“ಆಯುಷ್ಮಾನ್’ನಲ್ಲಿ ಹಾರರ್ ಛಾಯೆ
ಶಿವರಾಜಕುಮಾರ್ ನಟನೆಯ ಚಿತ್ರ
Team Udayavani, Oct 15, 2019, 3:05 AM IST
ಶಿವರಾಜ ಕುಮಾರ್ ಅಭಿನಯದ “ಆಯುಷ್ಮಾನ್ ಭವ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದವರಿಗೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಮಟ್ಟದ ಕುತೂಹಲವನ್ನು ಚಿತ್ರದ ಟೀಸರ್‌ನಲ್ಲಿ ಇಡಲಾಗಿದೆ. ಪಿ.ವಾಸು ಈ ಚಿತ್ರದ ನಿರ್ದೇಶಕರು. ಈಗಾಗಲೇ ಶಿವರಾಜ ಕುಮಾರ್ ಹಾಗೂ ಪಿ.ವಾಸು ಅವರ ಕಾಂಬಿನೇಶನ್‌ನಲ್ಲಿ “ಶಿವಲಿಂಗ’ ಚಿತ್ರ ಬಂದಿದ್ದು, ಹಾರರ್ ಹಿನ್ನೆಲೆಯಲ್ಲಿ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
ಶಿವರಾಜ ಕುಮಾರ್ ಕೂಡಾ ಹೊಸ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈಗ “ಆಯುಷ್ಮಾನ್ ಭವ’ ಮೂಲಕ ಮತ್ತೆ ಈ ಜೋಡಿ ಒಂದಾಗಿದ್ದು, ಈ ಚಿತ್ರದ ಟೀಸರ್ ನೋಡುವಾಗ ಇಲ್ಲೂ ಹಾರರ್ ಟಚ್ ಕೊಟ್ಟಂತಿದೆ. ಜೊತೆಗೆ ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲರ್ ಅಂಶಗಳು ಕೂಡಾ ಗೋಚರಿಸುತ್ತಿವೆ. ಈ ಮೂಲಕ ಈ ಜೋಡಿ ಮತ್ತೂಮ್ಮೆ ಹಾರರ್ ಸಿನಿಮಾ ಮಾಡಿದೆಯಾ ಎಂಬ ಪ್ರಶ್ನೆ ಸಿನಿ ಪ್ರೇಕ್ಷಕರನ್ನು ಕಾಡುತ್ತಿರುವುದು ಸುಳ್ಳಲ್ಲ. ಅಂದಹಾಗೆ, ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ ಅಂಡರ್ ವಾಟರ್ ಫೈಟ್ ಇದ್ದು, ಶಿವರಾಜ ಕುಮಾರ್ ಅವರಿಗೆ ಈ ಫೈಟ್ ಸಖತ್ ಖುಷಿ ಕೊಟ್ಟಿದೆಯಂತೆ. “ಆಯುಷ್ಮಾನ್ ಭವ’ ಚಿತ್ರ ದ್ವಾರಕೀಶ್ ಬ್ಯಾನರ್‌ನಲ್ಲಿ ತಯಾರಾಗಿದ್ದು, ಇದು ಆ ಬ್ಯಾನರ್‌ನ 52ನೇ ಸಿನಿಮಾ ಎಂಬುದು ವಿಶೇಷ. ಮನುಷ್ಯನ ಬದುಕು ಎಷ್ಟು ಮುಖ್ಯವಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆಯಂತೆ. ಇದು ಗುರುಕಿರಣ್ ಸಂಗೀತ ನಿರ್ದೇಶನದ ನೂರನೇ ಸಿನಿಮಾ ಇದಾಗಿದ್ದು, ಹಾಡುಗಳಿಗೆ ಇಲ್ಲಿ ಹೆಚ್ಚಿನ ಒತ್ತುಕೊಡಲಾಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.