ಆದರ್ಶ ರಾಜ್ಯದ ಪರಿಕಲ್ಪನೆಯೇ ರಾಮಾಯಣ
Team Udayavani, Oct 14, 2019, 3:00 AM IST
ಜಿಲ್ಲಾದ್ಯಂತ ಭಾನುವಾರ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೀಲುಕುದುರೆ, ಡೊಳ್ಳುಕುಣಿತ, ನಂದಿಧ್ವಜ ಕುಣಿತ, ವೀರಗಾಸೆ ಮತ್ತಿತರ ಆಕರ್ಷಕ ಜಾನಪದ ಕಲಾತಂಡಗೊಂದಿಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ರಾಮಾಯಣ ಸಂದೇಶ ಸಾರುವ ಸ್ತಬ್ಧಚಿತ್ರಗಳು ಮನಸೂರೆಗೊಂಡವು.
ವಾಲ್ಮೀಕಿ ತತ್ವ, ಸಂದೇಶ ಹಾಗೂ ರಾಮಾಯಣದ ಮೌಲ್ಯ ಅಳಡಿಸಿಕೊಳ್ಳುವಂತೆ ಗಣ್ಯರು ಸಲಹೆ ನೀಡಿದರು. “ರಾಜ್ಯಗಳು, ದೇಶಗಳು ಹೇಗೆ ಇರಬೇಕು, ಪ್ರಜೆಗಳು ಹೇಗೆ ಆದರ್ಶವಾಗಿರಬೇಕು ಎಂಬುದನ್ನು ಹೇಳುವ ರಾಮರಾಜ್ಯದ ಪರಿಕಲ್ಪನೆಯನ್ನು ರಾಮಾಯಣದಲ್ಲಿ ವಾಲ್ಮೀಕಿ ಪ್ರತಿಪಾದಿಸಿದ್ದಾರೆ’ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಬಣ್ಣಿಸಿದರು. ಸಮುದಾಯದ ಗಣ್ಯರು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮೆರವಣಿಗೆ ವೇಳೆ ತಮಟೆ ಸದ್ದಿಗೆ ಕಲಾತಂಡಗಳೊಂದಿಗೆ ಜಿ.ಟಿ.ದೇವೇಗೌಡ ಕತ್ತಿಯನ್ನು ಝಳಪಿಸುತ್ತಾ ಸ್ಟೆಪ್ ಹಾಕಿ ಗಮನ ಸೆಳೆದರು.
ಮೈಸೂರು: ವಿಶ್ವದಲ್ಲಿರುವ ಎಲ್ಲಾ ಜನರು, ಎಲ್ಲಾ ಕುಟುಂಬಗಳು ಆದರ್ಶವಾಗಿರಬೇಕು. ಜೊತೆಗೆ ಆದರ್ಶವಾಗಿಯೇ ಬಾಳಬೇಕು ಎಂಬ ತತ್ವ, ನೀತಿ, ಮಾರ್ಗದರ್ಶನವನ್ನು ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ನಗರದ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಗೆಚಾಲನೆ ನೀಡಿ ಮಾತನಾಡಿದರು.
ಮನುಕುಲಕ್ಕೆ ಅತಂತ್ಯ ಶ್ರೇಷ್ಠವಾದ ಆದರ್ಶ ಜೀವನವನ್ನು ಒಳಗೊಂಡಿರುವ ರಾಮಾಯಣ ಮಹಾಕಾವ್ಯವನ್ನು ವಾಲ್ಮೀಕಿಯರು ನೀಡಿದ್ದಾರೆ. ನಮ್ಮ ರಾಜ್ಯಗಳು, ದೇಶಗಳು ಹೇಗೆ ಇರಬೇಕು, ಪ್ರಜೆಗಳು ಹೇಗೆ ಆದರ್ಶವಾಗಿರಬೇಕು ಎಂಬುದನ್ನು ಹೇಳುವ ರಾಮರಾಜ್ಯದ ಪರಿಕಲ್ಪನೆಯನ್ನು ರಾಮಾಯಣದ ಮೂಲಕ ನೀಡಿದ್ದಾರೆ. ಅನ್ಯಾಯದ ವಿರುದ್ಧ ಆಂಜನೇಯ ಹೋರಾಟ ನಡೆಸಿದಂತೆ ಪ್ರತಿಯೊಬ್ಬರು, ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು ಎಂದರು.
ಸೀತೆ ತನಗೆ ಪತಿಯೇ ಮುಖ್ಯ ಎಂದು ಶ್ರೀರಾಮನ ಜೊತೆಗೆ ವನವಾಸಕ್ಕೆ ಹೋದಳು.
ರಾಮನೂ ಕೂಡ ಏಕಪತ್ನಿ ವತ್ರಸ್ಥನಾಗಿದ್ದ, ಇವೆಲ್ಲಾ ನಮ್ಮ ಸಮಾಜದಲ್ಲಿ ಆದರ್ಶ ಕುಟುಂಬಗಳು ಹೇಗಿರಬೇಕು ಎಂಬುದನ್ನು ಹೇಳಿಕೊಟ್ಟಿವೆ ಎಂದು ತಿಳಿಸಿದರು. ಶಾಸಕ ಎಲ್.ನಾಗೇಂದ್ರ ಮಾತನಾಡಿ, ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯ ಎಂದೆಂದಿಗೂ ಶಕ್ತಿ ಶಾಲಿಯಾಗಿಯೇ ಉಳಿದಿದೆ. ಅವರ ತತ್ವ, ಆದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಹೇಳಿದರು.
ವಾಲ್ಮೀಕಿ ಕುರಿತು ಧಾರವಾಡ ಕರ್ನಾಟಕ ಕಲಾ ಕಾಲೇಜಿನ ಉಪ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ನಗರಪಾಲಿಕೆಯ ಉಪ ಮೇಯರ್ ಶಫಿ ಅಹಮದ್, ಸದಸ್ಯರಾದ ಶಿವಕುಮಾರ್, ಗುರುವಿನಾಯಕ, ಲೋಕೇಶ್ ಪಿಯಾ, ಶೋಭಾ, ಜಿ.ಪಂ ಸದಸ್ಯರಾದ ಬೀರಹುಂಡಿ ಬಸವಣ್ಣ, ಅರುಣ್ ಕುಮಾರ್, ಮೈಸೂರು ತಾಲೂಕು ನಾಯಕ ಸಂಘದ ಅಧ್ಯಕ್ಷ ಕೆಂಪನಾಯಕ, ನಾರಾಯಣ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.