ವಿಧಾನಸಭೆಯಲ್ಲಿ ಸಿದ್ದು,ಬಿಎಸ್‌ವೈ,ಈಶ್ವರಪ್ಪ ವಾಗ್ವಾದ


Team Udayavani, Oct 11, 2019, 6:30 PM IST

100919kpn7556

ವಿಧಾನಸಭೆ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ನಡುವೆ ಭಾಷೆ ಬಳಕೆ ಮತ್ತು ಸಮಯ ಪಾಲನೆ ವಿಚಾರದಲ್ಲಿನ ವಾಗ್ವಾದಕ್ಕೆ ಶುಕ್ರವಾರ ಸದನ ಸಾಕ್ಷಿಯಾಯಿತು.

ಮಾತಿನ ಭರದಲ್ಲಿ ಕೆ.ಎಸ್‌. ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರನ್ನು ಕುರಿತು “ನಿಮ್ಮ ಹಣೆಬರಕ್ಕಿಷ್ಟು ಬೆಂಕಿ ಹಾಕಾ, ದೆಹಲಿಯಲ್ಲಿ ಸೋನಿಯಾಗಾಂಧಿಯವರು ಕಾದು ಕುಳಿತರೂ ಒಳಗೆ ಬಿಟ್ಟುಕೊಳ್ಳಲಿಲ್ಲ, ಬ್ಲಾಕ್‌ವೆುàಲ್‌ ಮಾಡಿ ಪ್ರತಿಪಕ್ಷ ನಾಯಕರಾದಿರಿ ಎಂದು ಕಟುವಾಗಿ ಟೀಕಿಸಿದರು.

ಸಿದ್ದರಾಮಯ್ಯ ಅವರು ಸಹ ಅಷ್ಟೇ ಗಡುಸಾಗಿ, ಎಂಎಲ್‌ಎ ಟಿಕೆಟ್‌ಗಾಗಿ ಗುಲಾಮರಾಗಿದ್ದೀರಿ, ಉಪ ಮುಖ್ಯಮಂತ್ರಿಯಾಗಿದ್ದವರು, ಇದೀಗ ಮಂತ್ರಿಯಾಗಿ ಡಿಮೋಷನ್‌ ಪಡೆದಿದ್ದೀರಿ, ನಾನಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತಿದೆ. ನಿಮ್ಮಿಂದ ನಾನು ನೈತಿಕತೆ ಹೇಳಿಸಿಕೊಳ್ಳಬೇಕಿಲ್ಲ . ನಿಮ್ಮ ಯೋಗ್ಯತೆಗೆ ಪ್ರಧಾನಿ ಭೇಟಿ ಮಾಡಲು ಆಗಲಿಲ್ಲ ಎಂದು ಹರಿಹಾಯ್ದರು.

ಒಂದು ಹಂತದಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಐದು ನಿಮಿಷದಲ್ಲಿ ಪ್ರವಾಹ ಕುರಿತ ಚರ್ಚೆ ಪೂರ್ಣಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಾಕೀತು ಮಾಡಿ ಡೆಡ್‌ಲೈನ್‌ ವಿಧಿಸಿದರು. ಇದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇಲ್ಲ ನಾನು ಮುಗಿಸುವುದಿಲ್ಲ ಎಂದು ತಕರಾರು ತೆಗೆದು ನೀವು ಹೇಳಿದಂತೆ ನಾನು ಕೇಳಲ್ಲ ಎಂದರು.. ಆದರೆ, ಸದನ ನಡೆಸಬೇಕಾದವನು ನಾನು, ನೀವು ಮಾತು ಮುಗಿಸದಿದ್ದರೆ ಬೇರೊಬ್ಬರಿಗೆ ಅವಕಾಶ ಕೊಡುತ್ತೇನೆ ಎಂದು ನಿಷ್ಠುರವಾಗಿಯೇ ಹೇಳಿ ಸಿದ್ದರಾಮಯ್ಯ ಅವರನ್ನು ಸುಮ್ಮನಾಗಿಸಿದರು.

ಸದನದಲ್ಲಿ ಮಾತನಾಡಲು ಅವಕಾಶ ಕೇಳುವುದು ಭಿಕ್ಷೆಯಾ?, ನಾನು ಕೇಳ್ಳೋದಿಲ್ಲರೀ ಎಂದು ಸಿದ್ದರಾಮಯ್ಯ ಗುಡಗಿದಾಗ, ನಾನು ಏನು ಮಾಡಬೇಕು ಎಂದು ನನಗೂ ಗೊತ್ತು, ನಿಯಮ 69 ಪ್ರಕಾರ ಸಮಯ ನಿಗದಿಗೊಳಿಸುವ ಹಕ್ಕು ಸ್ಪೀಕರ್‌ಗೆ ಇದೆ. ನಾನೂ ಸದನ ನಡೆಸಬೇಕಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿರುಗಿಬಿದ್ದರು. ಆಗ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎದ್ದುನಿಂತು, ಭಿಕ್ಷೆ ಎಂಬ ಪದ ಯಾಕೆ ಬಳಸುತ್ತೀರಿ ಎಂದು ಸಿದ್ದರಾಮಯ್ಯ ಅವರನ್ನು ದಬಾಯಿಸಿದರು.

ಏನಾಯ್ತು?
ಪ್ರವಾಹ ಕುರಿತ ಚರ್ಚೆಯಲ್ಲಿ ಸಂದರ್ಭದಲ್ಲಿ ಬೇಗ ಮಾತು ಮುಗಿಸುವಂತೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಿದ್ದರಾಮಯ್ಯ ಅವರಿಗೆ ಸೂಚಿಸಿದರು. ನಾನು ಇನ್ನೂ ಮಾತನಾಡುವುದು ಇದೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ, ಸ್ಪೀಕರ್‌ ಅವರು ನಿನ್ನೆ ನಾಲ್ಕೂವರೆ ಗಂಟೆ, ಇಂದು ಒಂದೂವರೆ ಗಂಟೆ ಮಾತನಾಡಿದ್ದೀರಿ, ದಾಖಲೆ ಮಾಡಲು ಮಾತನಾಡುವುದು ಬೇಡ. ಆದಷ್ಟು ಬೇಗ ಮುಗಿಸಿ ಎಂದು ಹೇಳಿದರು.

ಇದಕ್ಕೆ ಒಪ್ಪದ ಸಿದ್ದರಾಮಯ್ಯ, ನೀವು ಹೇಳಿದಂತೆ ನಾನು ಮಾತು ಮುಗಿಸಲು ಸಾಧ್ಯವಿಲ್ಲ ಎಂದು ಜೋರು ಧ್ವನಿಯಲ್ಲಿ ಹೇಳಿದರು. ಇದಕ್ಕೆ ಸ್ವಲ್ಪ ರಾಂಗ್‌ ಆದ ಸ್ಪೀಕರ್‌ ಅವರು, ನಾನು ಹೇಳಿದಂತೆ ಕೇಳಲೇಬೇಕು, ಇಲ್ಲಿ ಸದನ ನಡೆಸಬೇಕಿದೆ. ಎಲ್ಲರಿಗೂ ಮಾತನಾಡಲು ಅವಕಾಶ ಕೊಡಬೇಕು, ನ್ಯಾಯ ಒದಗಿಸಬೇಕು. ಐದು ನಿಮಿಷದಲ್ಲಿ ಮಾತು ಮುಗಿಸಿದಿದ್ದರೆ ನಾನು ಬೇರೊಬ್ಬರಿಗೆ ಅವಕಾಶ ಕೊಡಬೇಕಾಗುತ್ತದೆ ಎಂದು ನಿಷ್ಠುರವಾಗಿ ತಿಳಿಸಿದರು.

ಇದರಿಂದ ಕೆರಳಿದ ಸಿದ್ದರಾಮಯ್ಯ, ಆಗಲ್ಲಪ್ಪಾ ನೀನು ಹೇಳಿದಂತೆ ಕೇಳಲ್ಲ, ಆಗಲ್ಲ. ನಾನು ಸದನಕ್ಕೆ ಹೊಸಬನಲ್ಲ, 1983 ರಿಂದ ಇದ್ದೇನೆ, ನಿನ್ನೆ ಮೊನ್ನೆ ಬಂದಿಲ್ಲ. ಇಟ್ಸ್‌ ಮೈ ರೈಟ್‌, ಯೂ ಕಾಂಟ್‌ ಕರ್ಬ್ ಎಂದರು. ಆದರೂ ಸ್ಪೀಕರ್‌, ನಿಯಮಾವಳಿ 69 ರ ಪ್ರಕಾರ ಎಷ್ಟು ಕಾಲಾವಕಾಶ ಕೊಡಬೇಕು ಎಂಬುದು, ಮಾತು ನಿಲ್ಲಿಸಿ ಬೇರೊಬ್ಬರಿಗೆ ಅವಕಾಶ ಕೊಡುವುದು ಸ್ಪೀಕರ್‌ಗೆ ಅಧಿಕಾರ ಇದೆ ಎಂದು ಸಮರ್ಥಿಸಿಕೊಂಡರು. ಇದಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸಹ ಧ್ವನಿಗೂಡಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ , ಎಷ್ಟು ಎಂದು ಮಾತನಾಡುವುದು. ಅದಕ್ಕೆ ಒಂದು ಮಿತಿಯಿಲ್ಲವೇ ಎಂದು ಪ್ರಶ್ನಿಸಿದರು.

ಮಾತು ಮುಗಿಸಲು ಡೆಡ್‌ಲೈನ್‌ ನೀಡಿದ ವಿಚಾರ ಸಿದ್ದರಾಮಯ್ಯ ಹಾಗೂ ಸ್ಪೀಕರ್‌ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು. ಸಿದ್ದರಾಮಯ್ಯ ಅವರು, ಮಾತನಾಡಲು ಅವಕಾಶ ಕೇಳುವುದು ಭಿಕ್ಷೆಯಾ ಎಂದು ಗದರಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎದ್ದು ನಿಂತು, ಏನೇನೋ ಭಾಷೆ ಯಾಕೆ ಬಳಕೆ ಮಾಡುತ್ತೀರಿ ಎಂದು ಹೇಳಿದರು.

ಈ ನಡುವೆ, ಖಜಾನೆ ಖಾಲಿ ಅಂತೀರಿ, ನಿಮ್ಮ ಪಕ್ಷದ ಅಧ್ಯಕ್ಷರು ಲೂಟಿಯಾಗಿದೆ ಅಂತಾರೆ. ಖಜಾನೆ ಖಾಲಿ ಎಂದರೆ ಚೀಲ ತೆಗೆದುಕೊಂಡು ಬಂದು ತುಂಬಿಕೊಂಡು ಹೋಗುವುದೇ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ಇದಕ್ಕೆ ನಾನು ಉತ್ತರಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಪ್ರವಾಹ ಸಂತ್ರಸ್ತರಿಗೆ ಹತ್ತು ಸಾವಿರ ರೂ. ಕೊಟ್ಟಿದ್ದೇ ಹೆಚ್ಚು ಎಂದು ನಿಮ್ಮ ಸಚಿವರು ಹೇಳ್ತಾರೆ ಎಂದು ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಪ್ರದರ್ಶಿಸಿ ಈಶ್ವರಪ್ಪ ಅವರ ಹೆಸರು ಪ್ರಸ್ತಾಪಿಸಿದರು. ಆಗ, ಎದ್ದುನಿಂತ ಈಶ್ವರಪ್ಪ ನಾನು ಅದಕ್ಕೆ ಸ್ಪಷ್ಟನೆ ಕೊಡುತ್ತೇನೆ ಎಂದರು. ಆಗ, ಸಿದ್ದರಾಮಯ್ಯ ನಾನು ಕುಳಿತುಕೊಳ್ಳುವುದಿಲ್ಲ ಎಂದು ಮಾತು ಮುಂದುವರಿಸಿದರು.

ಇದಕ್ಕೆ ಆಕ್ರೋಶಗೊಂಡ ಈಶ್ವರಪ್ಪ ಇದು ರಾಕ್ಷಸಿ ಮನೋಭಾವ. ನನ್ನ ಹೆಸರು ಹೇಳಿದ ಮೇಲೆ ನಾನು ಸ್ಪಷ್ಟನೆ ಕೊಡಲು ಅವಕಾಶ ಕೊಡುವುದು ಮನುಷ್ಯತ್ವ ಅಲ್ಲವೇ ಎಂದು ಹರಿಹಾಯ್ದರು. ಅದರೆ, ಸಿದ್ದರಾಮಯ್ಯ ಅವರು, ಪತ್ರಿಕೆಗಳಲ್ಲಿ ಬಂದಿದೆ ರೀ ನೀವು ಹೇಳಿದ್ದೇ ಎಂದು ಹೇಳಿದರು.

ಸಹನೆ ಕಳೆದುಕೊಂಡ ಈಶ್ವರಪ್ಪ
ಆಗ ಸಹನೆ ಕಳೆದುಕೊಂಡ ಈಶ್ವರಪ್ಪ ಅವರು, ನೀವು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮನೆ ಬಾಗಿಲು ಕಾದರೂ ಒಳಗೆ ಬಿಟ್ಟುಕೊಳ್ಳಲಿಲ್ಲ. ಬ್ಲಾಕ್‌ವೆುàಲ್‌ ಮಾಡಿ ಪ್ರತಿಪಕ್ಷ ನಾಯಕರಾಗಿದ್ದೀರಿ. ಕಾಂಗ್ರೆಸ್‌ ಕಟ್ಟಿ ಬೆಳೆಸಿದವರು ಇಲ್ಲೇ ಕುಳಿತಿದ್ದಾರೆ, ನೀವು ಆ ಪಕ್ಷ ಸಮಾಧಿ ಮಾಡಿದ್ದೀರಿ. 115 ಇದ್ದದ್ದು 78 ಕ್ಕೆ ಇಳಿಸಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ. ಸಮ್ಮಿಶ್ರ ಸರ್ಕಾರ ಪತನಗೊಳಿಸಿದ್ದು ನೀವೇ ಎಂದು ಜೆಡಿಎಸ್‌ನವರೇ ಹೇಳಿದ್ದಾರೆ. ನಿಮಗೆ ಪ್ರತಿಪಕ್ಷ ಸ್ಥಾನ ಬೇಕಿತ್ತು? ನಿಮ್ಮ ಹಣೆಬರಕ್ಕಿಷ್ಟು ಬೆಂಕಿಹಾಕಾ ಎಂದು ಒಂದೇ ಸಮನೆ ಮಾತಿನ ವಾಗಾœಳಿ ನಡೆಸಿದರು.
ಇದರಿಂದ ಕುಪಿತರಾದ ಸಿದ್ದರಾಮಯ್ಯ ಅವರು, ಸುಮ್ಮನೆ ಕುಳಿತುಕೊಳಿÅà, ನೀವು ಎಂಎಲ್‌ಎ ಸ್ಥಾನಕ್ಕಾಗಿ ಗುಲಾಮಗಿರಿ ಮಾಡಿದೋರು, ಉಪ ಮುಖ್ಯಮಂತ್ರಿಯಾಗಿಧ್ದೋರು ಮಂತ್ರಿಯಾಗಿದ್ದೀರಿ, ನಾನಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೆ. ನಿಮ್ಮ ಯೋಗ್ಯತೆಗೆ ಪ್ರಧಾನಿ ಭೇಟಿ ಮಾಡಕ್ಕೆ ಆಗಲಿಲ್ಲ ಎಂದು ದೂರಿದರು.

ರಾಜಕೀಯ ಸಂಸ್ಕೃತಿ ಇಲ್ಲದವರು ನೀವು. ನಿಮ್ಮ ಜತೆ ಮಾತನಾಡುವುದು ಏನಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಎದ್ದು ನಿಂತಾಗ, ಅವರ ವಿರುದ್ಧವೂ ಈಶ್ವರಪ್ಪ ವಾಗ್ಧಾಳಿ ನಡೆಸಲು ಮುಂದಾದರು. ಆಗ, ರಮೇಶ್‌ಕುಮಾರ್‌ ಅವರು, ಈಶ್ವರಪ್ಪ ಮಾತನಾಡಲು ನಿಂತರೆ ನಾವು ಏನೂ ಮಾತನಾಡಲ್ಲ, ಅವರ ಲೆವೆಲ್‌ ಬೇರೆ, ನಮ್ಮ ಲೆವೆಲ್‌ ಬೇರೆ ಎಂದು ಹೇಳಿದರು.
ಕಾಂಗ್ರೆಸ್‌ನ ಭೀಮಾನಾಯ್ಕ, ನಿಮ್ಮ ರಾಯಣ್ಣ ಬ್ರಿಗೇಡ್‌ ಎಲ್ಲಿ ಹೋಯಿತು. ಪ್ರತಿಪಕ್ಷ ನಾಯಕನ ಸ್ಥಾನ ಆಯ್ಕೆ ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ, ನೀವ್ಯಾಕೆ ಮಾತಾಡ್ತೀರಿ. ನಿಮ್ಮ ಪಕ್ಷದಲ್ಲಿ ನಿಮ್ಮ ಸ್ಥಿತಿ ಹೇಗಿದೆ ನೋಡಿಕೊಳ್ಳಿ ಎಂದು ಹೇಳಿದರು.

ಎಂ.ಬಿ.ಪಾಟೀಲ್‌, ಕೃಷ್ಣ ಬೈರೇಗೌಡ, ಜಮೀರ್‌ ಆಹಮದ್‌, ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್‌, ಸೌಮ್ಯ ರೆಡ್ಡಿ, ಅಖಂಡ ಶ್ರೀನಿವಾಸಮೂರ್ತಿ ಸೇರಿ ಕಾಂಗ್ರೆಸ್‌ನ ಎಲ್ಲ ಸದಸ್ಯರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತರು. ಅಂತಿಮವಾಗಿ ಸಿದ್ದರಾಮಯ್ಯ ಅವರೇ, ಬೇಗ ಮುಗಿಸುತ್ತೇನೆ ಎಂದು ಮಾತು ಮುಂದುವರಿಸಿ ಹತ್ತು ನಿಮಿಷದಲ್ಲಿ ಮಾತು ಮುಗಿಸಿದರು.

ಮಾಧುಸ್ವಾಮಿ ಕಿಡಿ
ಸಿದ್ದರಾಮಯ್ಯ ಅವರು ಮಾತನಾಡುವ ಸಂದರ್ಭದಲ್ಲಿ ಎಂ.ಬಿ.ಪಾಟೀಲ್‌, ಕೃಷ್ಣ ಬೈರೇಗೌಡ ಅವರು ಆಸನದಲ್ಲಿ ಕುಳಿತೇ ಕೆಲವು ವಿಷಯ ಪ್ರಸ್ತಾಪಿಸಿದ್ದರಿಂದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಕುಪಿತರಾಗಿ, ಇದೇನು ಸದನವೋ ಅಲ್ಲವೋ. ಮಾತನಾಡಬೇಕಾದರೆ ಎದ್ದು ನಿಂತು ಮಾತನಾಡಿ, ಕುಳಿತೇ ಮಾತನಾಡುವುದು ಎಷ್ಟು ಸರಿ. ನೀವು ಮಾತನಾಡುತ್ತಲೇ ಇರಿ ನಾವು ಕೇಳುತ್ತಲೇ ಇರಬೇಕಾ ಎಂದು ಪ್ರಶ್ನಿಸಿದರು. ಇದರಿಂದ ಸಿದ್ದರಾಮಯ್ಯ ಅವರು ಕುಪಿತರಾಗಿ, ನೀವು ಹೇಳಿದಂತೆ ನಾನು ಮಾತನಾಡಲು ಆಗುವುದಿಲ್ಲ. ಸರ್ಕಾರ ಹೇಳಿದಂತೆ ಸದನ ನಡೆಸುವುದಿಲ್ಲ, ಆಡಳಿತ ಪಕ್ಷ, ಪ್ರತಿಪಕ್ಷ ಸೇರಿ ಸದನ ನಡೆಸಬೇಕು. ಮೂರೇ ದಿನಕ್ಕೆ ಅಧಿವೇಶನ ಮುಗಿಸುವುದು ಯಾಕೆ? ಇನ್ನೂ ಹತ್ತು ದಿನ ವಿಸ್ತರಿಸಿ ಎಂದು ಆಗ್ರಹಿಸಿದರು. ಎಂ.ಬಿ.ಪಾಟೀಲ್‌, ಕೆ.ಜೆ.ಜಾರ್ಜ್‌, ಕೃಷಣ ಬೈರೇಗೌಡರು ಮಾಧುಸ್ವಾಮಿ ವಿರುದ್ಧ ಮುಗಿಬಿದ್ದು ನೀವು ಹೇಳಿದಂತೆ ಮಾತನಾಡಬೇಕಾ? ನೀವು ಕುಳಿತುಕೊಳ್ಳಿ ಎಂದು ಹೇಳಿದರು. ಆಗ, ಬಿಜೆಪಿ ಸದಸ್ಯರು ಎದ್ದು ನಿಂತು ಮಾಧುಸ್ವಾಮಿ ಬೆಂಬಲಕ್ಕೆ ಬಂದರು. ಸ್ಪೀಕರ್‌ ಎರಡೂ ಕಡೆಯ ಸದಸ್ಯರನ್ನು ಸಮಾಧಾನಪಡಿಸಿ ಕುಳ್ಳರಿಸಿದರು.

ರಮೇಶ್‌ಕುಮಾರ್‌ ಸಿಡಿಮಿಡಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಡೆಡ್‌ಲೈನ್‌ ನೀಡಿದ ಕ್ರಮದ ಬಗ್ಗೆ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಸಿಡಿಮಿಡಿಗೊಂಡು, ಈ ರೀತಿ ಸದನ ನಡೆಸಿ ಆ ಸ್ಥಾನದ (ಸ್ಪೀಕರ್‌) ಘನತೆ ಹೆಚ್ಚಿಸುತ್ತೇನೆ ಎಂಬುದು ಭ್ರಮೆ ಎಂದು ಛೇಡಿಸಿದರು. ಈ ಸ್ಥಾನ (ಸ್ಪೀಕರ್‌) ಇರುವುದು ಬುದ್ಧಿವಂತಿಕೆ ಪ್ರದರ್ಶಿಸಲು ಅಲ್ಲ, ಇಲ್ಲಿದ್ದಾಗ ಮಾತನಾಡಿದ್ದು ಗೊತ್ತಿಲ್ಲವೇ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿರುಗೇಟು ನೀಡಿದರು. ನಾನು ಪ್ರತಿಪಕ್ಷ ನಾಯಕರಿಗೆ ಎಂದೂ ಡೆಡ್‌ಲೈನ್‌ ಕೊಟ್ಟಿರಲಿಲ್ಲ ಎಂದು ರಮೇಶ್‌ಕುಮಾರ್‌ ಸಮಜಾಯಿಷಿ ಕೊಟ್ಟರು. ರಮೇಶ್‌ಕುಮಾರ್‌ ಅವರು ಕುಳಿತೇ ಮಾತನಾಡುತ್ತಿದ್ದಾಗ, ಸ್ಪೀಕರ್‌ ಆಗಿದ್ದವರಿಗೆ ನಿಯಮಾವಳಿ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಕೆ.ಎಸ್‌. ಈಶ್ವರಪ್ಪ ಅವರು, ರಮೇಶ್‌ಕುಮಾರ್‌ ಅವರು ಪ್ರತಿಪಕ್ಷದಲ್ಲಿದ್ದಾಗ ಒಂದು ರೀತಿ, ಆಡಳಿತ ಪಕ್ಷದಲ್ಲಿದ್ದಾಗ ಮತ್ತೂಂದು ರೀತಿ ಮಾತಾಡುತ್ತಾರೆ. ಸ್ಪೀಕರ್‌ ಸ್ಥಾನದಲ್ಲಿದ್ದಾಗ ಬುದ್ಧಿವಾದ ಹೇಳುತ್ತಿದ್ದರು. ಅವರು ಹೇಳಿದ್ದೇ ವಿಶ್ವ, ವೇದವ್ಯಾಕ ಎಂದು ಛೇಡಿಸಿದರು.

ಸದನದಲ್ಲಿ ಪ್ರತಿಪಕ್ಷ ನಾಯಕರಿಗೆ ಇಂತಿಷ್ಟೇ ಹೊತ್ತು ಮಾತನಾಡಬೇಕು ಎಂದು ಗಡುವು ವಿಧಿಸುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದೀರಿ. ಪ್ರವಾಹದಂತಹ ಗಂಭೀರ ವಿಚಾರ ಮಾತನಾಡಲು ಸರ್ಕಾರ ಅವಕಾಶ ಕೊಡದಿದ್ದರೆ ಹೇಗೆ? ನೀವು (ಸ್ಪೀಕರ್‌)ಸರ್ಕಾರ ಹೇಳಿದಂತೆ ಸದನ ನಡೆಸಬಾರದು.
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಪ್ರವಾಹ ಗಂಭೀರ ವಿಚಾರ ನಮಗೂ ಗೊತ್ತಿದೆ. ಆದರೆ, ದಾಖಲೆಗಾಗಿ ಮಾತನಾಡುವುದು ಸರಿಯಲ್ಲ. ಮಾತು ಮುಗಿಸದಿದ್ದರೆ ಬೇರೊಬ್ಬರಿಗೆ ಅವಕಾಶ ಕೊಡಲು ನನಗೆ ಗೊತ್ತಿದೆ. ನಿಯಮಾವಳಿಗಳಲ್ಲೂ ಅವಕಾಶವಿದೆ. ನೀವು ಐದು ನಿಮಿಷದಲ್ಲಿ ಮಾತು ಮುಗಿಸಲೇಬೇಕು.
-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

ಕಾಂಗ್ರೆಸ್‌ ಪಕ್ಷವನ್ನು ಈಗಾಗಲೇ ಮುಗಿಸಿದ್ದೀರಿ. ಇನ್ನೂ ಎಷ್ಟು ಮುಗಿಸುತ್ತೀರಿ, ನಿಮ್ಮ ಜತೆ (ಸಿದ್ದರಾಮಯ್ಯ ಅವರನ್ನು ಕುರಿತು) ಯಾರಿಲ್ಲ, ಇರುವವರೂ ಮುಂದೆ ಇರಲ್ಲ. ನಿಮ್ಮ ಸ್ಥಿತಿ ಪಕ್ಷದಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ.
-ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಚಿವ

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

2-hunsur

Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.