“ಭರಾಟೆ’ ಟ್ರೇಲರ್ಗೆ ಭರ್ಜರಿ ರೆಸ್ಪಾನ್ಸ್
ಕ್ಷಣಾರ್ಧದಲ್ಲಿ ಲಕ್ಷಾಂತರ ಜನರ ವೀಕ್ಷಣೆ
Team Udayavani, Oct 14, 2019, 3:04 AM IST
ಶ್ರೀಮುರಳಿ ಅಭಿನಯದ “ಭರಾಟೆ’ ಬಿಡುಗಡೆಯ ಮುನ್ನವೇ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಪೋಸ್ಟರ್, ಹಾಡು, ಟೀಸರ್ ಹೀಗೆ ಎಲ್ಲದರಲ್ಲೂ ಸುದ್ದಿ ಮಾಡಿದೆ. ಈಗ ಹೊಸ ಸುದ್ದಿಯೆಂದರೆ, ಭಾನುವಾರ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಪಡೆದಿದೆ. ಟ್ರೇಲರ್ ನೋಡಿದವರಿಗೆ ಮಾಸ್ ಜೊತೆಗೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಫೀಲ್ ಸಿಕ್ಕಿದ್ದು, ತಮ್ಮ ಪ್ರೀತಿಯ ಹೀರೋನ ಮಾಸ್ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ನಲ್ಲಿ ಬೆಳಗ್ಗೆ 11.59ಕ್ಕೆ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ, ಗಂಟೆಗಳಲ್ಲೇ ಲಕ್ಷಾಂತರ ವೀಕ್ಷಣೆಯಾಗಿದ್ದು ವಿಶೇಷ. “ಭರಾಟೆ’ ಸಖತ್ ಹೈವೋಲ್ಟೆಜ್ ಆ್ಯಕ್ಷನ್ ಇರುವ ಚಿತ್ರ ಅನ್ನೋದು, ಮೊದಲ ಟೀಸರ್ನಲ್ಲೇ ಸಾಬೀತು ಮಾಡಿತ್ತು. ಈಗ ಬಿಡುಗಡೆಯಾಗಿರುವ ಥಿಯೇಟರಿಕಲ್ ಟ್ರೇಲರ್ ಕೂಡ ಸಖತ್ ಪವರ್ಫುಲ್ ಆಗಿದೆ ಎಂಬುದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಸಾಕ್ಷಿ. ನಿರ್ದೇಶಕ “ಬಹದ್ದೂರ್’ ಚೇತನ್ ಕುಮಾರ್ ಅವರಿಗೆ ಇದು ಮೂರನೇ ಸಿನಿಮಾ.
ಶ್ರೀಮುರಳಿ ಅವರ ಜೊತೆ ಮೊದಲ ಕಾಂಬಿನೇಷನ್. ಇನ್ನು ಈ ಚಿತ್ರದಲ್ಲಿ ಹಲವು ವಿಶೇಷತೆಗಳೂ ಇವೆ. ಇದೇ ಮೊದಲ ಮೊದಲ ಬಾರಿಗೆ “ಭರಾಟೆ’ ಮೂಲಕ ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಅವರು ಖಳ ನಟರುಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಒಟ್ಟು 17 ಮಂದಿ ಖಳನಟರು ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ. ಅವರೊಂದಿಗೆ ಶ್ರೀಮುರಳಿ ಅವರು ಕಾಣಿಸಿಕೊಳ್ಳುತ್ತಿದ್ದು, ಭರ್ಜರಿ ಆ್ಯಕ್ಷನ್ ಮೂಲಕ ರಂಜಿಸಲಿದ್ದಾರೆ ಎಂಬುದು ಸಿನಿಮಾ ತಂಡದ ಮಾತು.
ಅಂದಹಾಗೆ, ಅ.18 ರಂದು “ಭರಾಟೆ’ ಬಿಡುಗಡೆಯಾಗುತ್ತಿದ್ದು, ಶ್ರೀಮುರಳಿ ಅವರಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಅವಿನಾಶ್ ಇತರರು ಇದ್ದಾರೆ. ಈ ಚಿತ್ರವನ್ನು ಸುಪ್ರಿತ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಗಿರೀಶ್ ಅವರ ಛಾಯಾಗ್ರಹಣವಿದೆ. ದೀಪು ಎಸ್.ಕುಮಾರ್ ಅವರ ಸಂಕಲನವಿದೆ. ರವಿವರ್ಮ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.