ಬೆಳ್ಮಣ್ ಜಂತ್ರ: ಕಲ್ಲುಕೋರೆಯಲ್ಲಿ ತ್ಯಾಜ್ಯರಾಶಿ
Team Udayavani, Oct 12, 2019, 5:34 AM IST
ಬೆಳ್ಮಣ್: ಬೆಳ್ಮಣ್‌ನಿಂದ ಶಿರ್ವಕ್ಕೆ ಸಾಗುವ ದಾರಿ ಮಧ್ಯೆ ಜಂತ್ರ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಅನತಿ ದೂರದಲ್ಲಿರುವ ಕಲ್ಲು ಕೋರೆಯಲ್ಲಿ ಪ್ರತಿದಿನ ಭಾರೀ ಪ್ರಮಾಣದ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು ಇಲ್ಲಿನ ಸ್ಥಳಿಯ ನಿವಾಸಿಗಳು ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದರೂ ಸ್ಥಳಿಯಾಡಳಿತ ಮಾತ್ರ ಇದುವರೆಗೂ ಸ್ಪಂದಿಸಿಲ್ಲ ಎಂಬುದು ಅಲ್ಲಿಯ ನಾಗರಿಕರ ಆರೋಪ.
ಪ್ಲಾಸ್ಟಿಕ್ ತ್ಯಾಜ್ಯಗಳ ಜತೆ ಇತರ ಹಸಿ ಕಸವನ್ನು ತಂದು ಇಲ್ಲಿ ಸುರಿದು ಹೋಗುವುದರಿಂದ ಪರಿಸರ ತ್ಯಾಜ್ಯದಿಂದ ನಾರುತ್ತಿದೆ. ಈ ಕಲ್ಲುಕೋರೆ ನಿರುಪಯುಕ್ತವಾಗಿದ್ದು ಯಾವುದೇ ತಡೆಬೇಲಿ ಇಲ್ಲದೆ ಅಪಾಯ ಕಾರಿಯಾಗಿದೆ. ಮಳೆಗಾಲದಲ್ಲಿ ನೀರು ನಿಂತು ತ್ಯಾಜ್ಯ ಕೊಳೆತು ಈ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿದೆ.
ಪಂಚಾಯತ್ ಸಭೆಯಲ್ಲೂ ಪ್ರಸ್ತಾವ
ಪಂಚಾಯತ್ ಸದಸ್ಯರೊಬ್ಬರು ಸಾಮಾನ್ಯ ಸಭೆಯಲ್ಲಿ ತ್ಯಾಜ್ಯ
ಸಮಸ್ಯೆ ಬಗ್ಗೆ ಪ್ರಸ್ತಾವ ಮಾಡಿದ್ದರೂ ಯಾವುದೇ ಕ್ರಮವನ್ನು ಸ್ಥಳಿಯಾಡಳಿತ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಈ ಬಗ್ಗೆ ಸ್ಥಳಿಯಾಡಳಿತ ಕೂಡಲೇ ಸ್ಪಂದಿಸಿ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.
ಕಠಿನ ಕ್ರಮ ಕೈಗೊಳ್ಳಿ
ಈ ಬಗ್ಗೆ ಪಂಚಾಯತ್‌ಗೆ ದೂರು ನೀಡಲಾಗಿದ್ದು ಪಂಚಾಯತ್ ಈವರೆಗೂ ಸ್ಪಂದಿಸಿಲ್ಲ.ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಕಲ್ಲು ಕೋರೆಗೆ ತಂದು ಹಾಕುತ್ತಾರೆ . ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳಬೇಕಾಗಿದೆ.
– ಯಮುನಾ,
ಸ್ಥಳೀಯರು
ಕ್ರಮ ಕೈಗೊಳ್ಳಲಾಗುವುದು
ಕಲ್ಲುಕೋರೆಯಲ್ಲಿ ತ್ಯಾಜ್ಯ ಎಸೆಯುವುದರ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದೆ. ಪಂಚಾಯತ್‌ನ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
-ಮಲ್ಲಿಕಾ ರಾವ್, ಮಾಜಿ ಗ್ರಾ.ಪಂ. ಅಧ್ಯಕ್ಷೆ, ಬೆಳ್ಮಣ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.