ದೀಪಾವಳಿಗೆ ವೈಭವ್ ಮುಹೂರ್ತ
Team Udayavani, Oct 15, 2019, 3:02 AM IST
ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸಿನಿಮಾಗಳು ಆರಂಭವಾಗುತ್ತಲೇ ಇರುತ್ತವೆ. ಇದರಲ್ಲಿ ಬಹುಪಾಲು ಹೊಸಬರದ್ದೇ ಇರುತ್ತದೆ ಎಂಬುದು ಕೂಡಾ ಸತ್ಯ. ಈಗ “ವೈಭವ್’ ಎಂಬ ಸಿನಿಮಾವೊಂದು ಮುಹೂರ್ತ ಆಚರಿಸುವ ಸಂಭ್ರಮದಲ್ಲಿದೆ. ಮಂಜುನಾಥ್ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಧರಣೇಂದ್ರ ಪದ್ಮಾವತಿದೇವಿ ಮಹಿಮೆ’ ಎಂಬ ಕಿರು ಚಿತ್ರದ ಜೊತೆಗೆ ಒಂದು ಕನ್ನಡ ಹಾಗು ತುಳು ಚಿತ್ರವೊಂದನ್ನು ನಿರ್ದೇಶಿಸಿರುವ ಮಂಜುನಾಥ್ ಈಗ “ವೈಭವ್’ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ.
ಚಂದ್ರು ಕೆ ಗೌಡ ಈ ಚಿತ್ರದ ನಾಯಕ. ಈ ಹಿಂದೆ “ಹಫ್ತಾ’ ಎಂಬ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು ಚಂದ್ರು ಅವರಿಗೆ ಈ ಚಿತ್ರದ ಮೂಲಕ ನಾಯಕರಾಗಿ ಬಡ್ತಿ ಸಿಗುತ್ತಿದೆ. ಎರಡು ಬಾರಿ ಮಿ.ಶಿವಮೊಗ್ಗ, ಮೂರು ಬಾರಿ ಮಿ.ಚಿಕ್ಕಮಗಳೂರು, ನಾಲ್ಕು ಬಾರಿ ಕರ್ನಾಟಕ ಮತ್ತು ಮಿಸ್ಟರ್‌ಇಂಡಿಯಾ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡಿರುವ ಚಂದ್ರು, ಈಗ “ವೈಭವ್’ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
“ವೈಭವ್’ ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಆ್ಯಕ್ಷನ್ ಅಂಶವನ್ನು ಒಳಗೊಂಡಿದೆ. ಬೆಂಗಳೂರು, ಪುತ್ತೂರು, ಕಾರ್ಕಳದಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಶ್ರೀಧರ್ ದೀಕ್ಷಿತ್ ಸಂಗೀತ, ವಾಸು ಛಾಯಾಗ್ರಹಣ, ಮುತ್ತುರಾಜ್ ಸಂಕಲನ, ಸಂತೋಷ್ ಕುಮಾರ್ ಸಾಹಸವಿದೆ. ಈ ಚಿತ್ರವನ್ನು ಪ್ರವೀಣ್ ಕುಮಾರ್ ನಿರ್ಮಾಣವಿರುವ ಈ ಚಿತ್ರ ದೀಪಾವಳಿಯಂದು ಸೆಟ್ಟೇರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.