ಸ್ಟೇಡಿಯಂಗೆ ಬಂದು ಫುಟ್‌ಬಾಲ್ ಪಂದ್ಯ ಕಣ್ತುಂಬಿಕೊಂಡ ಇರಾನ್ ವನಿತೆಯರು!
ತೆರವುಗೊಂಡಿತು 40 ವರ್ಷಗಳ ನಿಷೇಧ
Team Udayavani, Oct 11, 2019, 7:50 PM IST
ಟೆಹ್ರಾನ್: ಟೆಹ್ರಾನ್‌ನ “ಆಜಾದಿ ಸ್ಟೇಡಿಯಂ’ನಲ್ಲಿ ಗುರುವಾರ ಹಬ್ಬದ ವಾತಾವರಣ. ಸಾವಿರಾರು ಇರಾನ್ ಮಹಿಳೆಯರು ರಾಷ್ಟ್ರಧ್ವಜವನ್ನು ಹೊದ್ದುಕೊಂಡು ತಮ್ಮ ದೇಶದ ಫುಟ್‌ಬಾಲ್ ತಂಡವನ್ನು ಹುರಿದುಂಬಿಸಿ ಸಂಭ್ರಮಿಸುತ್ತಿದ್ದರು. ಅವರ ಈ ಖುಷಿಗೆ ವಿಶೇಷ ಕಾರಣವಿದ್ದಿತ್ತು. ಹಲವು ದಶಕಗಳ ಬಳಿಕ ಇರಾನ್ ಮಹಿಳೆಯರಿಗೆ ಸ್ಟೇಡಿಯಂಗೆ ಹೋಗಿ ಮುಕ್ತವಾಗಿ ಪಂದ್ಯವನ್ನು ವೀಕ್ಷಿಸುವ ಅವಕಾಶ ದೊರೆತಿತ್ತು!
ಕೆಲವರು ಹಸಿರು, ಬಿಳಿ ಮತ್ತು ಕೆಂಪು ಬಣ್ಣದ ಧ್ವಜವನ್ನು ಹೊದ್ದುಕೊಂಡರೆ, ಕೆಲವರು ಧ್ವಜದ ಬಣ್ಣವನ್ನು ಮುಖದಲ್ಲಿ ಚಿತ್ರಿಸಿಕೊಂಡಿದ್ದರು. ಇದು ಫುಟ್‌ಬಾಲ್‌ನ ಮಹಿಳಾ ಅಭಿಮಾನಿಗಳಿಗೆ ಸಿಕ್ಕಿರುವ ಅಪೂರ್ವ ಗೆಲುವು ಎನ್ನುವುದನ್ನು ಅವರ ನಗುವೇ ಸಾರುತ್ತಿತ್ತು. ಇರಾನ್ ತಂಡ ಗೋಲು ಬಾರಿಸಿದಾಗಲೆಲ್ಲ ಮಹಿಳೆಯರ ಸಂಭ್ರಮದ ಕೂಗು ಮುಗಿಲು ಮುಟ್ಟುತ್ತಿತ್ತು!
40 ವರ್ಷಗಳ ನಿಷೇಧ
ಸಂಪ್ರದಾಯವಾದಿ ದೇಶವಾದ ಇರಾನಿನ ಧಾರ್ಮಿಕ ಮುಖಂಡರು ಸುಮಾರು 40 ವರ್ಷಗಳ ಹಿಂದೆ, ಮಹಿಳೆಯರು ಫುಟ್‌ಬಾಲ್ ಮತ್ತು ಇನ್ನಿತರ ಆಟಗಳನ್ನು ನೋಡಬಾರದು ಎಂದು ಫತ್ವಾ ಹೊರಡಿಸಿದ್ದರು. ಚಡ್ಡಿ, ಟಿ-ಶರ್ಟ್ ಧರಿಸಿ ಆಡುವ ಪುರುಷರ ದೇಹಗಳನ್ನು ಮಹಿಳೆಯರು ನೋಡಬಾರದು ಎನ್ನುವುದೇ ಈ ಫತ್ವಾ ಹಿಂದಿದ್ದ ತರ್ಕ.
ಕಳೆದ ವರ್ಷ ಸಹಾರ್ ಖೋಡಯರಿಯ ಎಂಬ ಯುವತಿ ಯುವಕನಂತೆ ವೇಷ ಧರಿಸಿ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಹೋಗಿ ಸಿಕ್ಕಿ ಬಿದ್ದಿದ್ದಳು. ಈ ತಪ್ಪಿಗೆ ಜೈಲು ಶಿಕ್ಷೆಯಾಗಬಹುದು ಎಂದು ಹೆದರಿ ಆಕೆ ನ್ಯಾಯಾಲಯದಲ್ಲೇ ಆತ್ಮಾಹುತಿ ಮಾಡಿಕೊಂಡ ಘಟನೆಯೂ ಸಂಭವಿಸಿತ್ತು.
ಫಿಫಾ ಎಚ್ಚರಿಕೆ
ಈ ಘಟನೆಯ ಬಳಿಕ ಎಚ್ಚೆತ್ತ ಫಿಫಾ ಮಹಿಳೆಯರಿಗೆ ಯಾವುದೇ ನಿರ್ಬಂಧವಿಲ್ಲದೆ ಫುಟ್‌ಬಾಲ್ ವೀಕ್ಷಿಸಲು ಅವಕಾಶ ನೀಡಬೇಕು, ಇದಕ್ಕೆ ತಪ್ಪಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿತ್ತು. ವಿಶ್ವ ಫುಟ್‌ಬಾಲ್ ಕೂಟದಿಂದ ಬಹಿಷ್ಕಾರಕ್ಕೆ ಒಳಗಾಗುವ ಭೀತಿಯಲ್ಲಿದ್ದ ಇರಾನ್, ಕಡೆಗೂ ಮಹಿಳೆಯರಿಗೆ ಫುಟ್‌ಬಾಲ್ ವೀಕ್ಷಿಸಲು ಅನುಮತಿ ನೀಡಿತು. ಇದರ ಪರಿಣಾಮವೆಂಬಂತೆ, ಗುರುವಾರ ಮೊದಲ ಬಾರಿಗೆ ಮಹಿಳೆಯರು ಸ್ಟೇಡಿಯಂ ಮುಗಿಬಿದ್ದು ಸಂಭ್ರಮಿಸಿದರು.
2022ರ ವಿಶ್ವಕಪ್‌ಗಾಗಿ ಇರಾನ್ ಮತ್ತು ಕಾಂಬೊಡಿಯ ನಡುವೆ ನಡೆದ ಅರ್ಹತಾ ಪಂದ್ಯ ಮಹಿಳೆಯರ ಹೋರಾಟಕ್ಕೆ ದಕ್ಕಿದ ಗೆಲುವಿಗೆ ಸಾಕ್ಷಿಯಾಯಿತು. ಸುಮಾರು 4,500 ಮಹಿಳೆಯರು ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ವೀಕ್ಷಿಸಿದರು. ಈ ಪಂದ್ಯವನ್ನು ಇರಾನ್ 14-0 ಭಾರೀ ಅಂತರದಲ್ಲಿ ಜಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.