ಬಳ್ಕೂರಿನ ಬುಗುರಿಜೆಡ್ಡು ಕ್ರೀಡಾಂಗಣ ಅಭಿವೃದ್ಧಿಗೆ ಮೀನಮೇಷ
Team Udayavani, Oct 14, 2019, 5:17 AM IST
ಬಸ್ರೂರು: ಬಳ್ಕೂರು ಗ್ರಾಮದ ಗುಲ್ವಾಡಿ ಕಳುವಿನ ಬಾಗಿಲಿನ ಸಮೀಪದ ಬುಗುರಿ ಜೆಡ್ಡು’ವಿನಲ್ಲೊಂದು ಕ್ರೀಡಾಂಗಣವಿದ್ದು, ಇದರ ಅಭಿವೃದ್ಧಿಗೆ ಅನುದಾನದ ಕೊರತೆಯಿದೆ.
ಆದರೆ ಕಳೆದೆರಡು ವರ್ಷಗಳ ಹಿಂದೆ ಬಳ್ಕೂರಿನ ಯುವ ಆಟಗಾರರು ಸೇರಿ ಇಲ್ಲೊಂದು “ಫ್ರೆಂಡ್ಸ್ ಕಿಕೆಟರ್’ ಎನ್ನುವ ಕ್ರಿಕೆಟ್ ತಂಡವನ್ನು ಕಟ್ಟಿದ್ದರು. ಅನಂತರದ ದಿನಗಳಲ್ಲಿ ಇಲ್ಲೊಂದು ಉತ್ತಮ ಗುಣಮಟ್ಟದ ಕ್ರಿಕೆಟ್ ಪಿಚ್ ಅನ್ನು ನಿರ್ಮಿಸಲಾಯಿತು. ಉತ್ತಮ ಕ್ರಿಕೆಟ್ ತಂಡದ ಜತೆ ಅಲ್ಲಿಯೇ ಸಮೀಪ ಒಂದು ವಾಲಿಬಾಲ್ ಅಂಕಣವನ್ನೂ ಹಾಕಲಾಯಿತು. ಈ ಕ್ರೀಡಾಂಗಣದ ಸುತ್ತಲೂ ಸಿಮೆಂಟ್ ಬೆಂಚ್‌ಗಳನ್ನು ವೀಕ್ಷಕರಿಗಾಗಿ ಇಡಲಾಗಿತ್ತು.
ಈ ಕ್ರೀಡಾಂಗಣದ ಹೊರಭಾಗದಲ್ಲಿ ದಿ| ಸತೀಶ್ ಮೊಗವೀರ ಸ್ಮರಣಾರ್ಥ ವಿಶ್ರಾಂತಿಗಾಗಿ ಒಂದು ಕುಟೀರವನ್ನು ನಿರ್ಮಿಸಲಾಯಿತು. ಈಗಾಗಲೇ ಇಲ್ಲಿ ತಾಲೂಕು, ಜಿಲ್ಲಾ ಮಟ್ಟದ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟವನ್ನು ನಡೆಸ ಲಾಗಿದೆ. ಊರ ಹಿರಿಯರ ಮಾರ್ಗದರ್ಶನ ಮತ್ತು ಉತ್ಸಾಹಿ ಕ್ರೀಡಾಪಟುಗಳಿಂದಷ್ಟೆ ಈ ಕ್ರೀಡಾಂಗಣ ನಿರ್ಮಾಣವಾಗಿದೆ. ಇಲ್ಲಿನ ಯುವಕರ ತಂಡಕ್ಕೆ ಈ ಕ್ರೀಡಾಂಗಣ ವನ್ನು ಇನ್ನಷ್ಟು ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಬೇಕೆಂಬ ಆಶಯ ಇತರರಿಗೆ ಆದರ್ಶವಾಗಿದೆ.
ಜಿಲ್ಲಾಧಿಕಾರಿಗೆ ಪತ್ರ
ಈ ಬುಗುರಿ ಜೆಡ್ಡುವಿನಲ್ಲಿ ನಿರ್ಮಾಣವಾದ ಕ್ರೀಡಾಂಗಣದ ಬಗ್ಗೆ ಗ್ರಾ.ಪಂ.ನಿಂದ ಹಣವನ್ನು ವಿನಿಯೋಗಿಸಬೇಕೆಂಬ ಆಶಯವಿದೆ. ಆದರೆ ಈ ಜಾಗ ಇನ್ನೂ ಸರಕಾರಿ ಸ್ಥಳವಾಗಿಯೇ ಉಳಿದುಕೊಂಡಿದೆ. ಈ ಬಗ್ಗೆ ಕ್ರೀಡಾಂಗಣವಾಗಿ ಅಭಿವೃದ್ಧಿ ಪಡಿಸುವುದಕ್ಕಾಗಿ ಈ ಸ್ಥಳವನ್ನು ಮೀಸಲಿರಿಸಬೇಕೆಂದು ತಾಲೂಕು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ಅಕ್ಷತ್ ಶೇರೆಗಾರ್,
ಅಧ್ಯಕ್ಷರು, ಗ್ರಾ.ಪಂ. ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.