“ಅಂತರಂಗ ಶುದ್ಧಿ’ಯತ್ತ ಹೊಸಬರು

Team Udayavani, Oct 15, 2019, 3:01 AM IST

antaranga-shuddi

ಕನ್ನಡದಲ್ಲಿ ಹೊಸಬಗೆಯ ಸಿನಿಮಾಗಳಿಗೆ ಬರವಿಲ್ಲ. ಹಾಗೆಯೇ ಹೊಸತನದ ಶೀರ್ಷಿಕೆಗಳಿಗೇನೂ ಕಮ್ಮಿ ಇಲ್ಲ. ಈಗಾಗಲೇ ತಮ್ಮ ಶೀರ್ಷಿಕೆ ಮೂಲಕವೇ ಗಮನಸೆಳೆಯುತ್ತಿರುವ ಹೊಸಬರ ಚಿತ್ರಗಳ ಸಾಲಿಗೆ “ಇದೇ ಅಂತರಂಗ ಶುದ್ಧಿ’ ಎಂಬ ಸಿನಿಮಾ ಸೇರಿದೆ. ಹೌದು, ಶೀರ್ಷಿಕೆ ನೋಡಿದವರಿಗೆ ಇದು ಬಸವಣ್ಣನರ ತತ್ವಾದರ್ಶವಿರುವ ಸಿನಿಮಾನ ಎಂಬ ಪ್ರಶ್ನೆ ಕಾಡದೇ ಇರದು. ಆದರೆ, ಇಲ್ಲಿ ಬಸವಣ್ಣನವರ ತತ್ವಗಳಂತೆ, ಪ್ರತಿ ಪಾತ್ರಗಳಿಗೂ ಇಲ್ಲಿ ಶುದ್ಧೀಕರಣವಿದೆ.

ಪ್ರತಿ ಘಟನೆಗೂ ಶುದ್ಧಿಕರಣ ಬರುತ್ತೆ. ಹಾಗಾಗಿ, ಇದನ್ನೇ ಶೀರ್ಷಿಕೆಯನ್ನಾಗಿಸಿ, ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ಕುಮಾರ್‌ ದತ್‌ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜವಾಬ್ದಾರಿಯೂ ಅವರದೇ. ಇವರ ಕಥೆ ಕೇಳಿ ಅಭಿಲಾಶ್‌ ಚಕ್ಲ ಮತ್ತು ನವಜೀತ್‌ ಬುಲ್ಲಾರ್‌ ನಿರ್ಮಾಣ ಮಾಡುತ್ತಿದ್ದಾರೆ. “ಇದೇ ಅಂತರಂಗ ಶುದ್ಧಿ’ ಎಂಬ ಶೀರ್ಷಿಕೆ ಇದೆ ಎಂಬ ಕಾರಣಕ್ಕೆ, ಇದು ಬಸವಣ್ಣನವರಿಗೆ ಸಂಬಂಧಿಸಿದ ಚಿತ್ರ ಎಂದುಕೊಳ್ಳುವಂತಿಲ್ಲ ಎನ್ನುವ ನಿರ್ದೇಶಕರು, ಇಲ್ಲಿ ಐಕ್ಯತೆ ಸಾರುವ ಅಂಶಗಳಿವೆ.

ಪ್ರೇಮ, ಕಾಮ, ಆಸೆ, ಜಾತಿ, ಧರ್ಮ ಎಲ್ಲದ್ದಕ್ಕೂ ಸಂಬಂಧಿಸಿದ ವಿಷಯಗಳಿವೆ. ಪ್ರತಿ ಪಾತ್ರದಲ್ಲೂ ಹೊಸ ವಿಷಯವಿದೆ. ಹೊಸತಂಡ ಸೇರಿ ಮಾಡಿರುವ ಸಿನಿಮಾದಲ್ಲಿ ಶೇ.90 ರಷ್ಟು ಚಿತ್ರೀಕರಣ ಕಾರಲ್ಲೇ ನಡೆಯಲಿದೆ. ಉಳಿದ ಶೇ.10 ರಷ್ಟು ಚಿತ್ರೀಕರಣ ಹೊರಗಡೆ ನಡೆಯಲಿದೆ. ಇನ್ನೊಂದು ವಿಶೇಷವೆಂದರೆ, ರಾತ್ರಿ ವೇಳೆಯಲ್ಲೇ ಬಹುತೇಕ ಶೂಟಿಂಗ್‌ ಮಾಡಿದ್ದು, ಕ್ಲೈಮ್ಯಾಕ್ಸ್‌ ಭಾಗ ಮಾತ್ರ ಹಗಲಿನಲ್ಲಿ ನಡೆದಿದೆ’ಎಂದು ವಿವರಿಸುತ್ತಾರೆ ನಿರ್ದೇಶಕ ಕುಮಾರ್‌ ದತ್‌. ಚಿತ್ರದಲ್ಲಿ ಆರ್ಯವರ್ಧನ್‌ ಹೀರೋ. ಅವರಿಗೆ ಪ್ರತಿಭಾ ನಾಯಕಿ. ಚಿತ್ರದ ವಿಶೇಷವೆಂದರೆ, ಜನರೇಟರ್‌ ಇಲ್ಲದೆಯೇ, ಬೀದಿ ಲೈಟ್‌ನಲ್ಲೇ ಚಿತ್ರೀಕರಿಸಿ, ಹೊಸ ಪ್ರಯೋಗ ಮಾಡಲಾಗಿದೆ.

ಬಹುತೇಕ ಬೆಂಗಳೂರಿನ ರಸ್ತೆಗಳಲ್ಲೇ ಅದರಲ್ಲೂ ಕಾರಿನಲ್ಲೇ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ. ಚಿತ್ರಕ್ಕೆ ಲವ್‌ ಮೆಹ್ತಾ ಸಂಗೀತವಿದೆ. ನಿರ್ದೇಶಕರ ಜೊತೆಗೆ ಜಗದೀಶ್‌ ಪಾಟೀಲ್‌ ಸಾಹಿತ್ಯ ಬರೆದಿದ್ದಾರೆ. ವಿನಯ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶ್ರೀಧರ್‌, ಸೂರಜ್‌, ಮಂಜುಳಾ ರೆಡ್ಡಿ, ರೂಪೇಶ್‌, ಪುನೀತ್‌ ಸೇರಿದಂತೆ ಹೊಸ ಪ್ರತಿಭೆಗಳಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಈಗ ಡಿಟಿಎಸ್‌ ಕಾರ್ಯದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್‌ಗೆ ಹೋಗಲು ಸಜ್ಜಾಗುತ್ತಿದೆ.

ಟಾಪ್ ನ್ಯೂಸ್

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.