![R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…](https://www.udayavani.com/wp-content/uploads/2024/12/ashwin-415x277.jpg)
ಹರೆಗೋಡು ರಸ್ತೆ ಹೊಂಡಮಯ: ವಾಹನ ಸವಾರರ ಸರ್ಕಸ್
Team Udayavani, Oct 14, 2019, 5:52 AM IST
![1310KDPP3A](https://www.udayavani.com/wp-content/uploads/2019/10/1310KDPP3A-620x428.jpg)
ಹೆಮ್ಮಾಡಿ: ಹೆಮ್ಮಾಡಿ – ಕೊಲ್ಲೂರು ಮುಖ್ಯ ರಸ್ತೆಯ ಕಟ್‌ಬೆಲೂ¤ರು ಬಳಿಯಿಂದ ಹರೆಗೋಡಿಗೆ ಸಂಪರ್ಕ ಕಲ್ಪಿಸುವ ಪಂಚಾಯತ್ ರಸ್ತೆಯೂ ಹೊಂಡ – ಗುಂಡಿಮಯವಾಗಿದ್ದು, ಈ ಮಾರ್ಗ ದಲ್ಲಿ ವಾಹನಗಳು ಸಂಚರಿಸುವುದೇ ಕಷ್ಟಕರವಾಗಿದೆ.
ಮುಖ್ಯರಸ್ತೆಯಿಂದ ಹರೆಗೋಡಿನ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹೋಗಲು ಕೂಡ ಈ ರಸ್ತೆ ಪ್ರಮುಖವಾಗಿದ್ದು, ಈ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಹತ್ತಾರು ವಾಹನಗಳು ನಿತ್ಯ ಸಂಚರಿಸುತ್ತವೆ.
ಸುಮಾರು 2 ಕಿ.ಮೀ. ದೂರದ ರಸ್ತೆಯಲ್ಲಿ ಮೊದಲಿಗೆ ಅಂದಾಜು 200 ಮೀ.ವರೆಗೆ ಡಾಮರು ಆಗಿದೆ. ಬಳಿಕ ಮಧ್ಯದಲ್ಲಿ ಸುಮಾರು 100 ಮೀ.ವರೆಗೆ ಕಳೆದ ವರ್ಷ ಜಿ.ಪಂ. ಅನುದಾನದಡಿ 3 ಲ.ರೂ. ವೆಚ್ಚದಲ್ಲಿ ಕಾಂಕ್ರೀಟ್ ಮಾಡಲಾಗಿತ್ತು. 8 ವರ್ಷಗಳ ಹಿಂದೆ ಈ ರಸ್ತೆಯ ಆರಂಭದಿಂದ ಸುಮಾರು 200 ಮೀ. ವರೆಗೆ ಡಾಮರುಗೊಂಡಿತ್ತು. ಆದರೆ ಅದು ಕೂಡ ಅಲ್ಲಲ್ಲಿ ಎದ್ದು ಹೋಗಿದೆ.
ಚರಂಡಿಯೇ ಇಲ್ಲ
ಈ ರಸ್ತೆ ಇಷ್ಟೊಂದು ಹೊಂಡ – ಗುಂಡಿಗಳಿರಲು ಪ್ರಮುಖ ಕಾರಣ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ. ಇದ್ದರೂ ಅದು ಹೂಳು ತುಂಬಿ, ಗಿಡ – ಗಂಟಿ ಬೆಳೆದು ನೀರು ಹರಿಯದಂತಾಗಿದೆ. ಇದರಿಂದ ರಸ್ತೆಯಲ್ಲಿಯೇ ನೀರು ನಿಂತು, ದೊಡ್ಡ – ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಅಪಘಾತವನ್ನು ಆಹ್ವಾನಿಸುವಂತಿದೆ.
ಶಾಸಕರ ಅನುದಾನ ಮಂಜೂರು
ಈ ರಸ್ತೆಯ ಸಂಪೂರ್ಣ ಡಾಮರಿಗೆ ಹೆಚ್ಚಿನ ಅನುದಾನ ಬೇಕಾಗಿದೆ. ಆದರೆ ಈ ವರ್ಷ ಶಾಸಕ ಸುಕುಮಾರ್ ಶೆಟ್ಟಿ ಅವರು ರಸ್ತೆಯ ಅರ್ಧ ಭಾಗದ ಕಾಮಗಾರಿಗೆ ಸುಮಾರು 4-5 ಲ.ರೂ ಅನುದಾನ ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿ ಆರಂಭಿಸುವ ಬಗ್ಗೆ ಗಮನ ಹರಿಸಲಾಗುವುದು.
-ಶೋಭಾ ಜಿ. ಪುತ್ರನ್, ಸ್ಥಳೀಯ ಜಿ.ಪಂ. ಸದಸ್ಯರು
ತುರ್ತಾಗಿ ದುರಸ್ತಿಗೊಳಿಸಿ
ಈ ಹಿಂದೆ ಹಲವು ಬಾರಿ ಶಾಸಕರು ಸಹಿತ ಸಂಬಂಧಪಟ್ಟ ಎಲ್ಲರಿಗೂ ಈ ರಸ್ತೆ ಡಾಮರಿಗೆ ಮನವಿ ಮಾಡಲಾಗಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗಿದ್ದು, ಈಗಲಾದರೂ ಈ ರಸ್ತೆಯ ದುರಸ್ತಿ ಬಗ್ಗೆ ಗಮನಹರಿಸಲಿ.
-ವಿಶ್ವನಾಥ್ ಹರೆಗೋಡು, ರಿಕ್ಷಾ ಚಾಲಕರು,
ಟಾಪ್ ನ್ಯೂಸ್
![R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…](https://www.udayavani.com/wp-content/uploads/2024/12/ashwin-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…](https://www.udayavani.com/wp-content/uploads/2024/12/ashwin-150x100.jpg)
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
![Surthkal-Spota](https://www.udayavani.com/wp-content/uploads/2024/12/Surthkal-Spota-150x90.jpg)
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
![Traffic-UPI](https://www.udayavani.com/wp-content/uploads/2024/12/Traffic-UPI-150x90.jpg)
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
![Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು](https://www.udayavani.com/wp-content/uploads/2024/12/vv-4-150x84.jpg)
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
![Gold-saffron](https://www.udayavani.com/wp-content/uploads/2024/12/Gold-saffron-150x90.jpg)
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.