ಪೈವಳಿಕೆ :ಎಡರಂಗದ ಪ್ರಚಾರ ರ‌್ಯಾಲಿಯಲ್ಲಿ ಮುಖ್ಯಮಂತ್ರಿ
ಮಂಜೇಶ್ವರ ಉಪ ಚುನಾವಣೆ
Team Udayavani, Oct 14, 2019, 5:22 AM IST
ಕುಂಬಳೆ: ಮಂಜೇಶ್ವರದ ವಿಧಾನ ಸಭಾಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಡರಂಗ ಅಭ್ಯರ್ಥಿಯ ಗೆಲುವು ಅನಿವಾರ್ಯವಾಗಿದೆ ಎಂದು ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಪೈವಳಿಕೆ ನಗರದಲ್ಲಿ ನಡೆದ ಎಡರಂಗದ ಉಪ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಮೂರುವರೆ ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುತ್ತಿರುವ ಎಡರಂಗದತ್ತ ಬೆಂಬಲ ಹೆಚ್ಚಿದೆ. ಇದೇ ಕಾರಣದಿಂದ ರಾಜ್ಯದಲ್ಲಿ ಕಳೆದ ಬಾರಿ ನಡೆದ ಎರಡೂ ಉಪ ಚುನಾವಣೆಗಳಲ್ಲಿ ಎಡರಂಗ ಜಯಭೇರಿ ಬಾರಿಸಿದೆ ಎಂದು ಸಿಎಂ ಹೇಳಿದರು. ರಾಜ್ಯದಲ್ಲಿ ಹೆಚ್ಚಿನ ಎಲ್ಲ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿದ್ದು, ಕೇವಲ 53 ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ನಾಲ್ಕು ವರ್ಷಗಳ ಹಿಂದೆ ಐಕ್ಯರಂಗದ ಕಾಲಾವಧಿಯಲ್ಲಿ ಭ್ರಷ್ಟಾಚಾರದ ಕೂಪವಾಗಿದ್ದ ಕೇರಳ ರಾಜ್ಯವು ಪ್ರಸ್ತುತ ಸುಸ್ಥಿರ ಅಭಿ
ವೃದ್ಧಿಯತ್ತ ದಾಪುಗಾಲು ಹಾಕಿದೆ ಎಂದರು.
ರಬ್ಬರ್,ಹಲಸು, ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸರಕಾರಪೊÅàತ್ಸಾಹ ನೀಡುತ್ತಿದೆ. ಭತ್ತ ಕೃಷಿಗೆ ಉತ್ತೇಜನ ನೀಡುವ ಮೂಲಕ ಪಾಳು ಬಿದ್ದ ಕೃಷಿ ಭೂಮಿಯನ್ನು ಫಲವತ್ತಾಗಿಸುತ್ತಿದೆ. ತರಕಾರಿ ಕೃಷಿಯಲ್ಲೂ ಸ್ವಾವಲಂಬನೆ ಸಾಧಿಸುತ್ತಿರುವ ಕೇರಳ ರಾಜ್ಯವು ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು. ಶೀತಲೀಕರಣ ಘಟಕಗಳನ್ನು ಸ್ಥಾಪಿಸುವ ಮೂಲಕ ತರಕಾರಿಗಳನ್ನು ವಾರದ ಕಾಲ ಕೆಡದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಉದ್ದಿಮೆ, ಹಣಕಾಸು, ಪಿಂಚಣಿ ಸೌಲಭ್ಯ, ಅನಿವಾಸಿ ಕೇರಳಿಗರಿಗೆ ಹೂಡಿಕೆ ಸೌಲಭ್ಯವನ್ನು ಕಲ್ಪಿಸುವ ಮೂಲಕ ಆರ್ಥಿಕ ಅಭಿವೃದ್ಧಿಯ ಲಕ್ಷವನ್ನಿಡಲಾಗಿದೆ ಎಂದರು. ಭೂ ರಹಿತರಿಗೆ ಭೂಮಿ, ವಸತಿ ವ್ಯವಸ್ಥೆ, ಮೀನುಗಾರರಿಗೆ ವಸತಿ ನಿರ್ಮಾಣ ವ್ಯವಸ್ಥೆ, ಲೆ„ಫ್ ಜಾಕೆಟ್ ಯೋಜನೆ, ಮರೀನ್ ಅಂಬುಲೆನ್ಸ್ ಸೇವೆಗಳನ್ನು ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಿಮಿತ್ತ ರಾಜ್ಯ ಸರಕಾರದ ವತಿಯಿಂದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೆದ್ದಾರಿ ಪ್ರಾಧಿಕಾರವು ರಸ್ತೆ ನಿರ್ಮಾಣಕ್ಕೆ ಗುತ್ತಿಗೆ ನೀಡುವುದು ಮಾತ್ರವೇ ಬಾಕಿ ಉಳಿದಿದೆ ಎಂದರು. ಮಲೆನಾಡು ಹೆದ್ದಾರಿ ನಿರ್ಮಾಣ ಪುರೋಗತಿಯಲ್ಲಿದ್ದು, ಕರಾವಳಿ ಹೆದ್ದಾರಿ ನಿರ್ಮಾಣವು ಆರಂಭಗೊಂಡಿದೆ ಮಂಜೇಶ್ವರ ದಿಂದ ತಿರುವನಂತಪುರದವರೆಗೆ ಸಾಗುವ ಮಲೆನಾಡು ಹೆದ್ದಾರಿಯು ಜನಸಾಮಾನ್ಯರ ಆರ್ಥಿಕತೆ ವೃದ್ಧಿಯಲ್ಲಿ ಪೂರಕ ವಾತಾವರಣ ಸƒಷ್ಟಿಸಲಿದೆ ಎಂದರು.
ಹಲವು ಅಭಿವೃದ್ಧಿಗಳಲ್ಲಿ ಕೇರಳ ರಾಜ್ಯವು ಪ್ರಥಮ ಸ್ಥಾನದಲ್ಲಿದ್ದು, ಎಡರಂಗದ ಅಭಿವೃದ್ಧಿ ಲಕ್ಷವೇ ಇದಕ್ಕೆ ಕಾರಣವಾಗಿದೆ ಎಂದರು. ಮಂಜೇಶ್ವರ ಕ್ಷೇತ್ರದಲ್ಲಿ ಈ ಹಿಂದೆ ಎಡರಂಗ ಶಾಸಕರು ಆರಂಭಿಸಿದ್ದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದುವರಿಸಲು ಎಡರಂಗ ಅಭ್ಯರ್ಥಿ ಎಂ.ಶಂಕರ ರೈ ಅವರನ್ನು ಗೆಲ್ಲಿಸಬೇಕೆಂದರು.
ಎಡರಂಗ ಅಭ್ಯರ್ಥಿ ಎಂ.ಶಂಕರ ರೈ ಮಾತನಾಡಿ ಪ್ರತಿಪಕ್ಷಗಳು ತನ್ನ ಮೇಲೆ ಅಪಪ್ರಚಾರದಲ್ಲಿ ತೊಡಗಿವೆ, ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ. ತನ್ನ ಊರಿನ ಜನಸಾಮಾನ್ಯರಿಗೆ ತನ್ನ ವ್ಯಕ್ತಿತ್ವದ ಬಗ್ಗೆ ತಿಳಿವಿದೆ ಎಂದರು. ಸಭೆಯಲ್ಲಿ ಕೈಗಾರಿಕಾ ಸಚಿವ ಇ.ಪಿ ಜಯರಾಜನ್, ಕಂದಾಯ ಸಚಿವ ಇ.ಚಂದ್ರಶೇಖರನ್, ಬಂದರು ಸಚಿವ ಕಡನಪಳ್ಳಿ ರಾಮಚಂದ್ರನ್, ಮಾಜಿ ಸಚಿವ ಕೆ.ಇಸ್ಮಾಯಿಲ್, ಮಾಜಿ ಸಂಸದ ಪಿ.ಕರುಣಾಕರನ್, ಡಿವೈಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಮಹಮ್ಮದ್ ರಿಯಾಸ್, ನಾಯಕರಾದ ಸಿ.ಎಚ್ ಕುಞಂಬು, ಕೆ.ವಿ ಕುಞರಾಮನ್,ಬಿ.ವಿ ರಾಜನ್,ಎಂ.ವಿ.ಬಾಲಕೃಷ್ಣನ್, ಉಪಸ್ಥಿತರಿದ್ದರು. ಅಬ್ದುಲ್ ರಜಾಕ್ ಚಿಪ್ಪಾರು ಸ್ವಾಗತಿಸಿದರು, ಅಜಿತ್ ಎಂ.ಸಿ ಲಾಲ್‌ಬಾಗ್ ನಿರೂಪಿಸಿದರು.ಸಭೆಯಲ್ಲಿ ಪಕ್ಷದ ಅಭಿಮಾನಿಯೋರ್ವರು ರಚಿಸಿದ ಸಿಎಂ ಅವರ ಚಿತ್ರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಯಿತು.
ಜಲಸಾರಿಗೆ ಸಂಪರ್ಕ ಯೋಜನೆ
ಬೇಕಲದಿಂದ ಕೋವಳದವರೆಗಿನ ಜಲಸಾರಿಗೆ ಸಂಪರ್ಕ ಯೋಜನೆಯನ್ನು ಸರಕಾರ ಆರಂಭಿಸಿದ್ದು, ದೋಣಿ ಸಾರಿಗೆಯ ಮೂಲಕ ರಾಜ್ಯದ ಹಲವು ನಗರಗಳನ್ನು ಸಂಪರ್ಕಿಸಬಹುದಾಗಿದೆ ಎಂದರು. ಕಾಸರಗೋಡಿನಿಂದ ತಿರುವನಂತಪುರದ ತನಕ ಸೆಮಿ ಹೆ„ಸ್ಪೀಡ್ ರೈಲು ಯೋಜನೆಗೂ ಸರಕಾರ ಶ್ರಮಸಿದ್ದು, ಕೇಂದ್ರ ರೈಲ್ವೇ ಇಲಾಖೆಯ ಮೂಲಕ ಇದು ಕನಸು ನನಸಾಗಲಿದೆ ಎಂದರು. ಶಬರಿಮಲೆ ಕ್ಷೇತ್ರದ ಅಭಿವೃದ್ಧಿಗೂ ಸುಮಾರು 1000 ಕೋಟಿ ರೂ.ನಿಧಿ ಸರಕಾರ ಮೀಸಲಿರಿಸಿದೆ.ಶಿಕ್ಷಣ ಕ್ಷೇತ್ರವೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಸೈಟೆಕ್ ಆಗುತ್ತಿದ್ದು, ಶಾಲಾ ಮಕ್ಕಳ ನೋಂದಣಿಯೂ ಹೆಚ್ಚಿದೆ. ಆರೋಗ್ಯ ಕ್ಷೇತ್ರದಲ್ಲೂ ಬದಲಾವಣೆಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಮಾರ್ಪಾಡುಗೊಳಿಸಲಾಗಿದೆ. ಸರಕಾರಿಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ.ರಾಜ್ಯ ಸರಕಾರದ ಲೆ„ಫ್ ಮಿಷನ್, ಹರಿತ ಕೇರಳ, ಶುಚಿತ್ವ ಯೋಜನೆಗಳು ಜನಮೆಚ್ಚುಗೆ ಗಳಿಸಿವೆ ಎಂದರು. ಸ್ತ್ರೀ ಸಂರಕ್ಷಣೆ ಮತ್ತು ಸ್ತ್ರೀ ಸಶಕ್ತೀಕರಣಕ್ಕೂ ಹೆಚ್ಚಿನ ಆದ್ಯತೆ ನಿಡಲಾಗಿದೆ .ಸುಸ್ಥಿರ ಅಭಿವೃದ್ಧಿಯಲ್ಲಿ ಕೇರಳ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿದ್ದು, ಇಂಡಿಯಾ ಟುಡೇ ಮೂಲಕ ಸ್ಟೇಟ್ಸ್ ಅಫ್ ಸ್ಟೇಟ್ಸ್ ವಿಭಾಗದಲ್ಲಿ ಕೇರಳ ರಾಜ್ಯಕ್ಕೆ ನಂ.1 ಸ್ಥಾನ ದಕ್ಕಿದೆ.
-ಪಿಣರಾಯಿ ವಿಜಯನ್ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.