ಕಾರ್ಪೊರೇಟ್ ತೆರಿಗೆ ಇಳಿಕೆ ; ಲಾಭವೋ ನಷ್ಟವೋ?
Team Udayavani, Oct 14, 2019, 5:25 AM IST
ಸೆಪ್ಟೆಂಬರ್ 20ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾರ್ಪೊರೇಟ್ ತೆರಿಗೆಯನ್ನು 30% ರಿಂದ 20%ಕ್ಕೆ ಇಳಿಸಲಾಗಿದೆ ಎಂದು ಘೋಷಿಸಿದರು. ಆ ಘೋಷಣೆಯನ್ನು ಈ ವರ್ಷದ ನಾಲ್ಕನೆಯ ಬಜೆಟ್ ಅಂತಾನೂ ಕರೆಯುತ್ತಾರೆ. ಯಾಕೆಂದರೆ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಲ ಪಡಿಸಲು ಈಗಾಗಲೇ ಮೂರು ಬಾರಿ ಬೇರೆ ಬೇರೆ ರೀತಿಯಲ್ಲಿ ದೇಶದ ಆರ್ಥಿಕ ನೀತಿಯಲ್ಲಿ ತಿದ್ದುಪಡಿ ತಂದಿದ್ದಾರೆ. ಹಣವನ್ನು ಮಾರುಕಟ್ಟೆಗೆ ಪಂಪ್ ಮಾಡಿದ್ದಾರೆ. ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿದ್ದು ಕೂಡ ಆ ತಿದ್ದುಪಡಿಕೆಯಲ್ಲಿ ಒಂದು. ನಮ್ಮ ದೇಶದ ಕಾರ್ಪೊರೇಟ್ ತೆರಿಗೆ, ಉಳಿದೆಲ್ಲ ದೇಶಗಳಿಗೆ ಹೋಲಿಸಿದರೆ ಅತೀ ಹೆಚ್ಚಾಗಿತ್ತು. ಆ ದಿನ ಹಣಕಾಸು ಸಚಿವರ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ಹೇಗಿತ್ತು ಅಂದರೆ, ಬಾಂಬೆ ಷೇರು ಮಾರುಕಟ್ಟೆಯ ಸೂಚ್ಯಂಕ ಒಂದೇ ದಿನಕ್ಕೆ 1,922 ಪಾಯಿಂಟ್ ಗಳಷ್ಟು ಏರಿತ್ತು. ಹತ್ತು ವರ್ಷಗಳಲ್ಲಿ ಈ ತರಹದ ಏರಿಕೆ ಕಂಡಿದ್ದು ಇದೇ ಮೊದಲ ಬಾರಿಗೆ. 2009ರ ಮೇ 18ರಂದು ಒಂದೇ ದಿನಕ್ಕೆ ಷೇರು ಮಾರುಕಟ್ಟೆಯ ಸೂಚ್ಯಂಕ 14% ಅಂದರೆ 2,110 ಪಾಯಿಂಟ್ ಹೆಚ್ಚಾಗಿದ್ದು ಇತಿಹಾಸ. ಈ ತರಹದ ಒಂದು ಪರಿಣಾಮ ಬೀರುವ ಒಂದು ನೀತಿಯ ಬಗ್ಗೆ ಜನ ಸಾಮಾನ್ಯರೂ ಕೂಡ ಅರಿಯುವುದು ಮುಖ್ಯ.
ಕಾರ್ಪೊರೇಟ್ ತೆರಿಗೆ ಏನು? ಎಷ್ಟು?
ಒಂದು ಕಂಪನಿಯ ಒಟ್ಟೂ ಲಾಭದ ಮೇಲೆ ಏನು ತೆರಿಗೆ ಅನ್ವಯಿಸುತ್ತದೆಯೋ ಅದನ್ನು ಕಾರ್ಪೊರೇಟ್ ತೆರಿಗೆ ಎನ್ನುತ್ತಾರೆ. ಉದಾಹರಣೆಗೆ, ಒಂದು ಕಂಪನಿ ಒಂದು ಕೋಟಿ ರೂಪಾಯಿ ಲಾಭ ಮಾಡಿದರೆ ತೆರಿಗೆ, ಮೇಲೆ¤ರಿಗೆ, ಎಜ್ಯುಕೇಷನ್ ಸೆಸ್ ಎಲ್ಲ ಸೇರಿ 35.41 ಲಕ್ಷ ರೂಪಾಯಿ ತೆರಿಗೆ ಕೊಡಬೇಕಿತ್ತು. ಈಗ ಅದನ್ನು ಹತ್ತು ಪ್ರತಿಶತ ಕಡಿಮೆ ಮಾಡಿ 25.41 ಲಕ್ಷಕ್ಕೆ ಇಳಿಸಿದ್ದಾರೆ. ಇಷ್ಟು ಸರಳವಾಗಿಲ್ಲ ಲೆಕ್ಕಾಚಾರ. ಅದರಲ್ಲಿ ಹಲವು ಪದರಗಳಿವೆ. ತೆರಿಗೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ. ಪ್ರತಿ ವರ್ಷ ಕಂಪನಿ ಗಳಿಸುವ ಲಾಭಕ್ಕೆ ಅನುಸಾರವಾಗಿ, ದೇಶಿಯ ಹಾಗೂ ಅಥವಾ ವಿದೇಶದ ಕಂಪನಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಕಾರ್ಪೊರೇಟ್ ತೆರಿಗೆಯ ವಿನಾಯತಿಯು ನಮ್ಮ ದೇಶದ ಬೊಕ್ಕಸದ ಸುಮಾರು 1.45 ಲಕ್ಷ ಕೋಟಿ ಹಣವನ್ನು ಕಡಿಮೆ ಮಾಡಲಿದೆ.
ಸಾಮಾನ್ಯ ಜನಕ್ಕೆ ಏನು ಲಾಭ?
ಇಂದು ಸಾಮಾನ್ಯರು ಕೂಡ ಮ್ಯೂಚುಯಲ್ ಫಂಡ್, ಎಸ್‌ಐಪಿ ಅಂತ ತಾವು ಗಳಿಸಿದ ಆದಾಯದಲ್ಲಿ ಸ್ವಲ್ಪ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುತ್ತಾರೆ. ಒಬ್ಬರು 4-5 ಸಾವಿರ, ಇನ್ನೊಬ್ಬರು 10-15 ಸಾವಿರ ಹೀಗೆ, ಅವರವರ ದೈನಂದಿನ ಬದುಕಿನ ಖರ್ಚಿನಲ್ಲಿ ಉಳಿಸಿದ ಹಣ ಅದು. ಕಳೆದ ಎರಡು ವರ್ಷಗಳಲ್ಲಿ ಇಂತಹ ಸುಮಾರು ಮೂರು ಲಕ್ಷ ಕೋಟಿ ಹಣ ಮಾರುಕಟ್ಟೆಯಲ್ಲಿ ಹೂಡಿಕೆಯಾಗಿದೆ. ದಿನವೂ ಷೇರು ಮಾರುಕಟ್ಟೆ ಕುಸಿಯುತ್ತಿದ್ದರೆ, ಎಕನಾಮಿ ದುರ್ಬಲವಾಗುತ್ತಿದ್ದರೆ ನಷ್ಟ ಯಾರಿಗೆ? ಸಾಮಾನ್ಯ ಜನರಿಗೆ ತಾನೇ? ಕಳೆದ ಎರಡು ವರ್ಷಗಳಲ್ಲಿ ಸಾಮಾನ್ಯ ಜನರ ಹೂಡಿಕೆ 3 ಲಕ್ಷ ಕೋಟಿ. ಇದಕ್ಕೆ ಹೋಲಿಸಿದರೆ ವಿದೇಶಿ ಬಂಡವಾಳ, ದೊಡ್ಡ ದೊಡ್ಡ ಹೂಡಿಕೆದಾರರಿಂದ ಬಂದ ಹಣ ಕೇವಲ 20,000 ಕೋಟಿ ಮಾತ್ರ. ಇಂಥ ಸಂದರ್ಭದಲ್ಲಿ, ಹಣಕಾಸು ಸಚಿವರು ತಂದ ತೆರಿಗೆ ವಿನಾಯಿತಿ ಸಾಮಾನ್ಯರಲ್ಲಿ ವಿಶ್ವಾಸ ಹೆಚ್ಚಿಸುತ್ತದೆ, ಅವರು ಹೂಡಿದ ಹಣಕ್ಕೆ ಡಿವಿಡೆಂಡ್ ಮೂಲಕ, ಷೇರಿನ ಬೆಲೆ ಏರುವುದರ ಮೂಲಕ ಲಾಭ ಸಿಗುತ್ತದೆ.
– ವಿಕ್ರಮ್ ಜೋಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.