ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿಶೇಷ ಬಯಲು ಪ್ರವಾಸ
Team Udayavani, Oct 13, 2019, 5:58 AM IST
ವಿದ್ಯಾನಗರ: ಪುಸ್ತಕಗಳ ಓದಿ ಗಿಂತಲೂ ಅನುಭವದಿಂದ ಕಲಿತ ಪಾಠ ಸದಾ ಹಸಿರಾಗಿರುತ್ತದೆ. ನಾಲ್ಕು ಗೋಡೆಗಳ ನಡುವೆ ಕಲೆತುಹೋದ ಪೇಟೆಯ ಮಕ್ಕಳಿಗೆ ಸುತ್ತುಮುತ್ತಲ ಬೆಳೆದು ನಿಂತ ಕಟ್ಟಡಗಳು, ಬಿಸಿಗಾಳಿ, ವಾಹನಗಳ ದಟ್ಟಣೆಯಿಂದಾಚೆಗಿನ ಶಾಂತ ಬದುಕಿನ ಪರಿಚಯ ವಿರಳ. ಗ್ರಾಮದ ಹಸಿರುಸಿರಿ, ಪ್ರಶಾಂತ ವಾತಾವರಣ, ತಂಪು ಗಾಳಿಯ ಹಿತವನ್ನು ಅನುಭವಿಸುವ ಭಾಗ್ಯದಿಂದ ವಂಚಿತರಾದ ಮಕ್ಕಳನ್ನು ಹಳ್ಳಿಯತ್ತ ಮುನ್ನಡೆಸುವ ಪ್ರಯತ್ನವೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಾಮ ನಡಿಗೆ. ಶಾಲೆಯ 30 ವಿದ್ಯಾರ್ಥಿಗಳು ತಮ್ಮ ಅಧ್ಯಾಪಕ ವೃಂದದೊಂದಿಗೆ ಗ್ರಾಮನಡಿಗೆ ಎಂಬ ವಿಶೇಷ ಬಯಲು ಪ್ರವಾಸವನ್ನು ಹಮ್ಮಿಕೊಂಡು ಅಡೂರು ಪಾಂಡಿ ಗ್ರಾಮಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ ಕೃಷಿ ರೀತಿ, ವನಸಂಪತ್ತು, ಜೀವನ ಶೆ„ಲಿಯನ್ನು ನೇರವಾಗಿ ಅರಿತರು.
ನಿಜವಾದ ಬದುಕಿನ ಮೂಲ ಹಳ್ಳಿಯ ಕೃಷಿಭೂಮಿಯಲ್ಲಿದೆ ಎಂಬುದನ್ನು ಮನದಟ್ಟುಮಾಡುವ ನಿಟ್ಟಿನಲ್ಲಿ ಮಕ್ಕಳನ್ನು ದೇಲಂಪಾಡಿ ಗ್ರಾಮ ಪಂಚಾಯತ್ ಸದಸ್ಯ ರತನ್ ನಾಯ್ಕರವರ ಅಡಿಕೆ, ತೆಂಗು, ಕೊಕ್ಕೊ, ಕರಿಮೆಣಸು, ಭತ್ತದ ಕೃಷಿ ತೋಟಕ್ಕೆ ಕರೆದೊಯ್ಯಲಾಯಿತು. ತೋಟ ಸಂದರ್ಶಿಸಿದ ವಿದ್ಯಾರ್ಥಿಗಳಿಗೆ ದೇಲಂಪಾಡಿ ಕೃಷಿ ಅ ಕಾರಿ ಹಬೀಬ್‌ರವರು ಕೃಷಿಯ ಬಗ್ಗೆ ತರಗತಿ ನಡೆಸಿದರು. ಮಣ್ಣಿನ ಫಲವತ್ತತೆ, ಗುಣಮಟ್ಟ, ನೀರು ಸರಬರಾಜು, ಬಿತ್ತನೆ, ವಿವಿಧ ರೀತಿಯ ಗೊಬ್ಬರಗಳು, ಕೀಟನಾಶಕಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಮಾತ್ರವಲ್ಲದೆ ಹೆ„ನುಗಾರಿಕೆಯ ಬಗ್ಗೆಯೂ ಮಕ್ಕಳು ರತನ್ ಕುಮಾರ್‌ರವರಿಂದ ಮಾಹಿತಿ ಸಂಗ್ರಹಿಸಿದರು,
ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ 70ರ ಹರೆಯದ ರಘುವೀರ್ ನಾಯ್ಕರವರನ್ನು ಸಂದರ್ಶಿಸಿ ಅವರ ಶಾಲಾ ದಿನಗಳ ಅನುಭವಗಳನ್ನು ಕೇಳಿ ತಿಳಿದುಕೊಂಡರು.
ಪಾಂಡಿವನ ಸಂದರ್ಶಿಸಿದ ವಿದ್ಯಾರ್ಥಿಗಳು ಬಂದಡ್ಕ ರೇಂಜ್ ´ೋರೆಸ್ಟರ್ ಬಾಬು, ಕ್ಷಿಪ್ರ ಕಾರ್ಯಾಚರಣಾ ಘಟಕದ ´ೋರೆಸ್ಟರ್ ಬಿನು ಎಂಬವರಿಂದ ಕಾಡು ಮತ್ತು ಕಾಡಿನಿಂದಿರುವ ಪ್ರಯೋಜನಗಳು ಎಂಬ ವಿಷಯದ ಬಗ್ಗೆ ಮಾಹಿತಿ ಪಡೆದರು. ಅಡವಿ ಸಂದರ್ಶನಕ್ಕೆ ಮಾರ್ಗದರ್ಶನ ನೀಡಿದ ಚಂದ್ರ ಮಾಡರವರ ನೇತƒತ್ವದಲ್ಲಿ ವಿದ್ಯಾರ್ಥಿಗಳಿಗೆ ಹಲವು ಬಗೆಯ ಪ್ರಾಣಿ ಪಕ್ಷಿಗಳನ್ನು, ಗಿಡ ಮರ ಬಳ್ಳಿಗಳನ್ನು ಪರಿಚಯಿಸಲಾಯಿತು.
ತೂಗು ಸೇತುವೆಯನ್ನು ಕಂಡು ರೋಮಾಂಚಿತರಾದ ಮಕ್ಕಳು ಪಯಸ್ವಿನಿಯ ಸೊಬಗನ್ನು ಕಣ್ತುಂಬಿಕೊಂಡರು. ಸುಡು ಬಿಸಿಲಿನ ಬೇಗೆ ತಣಿಸುವ ಪ್ರಯತ್ನದಲ್ಲಿದ್ದ ಹಳ್ಳಿಯ ಹಾದಿಬದಿಯ ಮರಗಿಡಗಳ ನಡುವೆ ಹೆಜ್ಜೆ ಹಾಕಿದ ತಂಡಕ್ಕೆ ಹೊಸಮನೆ ತರವಾಡಿನ ದೇವಪ್ಪ ನಾಯ್ಕ, ಅಶೋಕ್ ತಲೆಮನೆ ಇವರ ನೇತƒತ್ವದಲ್ಲಿ ಬೆಳಗ್ಗಿನ ಉಪಹಾರ ನೀಡಲಾಯಿತು.
ಗ್ರಾಮನಡಿಗೆಗೆ ಪಾಂಡಿ ಸರಕಾರಿ ಹೆ„ಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ನಾರಾಯಣ ದೇಲಂಪಾಡಿ, ಕೃಷ್ಣಪ್ಪ, ರಾಧಾಮಣಿ, ನಿಶಾ, ಪಿಟಿಎ ಅಧ್ಯಕ್ಷ ಶಂಶುದ್ಧೀನ್, ವಿನು ಪಾಂಡಿ, ರವಿ ಬಯಲ್, ಅಜಯ ನೀಲಂಪಾರ, ಮಧು, ಸುಧಾಕರ, ಅಬ್ದುಲ್ಲ ಸಹಕರಿಸಿದರು. ಶಾಲಾ ಶಿಕ್ಷಕರಾದ ಜಯದೇವ್, ಪ್ರಸಾದ್, ರಂಜಿತ್ ಪೆರ್ಲ, ಬುಶ್ರಾ, ಸಫಾ, ವಿಮಲಾ ಟೀಚರ್, ಮೀನಾ, ಗಾಯತ್ರಿ, ಲೀಲಾ ಟೀಚರ್ ಪಾಂಡಿ ಪ್ರವಾಸದ ನೇತƒತ್ವ ವಹಿಸಿದರು.
ಮಾಹಿತಿ ಪಡೆದುಕೊಂಡೆವು
ಪ್ರಕೃತಿಯ ಸೊಬಗನ್ನೆಲ್ಲ ಒಡಲಲ್ಲಿ ತುಂಬಿ ನಿಂತಿರುವಂತೆ ಕಾಣುವ ಕಾಡಿಗೂ ನಾಡಿಗೂ ಅವಿನಾಭಾವ ಸಂಬಂಧವಿದೆ. ತಂಪಾದ ಗಾಳಿ, ಮರಗಿಡಗಳ ನೆರಳು, ಗದ್ದೆಗಳು, ತೋಟದಲ್ಲಿ ದ್ದ ಪ್ರಧಾನ ಬೆಳೆಗಳು ಮತ್ತು ಉಪಬೆಳೆಗಳ ಬಗ್ಗೆ ತಿಳಿದುಕೊಳ್ಳಲು ಗ್ರಾಮ ನಡಿಗೆ ಯಿಂದ ಸಾಧ್ಯವಾಯಿತು. ಹರಿಯುವ ನೀರು, ವಿವಿಧ ತರದ ಪಕ್ಷಿಗಳು, ಔಷಧೀಯ ಸಸ್ಯಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡೆವು. ಸಂತೋಷ ನೀಡಿದ ಪ್ರವಾಸ ಇದಾಗಿತ್ತು.
– ಶ್ವೇತಾ 7ಎ ತರಗತಿ ವಿದಾರ್ಥಿನಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.