ಸವರ್ಣದೀರ್ಘ ಸಂಧಿ ಮತ್ತು ವ್ಯಾಕರಣದ ಹುಚ್ಚು ಹಿಡಿಸಿಕೊಂಡ ರೌಡಿ!
Team Udayavani, Oct 14, 2019, 5:53 PM IST
ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರೋ ಚಿತ್ರ ಸವರ್ಣದೀರ್ಘ ಸಂಧಿ. ಈ ಶೀರ್ಷಿಕೆ ಕೇಳಿದಾಕ್ಷಣವೇ ಯಾರಿಗೇ ಆದರೂ ಈ ಚಿತ್ರದ ಕಥೆಯೇನು ಎಂಬ ಆಸಕ್ತಿ ಹುಟ್ಟಿಕೊಳ್ಳೋದು ಸಹಜ. ಅಷ್ಟಕ್ಕೂ ಸವರ್ಣದೀರ್ಘ ಸಂಧಿ ಎಂಬುದು ವ್ಯಾಕರಣದ್ದೊಂದು ಸಂಧಿಯ ಹೆಸರು. ಆದರೆ ನಿರ್ದೇಶಕರು ಇದು ಓರ್ವ ಗ್ಯಾಂಗ್ ಸ್ಟರ್ ಕಥೆಯಾಧಾರಿತ ಚಿತ್ರವೆಂಬ ಬಗ್ಗೆ ಕೆಲ ಮಾಹಿತಿ ಬಿಚ್ಚಿಡುತ್ತಾರೆ. ಹಾಗಾದರೆ ವ್ಯಾಕರಣದ ಸಂಧಿಗೂ ಹೊಡೆದಾಟ ಬಡಿದಾಟದ ಗ್ಯಾಂಗ್‌ಸ್ಟರ್‌ಗೂ ಎತ್ತಣಿಂದೆತ್ತಣ ಸಂಬಂಧವೆಂಬ ಕುತೂಹಲ ಯಾರನ್ನಾದರೂ ಕಾಡದಿರೋದಿಲ್ಲ. ಇದಕ್ಕೆ ಸಿಗೋ ಉತ್ತರದಲ್ಲಿಯೇ ಇಡೀ ಕಥೆಯ ಅಸಲೀ ಸತ್ವ ಅಡಗಿದೆ!
ಸಾಮಾನ್ಯವಾಗಿ ರೌಡಿಸಂ ಅಂದರೆ ಅಲ್ಲಿರುವವರಿಗೆ ಭಾಷಾ ಜ್ಞಾನವೇ ಸರಿಯಾಗಿರೋದಿಲ್ಲ ಎಂಬಂಥಾ ಭಾವನೆ ಇದೆ. ಅಂಥಾದ್ದರಲ್ಲಿ ಅಂಥಾ ರೌಡಿಸಂಗೂ ವ್ಯಾಕರಣಕ್ಕೂ ಸಂಬಂಧ ಕಲ್ಪಿಸೋದು ಸಾಧ್ಯವೇ? ಆದರೆ ಇಲ್ಲಿನ ಕಥೆ ಅದಕ್ಕೆ ಪೂರಕವಾಗಿದೆ. ಇಲ್ಲಿನ ರೌಡಿಸಂ ನಾಯಕ ಮಾಮೂಲಿ ರೌಡಿಗಳಂತಲ್ಲ. ಆತ ಎಂಥವರೂ ಅಚ್ಚರಿಗೀಡಾಗುವಂತೆ ವ್ಯಾಕರಣದಲ್ಲಿ ಪಂಟರ್ ಆಗಿರುತ್ತಾನೆ. ಆತ ಎತ್ತಾಕಿಕೊಂಡು ಬಂದು ಕೂಡಿ ಹಾಕಿಕೊಂಡವರಿಗೆಲ್ಲ ವ್ಯಾಕರಣ ಸಂಬಂಧಿತ ಪ್ರಶ್ನೆಗಳನ್ನೆಸೆಯುತ್ತಾನೆ. ಸರಿಯಾದ ಉತ್ತರ ಸಿಗದಿದ್ದರೆ ಗೂಸಾ ಗ್ಯಾರೆಂಟಿ!
ಈ ಒನ್ ಲೈನ್ ಸ್ಟೋರಿಯೇ ಇಷ್ಟು ಮಜವಾಗಿರುವಾಗ ಇಡೀ ಚಿತ್ರ ಅದೆಷ್ಟು ಮಜಭರಿತವಾಗಿ ಮೂಡಿ ಬಂದಿದೆ ಅನ್ನೋದು ಯಾರಿಗಾದರೂ ಅರ್ಥವಾಗುತ್ತದೆ. ಅಷ್ಟಕ್ಕೂ ಇದರ ನಿರ್ದೇಶಕ ಕಂ ಹೀರೋ ವೀರೇಂದ್ರ ಶೆಟ್ಟಿ ಕೂಡಾ ನಗಿಸೋದರಲ್ಲಿ ಪಂಟರ್. ಆ ಬಲದಿಂದಲೇ ಅವರು ಚಾಲಿಪೋಲಿಲು ಚಿತ್ರವನ್ನು ನಿರ್ದೇಶನ ಮಾಡಿ ದಾಖಲೆಯನ್ನೇ ಬರೆದಿದ್ದರು. ಆ ಚಿತ್ರ ತುಳು ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲಾಗುವಂಥಾ ಒಂದಷ್ಟು ದಾಖಲೆಗಳ ರೂವಾರಿಯಾಗಿತ್ತು. ಲೂಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್ ಕುಮಾರ್, ಮನೋಮೂರ್ತಿ ಮತ್ತು ವೀರೇಂದ್ರ ಶೆಟ್ಟಿ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಸವರ್ಣದೀರ್ಘ ಸಂಧಿ ಕೂಡಾ ಅಂಥಾದ್ದೇ ದಾಖಲೆ ಬರೆಯೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.