ರೈಡ್ ಟು ಮಿಡ್ಲ್ಯಾಂಡ್ ತಂಡಕ್ಕೆ ಕಾಪುವಿನಲ್ಲಿ ಸ್ವಾಗತ
ಎನ್‌ಫೀಲ್ಡ್ ಬೈಕ್ ನಲ್ಲಿ 12 ಸಾವಿರ ಕಿ.ಮೀ.ಪಯಣ
Team Udayavani, Oct 12, 2019, 5:02 AM IST
ಕಾಪು : ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೆ„ಕ್‌ನಲ್ಲಿ ಇಪ್ಪತ್ತೈದು ದಿನಗಳಲ್ಲಿ 12 ಸಾವಿರ ಕಿ.ಮೀ. ಬೈಕ್ ಯಾತ್ರೆಯ ಮೂಲಕ ರೈಡ್ ಟು ಮಿಡ್ಲ್ಯಾಂಡ್ ಪಯಣ ಮುಗಿಸಿ ಅ. 10ರಂದು ಕಾಪುವಿಗೆ ಮರಳಿದ ಸಚಿನ್ ಶೆಟ್ಟಿ ನೇತೃತ್ವದ ಯುವಕರ ತಂಡವನ್ನು ಕಾಪು ಪೇಟೆಯಲ್ಲಿ ಸ್ವಾಗತಿಸಲಾಯಿತು.
ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚಟುವಟಿಕೆಗಳು, ಆಚಾರ – ವಿಚಾರ ಮತ್ತು ಆಹಾರ ಶೆ„ಲಿಯ ಬಗ್ಗೆ ಚಿತ್ರೀಕರಣದೊಂದಿಗೆ ಅಧ್ಯಯನ ನಡೆಸಿ, ಸಮಗ್ರ ಸಾಕ್ಷ್ಯ ಚಿತ್ರ ನಿರ್ಮಿಸುವ ಹಾಗೂ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮೂವರು ಯುವಕರ ತಂಡ ಸೆ. 15ರಂದು ರೈಡ್ ಟು ಮಿಡ್ಲ್ಯಾಂಡ್ ಯಾತ್ರೆಯನ್ನು ಕೈಗೊಂಡಿತ್ತು.
ಸೆ. 15ರಂದು ಕಾಪುವಿನಿಂದ ಪ್ರಾರಂಭಗೊಂಡಿದ್ದ ಮಿಡ್ಲ್ಯಾಂಡ್ ಪರ್ಯಟನೆಯು ಉಡುಪಿ, ಪುಣೆ, ಮುಂಬೈ ವಡೋದರಾ, ಉದಯಪುರ, ಜೈಪುರ, ಕುರುಕ್ಷೇತ್ರ, ಜಿಬಿ, ತಾಬೊ, ಮಡ್ ವಿಲೇಜ್, ಖಾಝ, ಚಂದ್ರತಾಲ್, ಮನಾಲಿ, ಚಂಡೀಗಡ, ಆಗ್ರಾ, ಇಂದೋರ್, ಔರಂಗಾಬಾದ್, ಸೋಲಾಪುರ, ಹಂಪಿ, ಬೆಂಗಳೂರು, ಮಡಿಕೇರಿ, ಮಂಗಳೂರು ಮೂಲಕ ಅ. 10ರಂದು ಕಾಪುವಿಗೆ ಬಂದು ಯಾತ್ರೆಯನ್ನು ಸಮಾಪನಗೊಳಿಸಿದ್ದಾರೆ.
25 ದಿನಕ್ಕೆ ಪೂರ್ಣಗೊಂಡ 45 ದಿನಗಳ ಯಾತ್ರೆ 411 ಸಿಸಿ ರಾಯಲ್
ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಮೂಲಕ 45 ದಿನಗಳ ಕಾಲ ನಡೆಸಲುದ್ದೇಶಿಸಿದ್ದ ರೈಡ್ ಟು ಮಿಡ್ಲ್ಯಾಂಡ್ ಎಂಬ ಹೆಸರಿನ ಸಾಹಸ ಯಾತ್ರೆಯು ಕೇವಲ 25 ದಿನಕ್ಕೇ ಪೂರ್ಣಗೊಂಡಿದ್ದು, ಹೆಚ್ಚುವರಿ 2,000 ಕಿಮೀ.ನೊಂದಿಗೆ 12 ಸಾವಿರ ಕಿ.ಮೀ. ಯಾತ್ರೆ ಪೂರ್ಣಗೊಳಿಸಿದ್ದಾರೆ. ಕಾಪು ಪೇಟೆಯಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ, ಪುರಸಭಾ ಸದಸ್ಯ ಅನಿಲ್ ಕುಮಾರ್, ಕಾಪು ಎಎಸ್ಸೆ$ç ರಾಜೇಂದ್ರ ಮಣಿಯಾಣಿ, ಎಸ್‌ಕೆಪಿಎ ಕಾಪು ವಲಯಾಧ್ಯಕ್ಷ ವೀರೇಂದ್ರ ಪೂಜಾರಿ, ಕಾರ್ಯದರ್ಶಿ ಸಚಿನ್ ಉಚ್ಚಿಲ, ಕಾಪು ಪ್ರಸ್ ಕ್ಲಬ್ ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ, ಪ್ರಮುಖರಾದ ಸೂರಿ ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ಪ್ರಭಾತ್ ಶೆಟ್ಟಿ, ಲವ ಕರ್ಕೇರ, ಮೋಹನ್ ಕಾಪು, ಯೋಗಿಶ್ ಪೂಜಾರಿ, ದಿವಾಕರ ಶೆಟ್ಟಿ ಮಲ್ಲಾರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.