ವೃತ್ತಿಕ್ಷೇತ್ರದಲ್ಲಿ ಉತ್ಕೃಷ್ಟತೆಯಿಂದ ಉನ್ನತಿ: ವಿಶ್ವ ಪವನ್ ಪತಿ
ಡಾಕ್ ಸೇವಾ ಪುರಸ್ಕಾರ-2019 ಪ್ರದಾನ
Team Udayavani, Oct 13, 2019, 4:47 AM IST
ಮಂಗಳೂರು: ವೃತ್ತಿಕ್ಷೇತ್ರ ಯಾವುದೇ ಇರಲಿ, ಅದರಲ್ಲಿ ಉತ್ಕೃಷ್ಟ ಸಾಧನೆಯ ಗುರಿಯೊಂದಿಗೆ ಕಾರ್ಯನಿರ್ವಹಿಸಿದಾಗ ಸಾಧಕರಾಗಿ ಮೂಡಿಬರಲು ಸಾಧ್ಯ ಎಂದು ಭಾರತೀಯ ಅಂಚೆ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ವಿಶ್ವ ಪವನ್ ಪತಿ ಹೇಳಿದರು.
ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಹಾಲ್‌ನಲ್ಲಿ ಶನಿವಾರ ಅಂಚೆ ಇಲಾಖೆಯಲ್ಲಿ ವಿಶಿಷ್ಟ ಸೇವೆಗಾಗಿ ರಾಜ್ಯ ಮಟ್ಟದಲ್ಲಿ ನೀಡುವ ಡಾಕ್ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು. ನಾವು ನಿರ್ವಹಿಸುವ ವೃತ್ತಿಯಲ್ಲಿ ಕಾರ್ಯದಕ್ಷತೆಯನ್ನು ಅಳವಡಿಸಿ ಕೊಳ್ಳಬೇಕು. ಅದು ವೃತ್ತಿ ಕ್ಷೇತ್ರದಲ್ಲಿ ನಮ್ಮನ್ನು ಇತರರು ಗುರುತಿಸುವಂತೆ ಮಾಡು ತ್ತದೆ ಎಂದರು.
ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ| ಚಾರ್ಲ್ಸ್ ಲೋಬೋ ಮಾತನಾಡಿ, ಡಾಕ್ ಸೇವಾ ಪ್ರಶಸ್ತಿಗೆ ಸಿಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಆಗಿ ತಮ್ಮ ನಾಮಪತ್ರಗಳನ್ನು ಕರ್ನಾಟಕ ಪೋಸ್ಟ್ ವೆಬ್‌ಸೈಟ್ ಮೂಲಕ ಸಲ್ಲಿಸಬೇಕು ಎಂದು ಕೋರಿದರು.
ಪೋಸ್ಟ್‌ಮಾಸ್ಟರ್ ಜನರಲ್‌ಗಳಾದ ರಾಜೇಂದ್ರ ಕುಮಾರ್, ವೀಣಾ ಶ್ರೀನಿವಾಸ್, ಅರವಿಂದ ವರ್ಮ, ಜನರಲ್ ಮ್ಯಾನೇಜರ್ ಸ್ವಪ್ನಾ ಉಪಸ್ಥಿತರಿದ್ದರು.
ಪುರಸ್ಕಾರ ವಿಜೇತರು
ಜಿಡಿಎಸ್ ವಿಭಾಗ: ಆರ್. ತಿಪ್ಪೆಸ್ವಾಮಿ ಶಾಖಾ ಅಂಚೆ ಪಾಲಕರು, (ಬೀದರ್ ಹಳ್ಳಿ ಶಾಖಾ ಅಂಚೆ ಕಚೇರಿ ಬೆಂಗಳೂರು ಪೂರ್ವ ವಿಭಾಗ), ಎಂಟಿಎಸ್ ವಿಭಾಗ: ಪಿ. ಭಾರತಿ ಕಣ್ಣನ್ (ಎಂಟಿಎಸ್ ಮೈಲ್ ಮೋಟಾರ್ ಸರ್ವಿಸ್ ಬೆಂಗಳೂರು), ಪೋಸ್ಟಲ್ ಅಸಿಸ್ಟೆಂಟ್ ವಿಭಾಗ: ಮಹಾಂತೇಶ ಶಿವಪ್ಪ ಹೊಸಮನಿ (ಉಪ ಅಂಚೆ ಪಾಲಕರು, ರಾಮದುರ್ಗಾ ಪಟ್ಟಣ ಉಪ ಅಂಚೆ ಕಚೇರಿ ಬೆಳಗಾವಿ ವಿಭಾಗ), ಸೂಪರ್‌ವೈಸರ್ ವಿಭಾಗ: ಎನ್. ಗೋವಿಂದಪ್ಪ (ಎಚ್‌ಎಸ್‌ಜಿ-2 ಮೇಲ್ವಿಚಾರಕರು, ಬೆಂಗಳೂರು ವಿಂಗಡಣ ವಿಭಾಗ), ಸಹಾಯಕ ಅಂಚೆ ಅಧೀಕ್ಷಕರ ವಿಭಾಗ: ಕೆ. ಶ್ರೀನಿಧಿ (ಸಹಾಯಕ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ), ಗ್ರೂಪ್ ಬಿ. ಅಧಿಕಾರಿಗಳ ವಿಭಾಗ: ಟಿ.ಆರ್. ಶಂಕರ್ (ಸಹಾಯಕ ಪೋಸ್ಟ್‌ಮಾಸ್ಟರ್ ಜನರಲ್, ಸಿಬಂದಿ ಮತ್ತು ಕಾನೂನು ಕೋಶ, ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಕಾರ್ಯಾಲಯ ಬೆಂಗಳೂರು ), ತಂತ್ರಜ್ಞಾನ ಉತ್ಕೃಷ್ಟತೆ ವಿಭಾಗ: ಎನ್. ವಾಸುದೇವನ್ (ಅಂಚೆ ಅಧೀಕ್ಷರು, ಚಿಕ್ಕೋಡಿ ವಿಭಾಗ), ಮಹಿಳಾ ಸಿಬಂದಿ: ಮಂಗಳಾ ಭಾಗವತ್ (ಅಂಚೆ ಪಾಲಕರು ಹುಲಸೂರ ಉಪ ಅಂಚೆ ಕಚೇರಿ ಬೀದರ್ ವಿಭಾಗ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್ ಚೋಲ್‌ಗೆ ಬೇಡಿಕೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.