ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿಲ್ಲ ಶವ ಶೈತ್ಯಾಗಾರ ವ್ಯವಸ್ಥೆ

ಅನಾಥ ಮೃತದೇಹಗಳ ವಿಲೇವಾರಿಗೆ ಸಮಸ್ಯೆ ;ದುಬಾರಿ ಸಾಗಾಟ ವೆಚ್ಚ-ಬಡವರಿಗೆ ಸಂಕಷ್ಟ

Team Udayavani, Oct 14, 2019, 5:31 AM IST

1210PKT1

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಶವ ಶೈತ್ಯಾಗಾರ ಇಲ್ಲದೆ ಅನಾಥ ಮೃತದೇಹಗಳ ವಿಲೇವಾರಿ ಪೊಲೀಸರಿಗೆ ಸಮಸ್ಯೆಯಾಗಿದ್ದು, ಮೃತ ದೇಹದ ಸಂರಕ್ಷಣೆ ಸವಾಲಾಗಿದೆ.

ಬಂಟ್ವಾಳ ತಾ| ವ್ಯಾಪ್ತಿಯ ಬಹು ಭಾಗ ನೇತ್ರಾವತಿ ನದಿ ತಟದಲ್ಲಿ ಹರಡಿ ಕೊಂಡಿರುವುದರಿಂದ ಆಗಾಗ ನದಿ ಯಲ್ಲಿ ಅಪರಿಚಿತ ಮೃತದೇಹ ಪತ್ತೆ ಯಾಗುತ್ತಿರುತ್ತವೆ. ಇಂತಹ ಸಂದರ್ಭ ದೂರದ ಊರಿನಿಂದ ಮಕ್ಕಳು ಅಥವಾ ಸಂಬಂಧಿಗಳು ಬರುವವರೆಗೆ ಶವವನ್ನು ಕೊಳೆಯದಂತೆ ಇಡಲು ಸರಕಾರಿ ಆಸ್ಪತ್ರೆ ಯಲ್ಲಿ ಶೈತ್ಯಾಗಾರದ ಅಗತ್ಯವಿದೆ.

ಇದರ ಜತೆಗೆ ಸಾರ್ವಜನಿಕ ಸ್ಥಳ, ಗುಡ್ಡಗಾಡು, ನಿರ್ಜನ ಪ್ರದೇಶಗಳಲ್ಲೂ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರು ತ್ತವೆ. ಹೀಗೆ ಸಿಗುವ ಅಪರಿಚಿತ ಮೃತದೇಹ ಗಳನ್ನು ವಿಲೇವಾರಿ ಮಾಡಬೇಕಾದರೆ ಅದರ ಗುರುತು ಪತ್ತೆಹಚ್ಚಿ, ಯಾವುದೋ ಊರಿನಲ್ಲಿರುವ ಮನೆಯವರನ್ನು ಹುಡುಕಿ ವಿಷಯ ತಿಳಿಸಿ, ಅವರು ಬಂದು ಮೃತದೇಹ ಕೊಂಡೊ ಯ್ಯುವಷ್ಟರಲ್ಲಿ ಅದು ಕೊಳೆತು ಹೋಗಿ ರುತ್ತದೆ. ಅದನ್ನು ಕೊಳೆಯದಂತೆ ಇಡಲು ಶೈತ್ಯಾಗಾರ ಇಲ್ಲದಿರುವುದರಿಂದ ಸಂರಕ್ಷಣೆ ಪೊಲೀಸ ರಿಗೆ ಇನ್ನೊಂದು ಕೆಲಸವಾಗಿದೆ.

ದುಬಾರಿ ಶುಲ್ಕ-ಸಾಗಾಟ ವೆಚ್ಚ
ಪ್ರಸ್ತುತ ಬಂಟ್ವಾಳ ತಾ| ವ್ಯಾಪ್ತಿಯಲ್ಲಿ ಸಿಗುವ ಅಪರಿಚಿತ ಮೃತದೇಹಗಳನ್ನು ಮಂಗಳೂರಿಗೆ ಕೊಂಡೊಯ್ಯಬೇಕು. ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ವ್ಯಾಪ್ತಿ ಯಿಂದ ಸಾಕಷ್ಟು ಅಪರಿ ಚಿತ ಮೃತದೇಹಗಳು ಬರು ವುದರಿಂದ ಸ್ಥಳಾವಕಾಶ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸ ಬೇಕಾದ ಅನಿವಾರ್ಯ ಇದೆ. ಅಲ್ಲಿ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಸಾಗಾಟ ವೆಚ್ಚ ಭರಿಸಬೇಕಾಗಿರುವುದರಿಂದ ಬಡವರಿಗೆ ತುಂಬ ಕಷ್ಟವಾಗುತ್ತಿದೆ. ಕೆಲವೊಮ್ಮೆ ಪೊಲೀಸರೇ ಈ ವೆಚ್ಚ ಭರಿಸಬೇಕಾಗುತ್ತದೆ.

ಸಂಚಾರಿ ಶವ ಶೈತ್ಯಾಗಾರ
ಕೆಲವು ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಪ್ರಾಯೋಜಕತ್ವ ದಲ್ಲಿ ಸಂಚಾರಿ ಶವ ಶೈತ್ಯಾಗಾರಗಳು (ಆ್ಯಂಬುಲೆನ್ಸ್‌) ಕಾರ್ಯನಿರ್ವಹಿಸುತ್ತಿವೆ. ಇದರಿಂದ ಅಪರಿಚಿತ ಮೃತದೇಹ ಮಾತ್ರ ವಲ್ಲದೆ ವಿದೇಶ, ದೂರದ ಊರುಗಳಿಂದ ಬಂಧುಗಳು ಬರುವವರೆಗೆ ಸಂರಕ್ಷಿಸಿಡಲು ಅನುಕೂಲವಾಗುತ್ತದೆ. ಬಡವರಿಗೆ ರಿಯಾಯಿತಿ ಬಾಡಿಗೆ ದರದಲ್ಲಿ ಲಭ್ಯವಿ ರುವು ದರಿಂದ ದುಬಾರಿ ಹಣ ಪಾವತಿ ಸುವ ಆವಶ್ಯಕತೆ ಇರುವುದಿಲ್ಲ. ಅಂತಹ ಸಂಚಾರಿ ಶೈತ್ಯಾಗಾರವನ್ನು ತಮ್ಮ ಮನೆ ಗಳಿಗೇ ತರಿಸಬಹುದಾಗಿದೆ.

ಆರೋಗ್ಯ ಕೇಂದ್ರಗಳಲ್ಲಿ ಸಿಬಂದಿ ಕೊರತೆ
ಪುಂಜಾಲಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಕರಣಗಳಿಗೆ ಸಂಬಂಧಪಟ್ಟಂತಹ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತರುವುದರಿಂದ ವೈದ್ಯರಿಗೆ ಹೊರೆಯಾಗುತ್ತದೆ. ಅದರ ಬದಲು ಪುಂಜಾಲಕಟ್ಟೆ ಅಥವಾ ವಾಮದಪದವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿದರೆ ಉತ್ತಮ ಎಂದು ತಾಲೂಕು ಆಸ್ಪತ್ರೆಯು ಪೊಲೀಸ್‌ ಇಲಾಖೆಗೆ ಮನವಿ ಮಾಡಿದೆ. ಆದರೆ, ಅಲ್ಲಿ ಸಿಬಂದಿ ಕೊರತೆಯಿಂದ ತಾಲೂಕು ಆಸ್ಪತ್ರೆಗೇ ತರಲಾಗುತ್ತಿದೆ.

 ಇಲಾಖೆಗೆ ಮನವಿ
ತಾ| ವ್ಯಾಪ್ತಿಯಲ್ಲಿ ಶವ ಶೈತ್ಯಾಗಾರ ಇಲ್ಲದಿರುವುದರಿಂದ ಅಪರಿಚಿತ ಮೃತದೇಹಗಳನ್ನು ಇಡಲು ಮಂಗಳೂರಿನ ವೆನಾÉಕ್‌ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗು ತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 800 ರೂ. ಶುಲ್ಕ ಹಾಗೂ 3 ಸಾವಿರ ರೂ. ಸಾಗಾಟ ವೆಚ್ಚ ನೀಡಬೇಕಾಗಿರುವು ದರಿಂದ ಬಡವರಿಗೆ ಕಷ್ಟವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ.
 - ಎಸ್‌. ಪ್ರಸನ್ನ ಕುಮಾರ್‌
ಎಸ್‌.ಐ.,ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ

 ಒದಗಿಸುವ ಭರವಸೆ
ಎಂಆರ್‌ಪಿಎಲ್‌ ಸಂಸ್ಥೆಯ ಸಿಎಸ್‌ಆರ್‌ ಫಂಡ್‌ನ‌ಲ್ಲಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ
ಶವ ಶೈತ್ಯಾಗಾರ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಶಾಸಕರಿಗೂ ತಿಳಿಸಲಾಗಿದೆ. ಶಾಸಕರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಶವ ಶೈತ್ಯಾಗಾರ ಒದಗಿಸುವ ಭರವಸೆ ನೀಡಿದ್ದಾರೆ. ಶೀಘ್ರ ನೀಡುವುದಾಗಿ ಎಂಆರ್‌ಪಿಎಲ್‌ ತಿಳಿಸಿದೆ.
 -ಡಾ| ದೀಪಾ ಪ್ರಭು
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ

- ರತ್ನದೇವ್‌ ಪುಂಜಾಲಕಟ್ಟೆ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.