ಸೌತೆಪ್ರಿಯನ ಸಂತರ್ಪಣೆ
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಬೆಳ್ತಂಗಡಿ ತಾ.
Team Udayavani, Oct 12, 2019, 4:07 AM IST
ಇಲ್ಲಿನ ಗಣಪನಿಗೆ ಗರ್ಭಗುಡಿ ಇಲ್ಲ; ಗೋಡೆ- ಗೋಪುರಗಳೂ ಇಲ್ಲ. ಬಯಲು ಗಣಪತಿ ಈತ. ಬೆಳ್ತಂಗಡಿ ತಾಲೂಕಿನ ಸೌತಡ್ಕದ ಸುಂದರ ಪರಿಸರದಲ್ಲಿ ನೆಲೆನಿಂತ ಮಹಾ ಗಣಪತಿಯ ಸನ್ನಿಧಾನದಲ್ಲಿ ಅನ್ನ ಸಂತರ್ಪಣೆಯೂ ಒಂದು ಸಂಭ್ರಮ. ಪ್ರತಿದಿನ ಮಧ್ಯಾಹ್ನದ ಅನ್ನಸಂತರ್ಪಣೆಗೆ ದೈವಿಕ ವಿಶೇಷವಿದೆ. ಮಕ್ಕಳಅನ್ನಪ್ರಾಶನಕ್ಕೆ ಸದ್ಭಕ್ತರು ಮುಗಿಬೀಳುತ್ತಾರೆ.
ಸೌತೆಯಿಂದ ಸಂತರ್ಪಣೆಯ ತನಕ…: ದಟ್ಟಾರಣ್ಯದ ಕಾಡಿನಲ್ಲಿ ಗೋಪಾಲಕರಿಗೆ ಗಣಪತಿಯ ಶಿಲಾವಿಗ್ರಹ ಸಿಗುತ್ತದೆ. ಗೋಪಾಲಕರು ಅದನ್ನು ಒಂದು ಸ್ಥಳದಲ್ಲಿ ಕಟ್ಟೆಯ ಮೇಲೆ ಪ್ರತಿಷ್ಠಾಪಿಸುತ್ತಾರೆ. ಆ ಸ್ಥಳವೇ ಸೌತಡ್ಕ ಕ್ಷೇತ್ರ ಆಯಿತು. ಗೋಪಾಲಕರು ಗಣಪತಿಗೆ ಸೌತೆಕಾಯಿಯನ್ನು ಸಮರ್ಪಿಸಿದ್ದರಂತೆ. ಅದಕ್ಕಾಗಿ ಇಲ್ಲಿಗೆ “ಸೌತಡ್ಕ’ ಎಂಬ ಹೆಸರು ಬಂತು. ಸೌತೆಕಾಯಿ ನೈವೇದ್ಯದ ಸಂಪ್ರದಾಯ ಇಂದಿಗೂ ಇದೆ.
ನಿತ್ಯ ಸಾವಿರ ಭಕ್ತರಿಗೆ ಭೋಜನ: ನಿತ್ಯವೂ ಇಲ್ಲಿ 1000ಕ್ಕೂ ಅಧಿಕ ಭಕ್ತರು, ಭೋಜನ ಸವಿಯುತ್ತಾರೆ. ಸಂಕಷ್ಟಿ, ಭಾನುವಾರ ಹಾಗೂ ರಜಾದಿನಗಳು ಭಕ್ತರ ಸಂಖ್ಯೆ ಹೆಚ್ಚುತ್ತದೆ. ಚೌತಿ, ಮೂಡಪ್ಪ ಸೇವೆಯ ದಿನಗಳಲ್ಲಿ 5- 6 ಸಾವಿರದ ಗಡಿ ದಾಟುತ್ತದೆ.
ಆಧುನಿಕ ಅಡುಗೆಮನೆ: ಸೋಲಾರ್ ಚಾಲಿತ ಆಧುನಿಕ ಶೈಲಿಯ, ದೊಡ್ಡ ಹಾಗೂ ಮಧ್ಯಮ ಗಾತ್ರದ 5 ಬಾಯ್ಲರ್‌ಗಳಿವೆ. ಅನ್ನ, ಪಾಯಸ, ಸಾಂಬಾರ್ ಸಿದ್ಧಗೊಳ್ಳುವುದು ಇವುಗಳಲ್ಲಿಯೇ. ಅಡುಗೆ ತಯಾರಿಕೆಗೆ ಗ್ಯಾಸ್ ಸಿಲಿಂಡರ್ ಜತೆಗೆ ಕಟ್ಟಿಗೆ ಒಲೆಯ ವ್ಯವಸ್ಥೆಯೂ ಇದೆ.
ಸುಸಜ್ಜಿತ ಭೋಜನಶಾಲೆ: ಇಲ್ಲಿನ ಭೋಜನ ಶಾಲೆಯು ಸುಸಜ್ಜಿತ. ಏಕಕಾಲದಲ್ಲಿ ಸಾವಿರ ಮಂದಿ ಕುಳಿತು ಭೋಜನ ಸವಿಯಬಹುದು. ವಿಶೇಷಚೇತನರಿಗೆ ಟೇಬಲ್ ಊಟದ ವ್ಯವಸ್ಥೆ ಇರುತ್ತದೆ.
ಭಕ್ಷ್ಯ ವಿಶೇಷ: ನಿತ್ಯವೂ ಅನ್ನ, ತಿಳಿಸಾರು, ಸಾಂಬಾರು, ಗಟ್ಟಿ ಪಲ್ಯ, ಪಾಯಸ, ಮಜ್ಜಿಗೆ. ಬಾಳೆಎಲೆ ಮತ್ತು ಊಟದ ತಟ್ಟೆಯಲ್ಲಿ ಭೋಜನ ವ್ಯವಸ್ಥೆ.
ಊಟದ ಸಮಯ: ಮಧ್ಯಾಹ್ನ 12.30- 2.30
ಏಕಾದಶಿಗೆ ಉಪಹಾರ: ಏಕಾದಶಿ ದಿನಗಳಲ್ಲಿ ಊಟವಿರುವುದಿಲ್ಲ. ಈ ದಿನಗಳಲ್ಲಿ ಉಪಾಹಾರ ವ್ಯವಸ್ಥೆ ಇರುತ್ತದೆ ಉಪ್ಪಿಟ್ಟು, ಅವಲಕ್ಕಿ, ಸಾಂಬಾರು, ಮೊಸರು, ಮಜ್ಜಿಗೆ ವಿತರಿಸಲಾಗುತ್ತದೆ.
ಹೆಚ್ಚು ಬಳಕೆಯಾಗುವ ತರಕಾರಿ: ಕುಂಬಳಕಾಯಿ, ಸಿಹಿ ಕುಂಬಳಕಾಯಿ, ಟೊಮೇಟೊ, ಬದನೆ, ಬೀನ್ಸ್, ಸೌತೆಕಾಯಿ, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಹಸಿಮೆಣಸು.
ಸಂಖ್ಯಾ ಸೋಜಿಗ
2- ಕ್ವಿಂಟಲ್ ಅಕ್ಕಿ ನಿತ್ಯ ಬಳಕೆ
3- ತಾಸಿನಲ್ಲಿ ಅಡುಗೆ ಸಿದ್ಧ
5- ಬಾಣಸಿಗರಿಂದ ಅಡುಗೆ
70- ಕಿಲೋ ತರಕಾರಿ ಬಳಕೆ
200- ಲೀಟರ್ ಸಾಂಬಾರು
1000- ಸದ್ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
5,00,000- ಭಕ್ತರಿಂದ ಕಳೆದವರ್ಷ ಭೋಜನ ಸ್ವೀಕಾರ
ಅನ್ನದಾನ ಎನ್ನುವುದು ಬಹಳ ಶ್ರೇಷ್ಠ ಕಾರ್ಯ. ಭಕ್ತರ ಹಸಿವು ನೀಗಿಸುವ ಕೆಲಸವನ್ನು ದೇವಸ್ಥಾನ ಸಮಿತಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ.
-ಹರಿಶ್ಚಂದ್ರ, ದೇವಸ್ಥಾನದ ಉಸ್ತುವಾರಿ
* ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.