ಹಡಗಲಿ ದಾರಿ ಫ್ಲಾಟ್ ನಲ್ಲಿ ಸೌಲಭ್ಯಕ್ಕೆ ಪರದಾಟ
ಸೌಲಭ್ಯವಿಲ್ಲದೇ ಸೊರಗುತ್ತಿವೆ ನೂತನ ಬಡಾವಣೆಗಳು ರೋಗ ಭೀತಿಯಲ್ಲಿ ಜನತೆ
Team Udayavani, Oct 11, 2019, 6:06 PM IST
ಸಿಕಂದರ ಎಂ. ಆರಿ
ನರೇಗಲ್ಲ: ಅಬ್ಬಿಗೇರಿ ಗ್ರಾಮದ ವಾರ್ಡ್ ನಂ.4ರ ಹಡಗಲಿ ದಾರಿಯಲ್ಲಿರುವ ಪ್ಲಾಟ್‌ನಲ್ಲಿ ನೂರಾರು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಸೌಲಭ್ಯ ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಮಾಲಿಕರ ಜಮೀನುವಾಗಿದ್ದು, ಇಲ್ಲಿ ಮೂಲ ಸೌಲಭ್ಯ ಒದಗಿಸಲು ಗ್ರಾಪಂ ಹಿಂದೇಟು ಹಾಕುತ್ತಿದೆ. ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು ಎನ್ನುವಂತಿದೆ ಇಲ್ಲಿನ ನಿವಾಸಿಗಳ ಸ್ಥಿತಿ.
ಸುಸಜ್ಜಿತ ರಸ್ತೆ, ಚರಂಡಿ, ಸಾಮೂಹಿಕ ಶೌಚಾಲಯ, ಅಂಗನವಾಡಿ, ಅಷ್ಟೇ ಏಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೇ ಇಲ್ಲಿಯ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಸುಸಜ್ಜಿತ ಚರಂಡಿ ಇಲ್ಲ. ಹೀಗಾಗಿ ನಿವಾಸಿಗಳು ಉಪಯೋಗಿಸಿದ ಕೊಳಚೆ ನೀರು ನೇರವಾಗಿ ಜನರು ಓಡಾಡುವ ರಸ್ತೆ ಮೇಲೆಯೇ ಹರಿಯುತ್ತದೆ. ಜನತೆ ಕೊಳಚೆ ನೀರನ್ನು ತುಳಿದುಕೊಂಡೇ ಓಡಾಡಬೇಕಾದ ಅನಿವಾರ್ಯತೆ ಇದೆ. ಇದರ ಪರಿಣಾಮ ಜನ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಜತೆಗೆ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ.
ಅಲ್ಲದೇ ಕುಡಿಯುವ ನೀರಿನ ಪೈಪ್‌ಗ್ಳನ್ನು ರಸ್ತೆಯ ಮಧ್ಯೆದಲ್ಲೇ ಹಾಕಲಾಗಿದ್ದು, ಆಕಸ್ಮಾತ್ ಒಡೆದರೆ ರಾಡಿ ನೀರೇ ಗತಿಯಾಗಿದೆ. ಅಂಗನವಾಡಿ ಕೊರತೆ: ಈ ಪ್ಲಾಟ್‌ನಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿದ್ದು, ಸುಮಾರು 300 ರಿಂದ 350 ಜನ ಇಲ್ಲಿ ವಾಸಿಸುತ್ತಾರೆ. ಇಲ್ಲಿ ಅಂಗನವಾಡಿ ಕೇಂದ್ರ ಇಲ್ಲದೇ ಇರುವುದರಿಂದ ಸುಮಾರು ಅರ್ಧ ಕಿ.ಮೀ ದೂರ ಹೋಗಬೇಕಾದ ಸ್ಥಿತಿ ಇದೆ. ಪಾಲಕರಿಗೆ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿ ಬರುವುದೇ ದೊಡ್ಡ ಕೆಲಸವಾಗಿದೆ.
ಇಲ್ಲಿನ ಮಹಿಳೆಯರು ಹಾಗೂ ಪುರುಷರು ನಿತ್ಯ ಶೌಚಾಲಯಕ್ಕಾಗಿ ಹಳ್ಳಕ್ಕೆ ಹೋಗಬೇಕಾದ ಅನಿವಾರ್ಯ ಇದೆ. ಅಲ್ಲದೇ ಉತ್ತಮ ರಸ್ತೆ ಇಲ್ಲದೇ ಇರುವುದರಿಂದ ಮಳೆ ನೀರು, ಕೊಳಚೆ ನೀರು ನಿಂತಿರುವುದರಿಂದ ಡೆಂಘೀ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.