತ ನಡೆಯುತ್ತಾದರೂ ಇದು ಮಕ್ಕಳ ಸಿನಿಮಾವಲ್ಲ. ಒಂದು ಕಂಟೆಂಟ್‌ ಸಿನಿಮಾವನ್ನು ತಕ್ಕಮಟ್ಟಿಗೆ ಕಮರ್ಷಿಯಲ್‌ ಅಂಶಗಳೊಂದಿಗೆ ಕಟ್ಟಿಕೊಟ್ಟ ವಿಶ್ವಾಸ ನಿರ್ದೇಶಕ ಚೇತನ್‌ ಅವರದು. ಚಿತ್ರದಲ್ಲಿ ಕಂಟೆಂಟ್‌ ಬಿಟ್ಟು ಮಿಕ್ಕಂತೆ ಯಾರೂ ಸ್ಟಾರ್ ಇಲ್ಲದಿರುವುದರಿಂದ ಸಿನಿಮಾಕ್ಕೆ ಓಪನಿಂಗ್‌ ಸಿಗುತ್ತೋ ಇಲ್ಲವೋ ಎಂಬ ಭಯ ಒಂದೆಡೆಯಾದರೆ, ಎಷ್ಟೇ ಒಳ್ಳೆಯ ಸಿನಿಮಾವಾದರೂ ಜನ ಬಾರದೇ ಹೋದರೆ ಚಿತ್ರಮಂದಿರದಿಂದ ತೆಗೆದುಹಾಕುತ್ತಾರೆಂಬ ಭಯ ಮತ್ತೂಂದೆಡೆ. ಕನ್ನಡ ಪ್ರೇಕ್ಷಕ ಒಳ್ಳೆಯ ಕಂಟೆಂಟ್‌ ಇರುವ ಸಿನಿಮಾವನ್ನು ಯಾವತ್ತೂ ಕೈ ಬಿಟ್ಟಿಲ್ಲ ಎಂಬ ಸತ್ಯ ಕೂಡಾ ಅವರಿಗೆ ಗೊತ್ತಿದೆ. ಅದೇ ವಿಶ್ವಾಸದೊಂದಿಗೆ ಚಿತ್ರವನ್ನು ಇಂದು ಬಿಡುಗಡೆ ಮಾಡುತ್ತಿದ್ದಾರೆ.

ಇನ್ನು “ವೃತ್ರ’ ಎಂಬ ವಿಭಿನ್ನ ಶೀರ್ಷಿಕೆ ಹೊಂದಿರುವ ಸಿನಿಮಾ ಕೂಡಾ ಇಂದು ಅದೃಷ್ಟ ಪರೀಕ್ಷೆಗಿಳಿದಿದೆ. ಆರಂಭದಲ್ಲಿ ಈ ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದರು. ಆ ನಂತರ ಕಾರಣಾಂತರಗಳಿಂದ ಆ ಚಿತ್ರದಿಂದ ಹೊರಬಂದಿದ್ದು, ಆ ಜಾಗಕ್ಕೆ ನಿತ್ಯಾಶ್ರೀ ಎಂಬ ನವಪ್ರತಿಭೆ ಬಂದು ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ನಾಯಕಿ ಪ್ರಧಾನವಾದ ಈ ಚಿತ್ರ ಕೂಡಾ ಟ್ರೇಲರ್‌, ಪೋಸ್ಟರ್‌ನಿಂದ ಗಮನ ಸೆಳೆದಿದೆ. ಗೌತಮ್‌ ಅಯ್ಯರ್‌ ಚಿತ್ರದ ನಿರ್ದೇಶಕರು. ಕ್ರೈಮ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಸಾಗುವ ಈ ಸಿನಿಮಾ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ವೊಬ್ಬರ ಸುತ್ತ ಸಾಗಲಿದೆ. ತನಗೆ ಸಿಕ್ಕ ಮೊದಲ ಪ್ರಕರಣವನ್ನು ಬಗೆಹರಿಸಲು ಆಕೆ ಯಾರ್ಯಾರನ್ನು ಭೇಟಿಯಾಗುತ್ತಾಳೆ ಮತ್ತು ಆ ಭೇಟಿಯ ನಂತರ ಆಕೆಯ ಜೀವನದಲ್ಲಾಗುವ ಬದಲಾವಣೆ­ಗಳೇನು ಎಂಬ ಅಂಶದೊಂದಿಗೆ ಚಿತ್ರ ಸಾಗಲಿದೆ. ಅಮಾವಾಸ್ಯೆ­ಯಂದು ಆರಂಭವಾಗಿ ಹುಣ್ಣಿಮೆ
ಯಂದು ಚಿತ್ರದ ಕಥೆ ಮುಗಿಯಲಿದೆಯಂತೆ. ಇದು ಕೂಡಾ ಸಂಪೂರ್ಣ ಹೊಸಬರ ತಂಡದ್ದಾಗಿ­ರುವುದರಿಂದ ಜನರ ಪ್ರತಿಕ್ರಿಯೇ ಹೇಗಿರುತ್ತೋ ಕಾದು ನೋಡಬೇಕು.

ಈ ಮೇಲಿನ ಎರಡು ಸಿನಿಮಾಗಳು ಸೀರಿಯಸ್‌ ಕಂಟೆಂಟ್‌ ಮೂಲಕ ಗಮನ ಸೆಳೆದರೆ ಈ ವಾರ ತೆರೆಕಾಣುತ್ತಿರುವ ಮತ್ತೂಂದು ಹೊಸಬರ ಚಿತ್ರ ಒಂದಷ್ಟು ಕಮರ್ಷಿಯಲ್‌ ಹಾಗೂ ಫ‌ನ್ನಿ ಅಂಶಗಳೊಂದಿಗೆ ಕುತೂಹಲ ಮೂಡಿಸಿದೆ. ಅದು “ಲುಂಗಿ’. ಕರಾವಳಿಯ ತಂಡ ಸೇರಿ ಮಾಡಿರುವ ಈ ಚಿತ್ರದ ಟ್ರೇಲರ್‌, ಟೀಸರ್‌ ಗಮನ ಸೆಳೆದಿದೆ. ಈ ಚಿತ್ರದಲ್ಲೂ ಪರಿಚಯಸ್ಥ ಮುಖಗಳಿಲ್ಲ. ಇವರೆಲ್ಲರೂ ನಂಬಿರೋದು ತಮ್ಮ ಕಂಟೆಂಟ್‌ನ°ಷ್ಟೇ. ಬಿ.ಇ ಓದಿದ್ದರೂ, ತಾನು ತನ್ನ ನೆಲದಲ್ಲೇ ಒಂದು ಬಿಝಿನೆಸ್‌ ಮಾಡಬೇಕು ಎಂದು ಹಠ ಹಿಡಿಯುವ ನಾಯಕ ಕೈ ಹಾಕುವ ಬಿಝಿನೆಸ್‌ ಸಿನಿಮಾದ ಹೈಲೈಟ್‌. ಈಗಾಗಲೇ ಚಿತ್ರದ ರೀಮೇಕ್‌ ರೈಟ್ಸ್‌ ತೆಲುಗಿಗೆ ಮಾರಾಟವಾಗಿದೆ. ಹೀಗಾಗಿ ಈ ತಂಡದ ಮೊಗದಲ್ಲಿ ನಗು ಮೂಡಿದೆ. ಆದರೂ ಹೊಸಬರೆಂಬ ಭಯ ಇದ್ದೇ ಇದೆ.
ಎಷ್ಟೇ ಶ್ರಮ ಹಾಕಿ, ಕಷ್ಟಪಟ್ಟು ಸಿನಿಮಾ ಮಾಡಿದರೂ ಅಂತಿಮವಾಗಿ ಆ ಶ್ರಮಕ್ಕೆ ಬೆಲೆ ಬರೋದು ಪ್ರೇಕ್ಷಕ ಕೈ ಹಿಡಿದಾಗ ಮಾತ್ರ ಎಂಬುದು ಆಗಾಗ ಸಾಬೀತಾಗಿದೆ. ಈ ನಿಟ್ಟಿನಲ್ಲಿ  ಪ್ರೇಕ್ಷಕ ಮನಸ್ಸು  ಮಾಡಬೇಕಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.