ಆಟೋ ರಿಕ್ಷಾಗಳಿಗೆ ಮೀಟರ್‌ ಕಡ್ಡಾಯವಾದೀತೆ?

ನನೆಗುದಿಗೆ ಬಿದ್ದ ಯೋಜನೆ

Team Udayavani, Oct 12, 2019, 11:52 AM IST

huballi-tdy-2

ಹುಬ್ಬಳ್ಳಿ: ಹು-ಧಾ ಪೊಲೀಸ್‌ ಕಮಿಷನರೇಟ್‌ ಘಟಕಕ್ಕೆ ನೂತನ ಆಯುಕ್ತರಾಗಿ ಆರ್‌. ದಿಲೀಪ್‌ ಅವರು ಬಂದ ಮೇಲೆ ಅಪರಾಧ ಚಟುವಟಿಕೆ ಹಾಗೂ ಅಕ್ರಮ ದಂಧೆಗಳಿಗೆ ಲಗಾಮು ಹಾಕಲು ದಿಟ್ಟ ಕ್ರಮಗಳನ್ನು ಕೈಗೊಂಡು ಅದರಲ್ಲಿ ಯಶ ಕೂಡ ಕಾಣುತ್ತಿದ್ದಾರೆ.

ಅದೇರೀತಿ ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್‌ ಅಳವಡಿಸಲೂ ದಿಟ್ಟ ಹೆಜ್ಜೆ ಇಡುವರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವಳಿ ನಗರದಲ್ಲಿ ಪ್ರಯಾಣಿಕರ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್‌ ಅಳವಡಿಸಲು ಹಲವು ವರ್ಷಗಳಿಂದ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ ಅಧಿಕಾರಿಗಳಿಂದ ಪ್ರಯತ್ನಗಳು ನಡೆಯುತ್ತಲೇ ಇವೆ.

ಜಿಲ್ಲಾಧಿಕಾರಿ ದೀಪಾ ಚೋಳನ್‌ ಕೂಡ ಇದಕ್ಕೆ ಒತ್ತು ಕೊಟ್ಟಿದ್ದರು. ಆದರೆ ಅದು ಇದುವರೆಗೆ ಕಾರ್ಯಗತವಾಗದೆ ನನೆಗುದಿಗೆ ಬಿದ್ದಿದೆ. ಅದು ಫಲಪ್ರದವಾಗುತ್ತಿಲ್ಲ.ಆಡಳಿತ ವರ್ಗದ ಪ್ರಯತ್ನಗಳೆಲ್ಲವು ಹತ್ತರಲ್ಲಿ ಹನ್ನೊಂದು ಎಂಬಂತೆ ಆಗುತ್ತಲೇ ಸಾಗಿದೆ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಹು-ಧಾ ಮಹಾನಗರ ದೊಡ್ಡ ನಗರವೆಂಬ ಖ್ಯಾತಿ ಪಡೆದಿದೆ. ಆದರೆ ಇದರ ನಂತರದ ಸ್ಥಾನ ಪಡೆದ ಮೈಸೂರು, ಮಂಗಳೂರಿನಲ್ಲೂ ಆಟೋ ರಿಕ್ಷಾಗಳಿಗೆ ಮೀಟರ್‌ ಅಳವಡಿಕೆ ಕಡ್ಡಾಯವಾಗಿದೆ.

ಅವಳಿನಗರದಲ್ಲಿ ಮಾತ್ರ ಆಟೋ ರಿಕ್ಷಾಗಳಿಗೆ ಮೀಟರ್‌ ಅಳವಡಿಕೆ ಕಡ್ಡಾಯ ಗಗನಕುಸುಮವಾಗಿದೆ. ಹೀಗಾಗಿ ಆಟೋ ಚಾಲಕರು ತಾವು ಹೇಳಿದ್ದೇ ಬಾಡಿಗೆ ಎಂಬಂತಾಗಿದೆ. ಆಟೋಗಳಿಗೆ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪೊಲೀಸ್‌ ಆಯುಕ್ತರು ಅನೇಕ ಬಾರಿ ಪ್ರಯತ್ನಿಸಿದ್ದರು. ಆಟೋ ರಿಕ್ಷಾ ಮಾಲೀಕ-ಚಾಲಕರ ಸಂಘದ ಸದಸ್ಯರೊಂದಿಗೆ ಮಾತುಕತೆ, ಅಧಿಕಾರಿಗಳ ಸಭೆಗಳು ನಡೆದವೇ ಹೊರತು ಅನುಷ್ಠಾನವಾಗುತ್ತಲೇ ಇಲ್ಲ. ಇಂತಹ ಪ್ರಯತ್ನಗಳು 70ರ ದಶಕದಿಂದಲೂ ನಡೆಯುತ್ತಲೇ ಇವೆ. ಆದರೆ ಕಾರ್ಯಗತವಾಗುತ್ತಿಲ್ಲ.

ದುಪ್ಪಟ್ಟು ದರ ಆಕರಣೆ : ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕರು ನಿಗದಿಪಡಿಸಿದ ಬಾಡಿಗೆ ದರವನ್ನು ಪ್ರಯಾಣಿಕರಿಂದ ಪಡೆದುಕೊಳ್ಳುತ್ತಾರೆ. ಹು-ಧಾದಲ್ಲಿಯು ಕನಿಷ್ಟ 1.6 ಕಿಮೀಗೆ 28ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಆದರೆ ಇದು ಲೆಕ್ಕಕ್ಕುಂಟು ಆಟಕ್ಕಿಲ್ಲವೆಂಬಂತಾಗಿದೆ. ಇಲ್ಲಿನ ಜನರು ಕನಿಷ್ಟ 200 ಮೀಟರ್‌ ದೂರ ಪ್ರಯಾಣಿಸಬೇಕೆಂದರು ಕನಿಷ್ಟ 30-40 ರೂ. ಕೊಡಲೇಬೇಕು. ಯಾವ ಪ್ರದೇಶದಲ್ಲೂ ಇರದಷ್ಟು ಬಾಡಿಗೆ ದರವನ್ನು ಅವಳಿನಗರದ ಆಟೋ ರಿಕ್ಷಾ ಚಾಲಕರು ಜನರಿಂದ ಪಡೆಯುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಪ್ರಿಪೇಡ್‌ ಕೇಂದ್ರಗಳು ಸ್ಥಗಿತ : ಅವಳಿನಗರದಲ್ಲಿ ಆಟೋ ರಿಕ್ಷಾಗಳಿಗೆ ಮೀಟರ್‌ ಕಡ್ಡಾಯಗೊಳಿಸಬೇಕೆಂಬ ಬೇಡಿಕೆ-ಒತ್ತಡ ಸಾರ್ವಜನಿಕರಿಂದ ಹೆಚ್ಚಾದಾಗ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ 2008-09ರ ಅವಧಿಯಲ್ಲಿ ಪ್ರಿಪೇಡ್‌ ಆಟೋ ಕೇಂದ್ರ ಸ್ಥಾಪಿಸಲಾಯಿತು. ಅದು 2-3 ವರ್ಷಗಳ ವರೆಗೆ ಮುಂದುವರಿದುಕೊಂಡು ಬಂತು.

ಆದರೆ ಈ ಕೇಂದ್ರದಲ್ಲಿ ನಡೆದ ಒಂದು ಅಹಿತಕರ ಪ್ರಕರಣದಿಂದ ಅದು ಮುಚ್ಚಿಕೊಂಡಿದ್ದು, ಇಂದಿನ ವರೆಗೂ ತೆರೆದುಕೊಂಡೇ ಇಲ್ಲ. ಅದನ್ನು ತೆರವುಗೊಳಿಸಲಾಗಿದೆ. ಅದೇರೀತಿ ಹಳೆಯ ಬಸ್‌ ನಿಲ್ದಾಣದಲ್ಲೂ ಪ್ರಿಪೇಡ್‌ ಆಟೋ ರಿಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು. ಅದು 3-4 ತಿಂಗಳ ವರೆಗೆ ಮಾತ್ರ ಕಾರ್ಯನಿರ್ವಹಿಸಿತು. ನಂತರ ಅದು ಪೊಲೀಸರ ಸ್ಟ್ಯಾಂಡ್ ಆಗಿ ಪರಿವರ್ತಿತಗೊಂಡಿತು. ಈಗ ಅದನ್ನೂ ತೆರವುಗೊಳಿಸಲಾಗಿದೆ.

ಮೀಟರ್‌ಗೆ ರಸ್ತೆಯೇ ತೊಡಕು! :  ಅವಳಿನಗರದಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಅಲ್ಲದೆ ಇಂಧನ ಬೆಲೆ ದಿನೇ ದಿನೇ ಏರಿಕೆ ಆಗುತ್ತಿದೆ. ಹೀಗಾಗಿ ಆಟೋ ರಿಕ್ಷಾ ಚಾಲಕರಿಗೆ ಈಗಿನ ಬಾಡಿಗೆ ದರ ಹೊಂದುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಆಟೋ ರಿಕ್ಷಾ ಚಾಲಕರ ಸಮಸ್ಯೆ ಅರಿತುಕೊಳ್ಳುತ್ತಿಲ್ಲ. ಅಲ್ಲದೆ ಆಟೋ ರಿಕ್ಷಾ ಚಾಲಕರ ದಶಕಗಳ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಆಟೋ ರಿಕ್ಷಾ ನಿಲ್ದಾಣಗಳನ್ನು ಸ್ಥಾಪಿಸಿಕೊಡುವಂತೆ ಕೋರಿದರೂ ಕ್ಯಾರೆ ಎನ್ನುತ್ತಿಲ್ಲ. ಪಾಲಿಕೆಯವರು ರಸ್ತೆ ದುರಸ್ತಿ ಮಾಡುತ್ತಿಲ್ಲ. ಇವೆಲ್ಲ ಸಮಸ್ಯೆಗಳಿಂದಾಗಿಯೆ ಮೀಟರ್‌ ಕಡ್ಡಾಯ ಜಾರಿಗೆ ತೊಡಕಾಗುತ್ತಿದೆ. ಜೊತೆಗೆ ಟಂಟಂ ವಾಹನಗಳ ಶಹರ ಸಂಚಾರ ನಿಲ್ಲಿಸಬೇಕೆಂಬುದು ಆಟೋ ರಿಕ್ಷಾ ಸಂಘಟನೆಗಳ ಮುಖಂಡರ ಪ್ರಮುಖ ವಾದ.

ಅವಳಿನಗರದಲ್ಲಿ ಆಟೋ ರಿಕ್ಷಾಗಳಿಗೆ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸುತ್ತಿರುವ ಬಗ್ಗೆ ಇದುವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಆದರೂ ಆಟೋರಿಕ್ಷಾಗಳಿಗೆ ಮೀಟರ್‌ ಕಡ್ಡಾಯ ಮಾಡುವುದು ಸಾರ್ವಜನಿಕ ಹಿತಾಸಕ್ತಿಯದ್ದಾಗಿದೆ. ಒಂದು ವೇಳೆ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಈ ಬಗ್ಗೆ ಪ್ರಸ್ತಾವನೆ ಬಂದರೆ ಸಂಪೂರ್ಣ ಬೆಂಬಲ ನೀಡಲಾಗುವುದು.-ಆರ್‌. ದಿಲೀಪ್‌, ಹು-ಧಾ ಪೊಲೀಸ್‌ ಆಯುಕ್ತ

 ಮೀಟರ್‌ ಅಳವಡಿಕೆ ಕಡ್ಡಾಯಕ್ಕೆ ತಕರಾರಿಲ್ಲ. ಆದರೆ ಅವಳಿನಗರದಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿವೆ. ದಿನಂಪ್ರತಿ ಪೆಟ್ರೋಲ್‌, ಡಿಸೇಲ್‌ ದರ ಏರುತ್ತಿದೆ. ಸಮರ್ಪಕವಾಗಿ ಮೀಟರ್‌ ದುರಸ್ತಿ ಆಗುತ್ತಿಲ್ಲ. ಸಾರ್ವಜನಿಕರ ಅನುಕೂಲ ಜೊತೆ ಆಟೋ ಚಾಲಕರ ಸಮಸ್ಯೆಗಳೂ ನಿವಾರಣೆಯಾಗಬೇಕು. ಹಿಂದಿನ ಆಯುಕ್ತ ಗಗನದೀಪ ಅವರು ರೈಲ್ವೆ ನಿಲ್ದಾಣ, ಹಳೆಯ ಬಸ್‌ನಿಲ್ದಾಣದಲ್ಲಿ ನಿರ್ಮಿಸಿದ್ದ ಪ್ರಿಪೇಡ್‌ ಆಟೋರಿಕ್ಷಾ ಕೇಂದ್ರಗಳನ್ನು ಏಕೆ ಸ್ಥಗಿತಗೊಳಿಸಿದರು. ಅಧಿಕಾರಿಗಳು ನಮ್ಮ ಜೊತೆ ಸರಿಯಾಗಿ ಚರ್ಚಿಸಿ ಮೀಟರ್‌ ಕಡ್ಡಾಯ ಅನುಷ್ಠಾನಗೊಳಿಸಲಿ. ಕಾಟಾಚಾರಕ್ಕೆ ಸಭೆ ಕರೆದರೆ ಹೇಗೆ? ನಮ್ಮದು ಜೀವನವಲ್ಲವೇ?- ಶೇಖರಯ್ಯ ಮಠಪತಿ, ಹು-ಧಾ ಆಟೋ ರಿಕ್ಷಾ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ

 

-ಶಿವಶಂಕರ ಕಂಠಿ

ಟಾಪ್ ನ್ಯೂಸ್

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.