ಆಪರೇಷನ್ ಗೂಳಿ ಯಶಸ್ವೀ
ಆ್ಯಸಿಡ್ ದಾಳಿಯಿಂದ ಬಸವಳಿದಿದ್ದ ದೇವರ ಎತ್ತು ಸೆರೆ ಹಿಡಿದು ಚಿಕಿತ್ಸೆ ಕೊಡಿಸಿದ ಯುವಕರು
Team Udayavani, Oct 11, 2019, 4:04 PM IST
ಭರಮಸಾಗರ: ಗಾಂಧಿ ಜಯಂತಿಯಂದು ಆ್ಯಸಿಡ್ ದಾಳಿಗೆ ತುತ್ತಾಗಿದ್ದ ದೇವರ ಎತ್ತಿಗೆ ಕೊನೆಗೂ ಚಿಕಿತ್ಸೆ ದೊರೆತಿದೆ. ಮೈಮೇಲೆ ಗಾಯಗಳಾಗಿ ವೇದನೆ ಪಡುತ್ತಾ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ ಗೂಳಿಯನ್ನು ಗ್ರಾಮದ ಯುವಕರು ಶ್ರಮಪಟ್ಟು ಗುರುವಾರ ಹಿಡಿದು ಕಟ್ಟಿ ಹಾಕಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ದೇವರಿಗೆ ಬಿಟ್ಟ ಎತ್ತಿನ ಮೇಲೆ ಅಹಿಂಸಾ ತತ್ವ ಸಾರುವ ಗಾಂಧಿ ಜಯಂತಿಯಂದೇ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಗಂಭೀರವಾಗಿ ಗಾಯಗೊಳಿಸಿದ್ದರು. ಈ ಘಟನೆ ಇಡೀ ಗ್ರಾಮದ ಜನರ ಮನಕಲಕುವಂತೆ ಮಾಡಿತ್ತು.
ಕೆಲವು ಯುವಕರು ಅಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಗೂಳಿ ಯಾರ ಕೈಗೂ ಸಿಗದೆ ಸಿಕ್ಕ ಸಿಕ್ಕಲ್ಲಿ ಅಲೆದಾಟ ನಡೆಸುತ್ತಿತ್ತು. 3-4 ದಿನಗಳ ಕಳೆಯುವ ವೇಳೆಗೆ ಮೈಮೇಲೆ ದೊಡ್ಡ ಗಾಯಗಳಾಗಿ ಹುಳು ಬಿದ್ದಿದ್ದವು. ಗಾಯಗಳಲ್ಲಿನ ಹುಳಗಳ ಕಾಟಕ್ಕೆ
ಗೂಳಿ ನಿಂತಲ್ಲಿ ನಿಲ್ಲದೆ ಯಮಯಾತನೆ ಅನುಭವಿಸುತ್ತಿತ್ತು. ಈ ನಡುವೆ ಹಲವರು ಪಶು ಆಸ್ಪತ್ರೆ ವೈದ್ಯರ ಗಮನ ಸೆಳೆದಿದ್ದರು. ಗೂಳಿಯನ್ನು ಒಂದೆಡೆ ಹಿಡಿದು ಕಟ್ಟಿ ಹಾಕಿದರೆ ಚಿಕಿತ್ಸೆ ನೀಡುವುದಾಗಿ ಪಶು ಆಸ್ಪತ್ರೆಯವರು ತಿಳಿಸಿದ್ದರು. ಘಟನೆ ನಡೆದು ಬರೋಬ್ಬರಿ ಎಂಟು ದಿನಗಳ ಬಳಿಕ ಯುವಕರ ಗುಂಪು, ಗುರುವಾರ
ದೊಡ್ಡಕೆರೆ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದ ಗೂಳಿಯನ್ನು ಸೆರೆ ಹಿಡಿದು ಪಶು ಆಸ್ಪತ್ರೆಗೆ ಕರೆ ತಂದು ಸೂಕ್ತ ಚಿಕಿತ್ಸೆ ಕೊಡಿಸಿತು.
ಗೂಳಿ ಸೆರೆ ಹಿಡಿಯುವ ಕೆಲಸ ಹಾಗೂ ಅದಕ್ಕೆ ಚಿಕಿತ್ಸೆ ದೊರಕಿಸುವಲ್ಲಿ ಶ್ರಮ ವಹಿಸಿದ ಹಿರಿಯ ಪಶು ಚಿಕಿತ್ಸಕರಾದ ಶಿವಗಾ ನಾಯ್ಕ ಮತ್ತು ಗೋವಿಂದರಾಜು ಅವರನ್ನು ಯುವಕತು ಹೂವಿನ ಹಾರ ಹಾಕಿ ಸನ್ಮಾನಿಸಿದರು.
ಕೆ.ಪಿ. ಹರೀಶ್, ಎಚ್.ಎನ್. ಪ್ರವೀಣ್, ಜಿಮ್ ಶ್ರೀನಿವಾಸ್, ಒ. ರುದ್ರೇಶ್, ರಾಜು, ಎನ್.ಕೆ. ಸಂತೋಷ್, ಸೂರಪ್ಪ, ಮಡಿವಾಳ ಚಂದ್ರಪ್ಪ, ಗಜ, ರಾಹುಲ್, ಕಲ್ಕಿ ಮಲ್ಟಿ ಜಿಮ್‌ನ ಯುವಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.