ಕೇರಳದ ಮರಿಯಮ್ ಥ್ರೇಸಿಯಾಗೆ ಸಂತ ಪದವಿ
Team Udayavani, Oct 14, 2019, 6:15 AM IST
ವ್ಯಾಟಿಕನ್ ಸಿಟಿ: ಕೇರಳದ ಕ್ರೈಸ್ತ ಸನ್ಯಾಸಿನಿ ಮರಿಯಾಮ್ ಥ್ರೇಸಿಯಾ ಅವರಿಗೆ ಪೋಪ್ ಫ್ರಾನ್ಸಿಸ್ ಸಂತ ಪದವಿ ನೀಡಿ ಗೌರವಿಸಿದರು.
ವ್ಯಾಟಿಕನ್ ಸಿಟಿಯಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಮರಿಯಾಮ್ ಥ್ರೇಸಿಯಾ ತೃಶ್ಶೂರ್‌ನಲ್ಲಿ “ಕಾಂಗ್ರೆಗೇಷನ್ ಆಫ್ ದ ಸಿಸ್ಟರ್ಸ್ ಆಫ್ ದ ಹೋಲಿ ಫ್ಯಾಮಿಲಿ’ಯನ್ನು 1914 ರಲ್ಲಿ ಸಂಸ್ಥಾಪಿಸಿದ್ದರು. ಮರಿಯಾಮ್ 1926ರ ಜೂ. 26 ರಂದು 50ನೇ ವಯಸ್ಸಿನಲ್ಲಿ ನಿಧನಹೊಂದಿದರು. ಇದರಿಂದ ಕೇರಳದಲ್ಲಿರುವ ಶತಮಾನಗಳಷ್ಟು ಹಳೆಯದಾಗಿರುವ ಸೈರೋ - ಮಲಬಾರ್ ಚರ್ಚ್‌ನ ನಾಲ್ವರಿಗೆ ಸಂತ ಪದವಿ ಸಿಕ್ಕಿದಂತಾಗಿದೆ. 2008ರಲ್ಲಿ ಸಿಸ್ಟರ್ ಅಲೊ#àನ್ಸಾಗೆ ಸಂತ ಪದವಿ ನೀಡಲಾಗಿದ್ದರೆ, ಫಾದರ್ ಕುರಿಯಾಕೋಸ್ ಇಲಿಯಾಸ್ ಚವರ, ಸಿಸ್ಟರ್ ಯುಫ್ರಾಸಿಯಾ ಅವರಿಗೆ 2014ರಲ್ಲಿ ಸಂತ ಪದವಿ ನೀಡಲಾಗಿತ್ತು.
ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಭಾರತವನ್ನು ಪ್ರತಿನಿಧಿಸಿ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಮರಿಯಾಮ್ ಜತೆಗೆ ಇತರ ನಾಲ್ವರಿಗೂ ಸಂತ ಪದವಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.