ಲಾಜಿಸ್ಟಿಕ್ ಪಾರ್ಕ್ ಬದಲು ಮತ್ತೆ ಟ್ರಕ್ ಟರ್ಮಿನಲ್‌ಗೆ ಪ್ರಸ್ತಾವ
ಎನ್‌ಎಂಪಿಟಿಯಿಂದ 12.5 ಎಕ್ರೆ ಏರ್ ಸರ್ವೆ, ರ್ಯಸಾಧ್ಯತೆ ಬಗ್ಗೆ ಪರಿಶೀಲನೆ
Team Udayavani, Oct 15, 2019, 5:00 AM IST
ಪಣಂಬೂರು: ಬಂದರು ನಗರಿ ಮಂಗಳೂರಿನಲ್ಲಿ ಅಗತ್ಯವಾಗಿ ಬೇಕಾದ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಬದಲು ಲಾಜಿಸ್ಟಿಕ್ ಪಾರ್ಕ್ ನಿರ್ಮಿ ಸುವುದಾಗಿ ಸರಕಾರ ಭರವಸೆ ನೀಡಿದ್ದರೂ ಇದುವರೆಗೂ ಯಾವುದೇ ಪ್ರಗತಿ ಕಾಣು ವಲ್ಲಿ ವಿಫಲವಾಗಿದೆ. ಕಳೆದ ವರ್ಷ ಆಗಿನ ಬೃಹತ್ ಕೈಗಾರಿಕೆ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಈ ಯೋಜನೆ ಅನುಷ್ಠಾನಕ್ಕೆ ಸಮ್ಮತಿಸಿದ್ದರು. ಬಂದರು, ಕೈಗಾರಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಲಾರಿಗಳ ಓಡಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ ಕಾರ ನಿರ್ಧಾರ ತಳೆದಿತ್ತು. ಆದರೆ ಈಗ ಮತ್ತೆ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಒಲವು ವ್ಯಕ್ತವಾಗಿದೆ.
ಈಗಾಗಲೆ ನವಮಂಗಳೂರು ಬಂದರು ಮಂಡಳಿ 12.5 ಎಕ್ರೆ ಭೂಮಿಯ ಏರ್ ಸರ್ವೆ ಪೂರ್ಣಗೊಂಡಿದೆ. ಸುಮಾರು 600 ಟ್ರಕ್ ನಿಲುಗಡೆಯ ವ್ಯವಸ್ಥೆ ಇರಲಿದೆ.
ನೂತನ ಟ್ರಕ್ ಟರ್ಮಿನಲ್‌ನಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ, ನೀರಿನ ಸೌಲಭ್ಯ, ಸಣ್ಣ ಪ್ರಮಾಣದ ದುರಸ್ತಿ ಕೇಂದ್ರದ ವ್ಯವಸ್ಥೆಗಳು, ತುರ್ತು ಸೇವೆಗಳು ಒಳಗೊಳ್ಳುತ್ತವೆ.
ಇದರಿಂದ ಹಲವಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗಾವಕಾಶ ಲಭಿಸಲಿದೆ.
ಟ್ರಕ್ ಟರ್ಮಿನಲ್‌ಗೆ ಏರ್ ಸರ್ವೆ
ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಎನ್‌ಎಂಪಿಟಿ ಭೂಮಿ ನೀಡಲು ತಾತ್ವಿಕವಾಗಿ ಒಪ್ಪಿದ್ದು ಬೈಕಂಪಾಡಿ ಬಳಿ ಭೂಮಿಯ ಏರ್‌ಸರ್ವೆ ಮಾಡಲಾಗಿದೆ. ಇತ್ತೀಚೆಗೆ ರಾಜ್ಯ ಸರಕಾರದ ಕೈಗಾರಿಕಾ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಕೈಗಾರಿಕಾ ಆಯುಕ್ತ ಕುಂಞನ್ ಕೃಷ್ಣ ಅವರು ಎನ್‌ಎಂಪಿಟಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಎನ್‌ಎಂಪಿಟಿ ಕೈಗೊಂಡ ಕಾರ್ಯದ ಬಗ್ಗೆ ಮಾಹಿತಿ ನೀಡಲಾಗಿದೆ.
ಎಪಿಎಂಸಿ ಯಾರ್ಡ್‌ನಲ್ಲಿ ನಿರ್ಮಾಣಕ್ಕೆ ಅಕ್ಷೇಪ ಎಪಿಎಂಸಿ ಯಾರ್ಡ್‌ನಲ್ಲಿ ಎಕ್ರೆಗಟ್ಟಲೆ ಜಾಗವಿದ್ದರೂ ಈ ಭಾಗದಲ್ಲಿ ನಿರ್ಮಾಣಕ್ಕೆ ಆಕ್ಷೇಪ ಎತ್ತಿದೆ. ಇನ್ನು ಖಾಸಗೀ ಸಹಭಾಗಿತ್ವದ ಬದಲು ಎನ್‌ಎಂಪಿಟಿ ಅ ಧೀನದಲ್ಲಿರುವ ಜಾಗದಲ್ಲಿ ಮಾಡಲು ಕನಿಷ್ಟ 10 ಎಕ್ರೆ ಭೂಮಿ ನೀಡುವಂತೆ ಸರಕಾರ ಬಂದರು ಮಂಡಳಿಯೊಂದಿಗೆ ಮಾತುಕತೆಯನ್ನು ಈಗಾಗಲೇ ನಡೆಸಲಾಗಿದ್ದು ಒಪ್ಪಿಕೊಂಡಿದೆ. ಸರಾಸರಿ ಐದು ಸಾವಿರಕ್ಕೂ ಮಿಕ್ಕೂ ಟ್ರಕ್‌ಗಳು ಮಂಗಳೂರು ಬಂದರಿನಲ್ಲಿ ವಿವಿಧ ಸರಕುಗಳ ನಿರ್ವಹಣೆಯಲ್ಲಿ ನಿರತವಾಗಿದೆ. ಇದರ ನಡುವೆ ಕೈಗಾರಿಕಾ ಪ್ರದೇಶಕ್ಕೂ ಸರಕು ಹೇರಿಕೊಂಡು ನೂರಾರು ಘನ ಲಾರಿಗಳು ಓಡಾಟ ನಡೆಸುತ್ತವೆ. ವಿಶ್ರಾಂತಿಗೆ ಸೂಕ್ತ ಜಾಗವಿಲ್ಲದ ಪರಿಣಾಮ ಬೈಕಂಪಾಡಿ, ಕುಳಾಯಿ, ಪಣಂಬೂರು ಮತ್ತಿತರೆಡೆ ಲಾರಿಗಳು ರಸ್ತೆ ಬದಿ ಆಶ್ರಯ ಪಡೆಯುವಂತಾಗಿದೆ. ಈಗ ವಿಶೇಷ ಆರ್ಥಿಕ ವಲಯದ ಬೇಡಿಕೆಯನ್ನು ಪರಿಗಣಿಸಿ ಸರಕಾರ ದೊಡ್ಡ ಪ್ರಮಾಣದ ಟರ್ಮಿನಲ್ ನಿರ್ಮಾಣ ಅಗತ್ಯವಾಗಿದೆ. ಇದರಿಂದ ಹೆದ್ದಾರಿ 66ರ ಉದ್ದಕ್ಕೂ ಲಾರಿಗಳ ನಿಲುಗಡೆ ಸಮಸ್ಯೆ ತಪ್ಪಲಿದೆ.
ಸರಕಾರದಿಂದ ಸಹಕಾರ
ಬೈಕಂಪಾಡಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಎನ್‌ಎಂಪಿಟಿ ಜಾಗ ಗುರುತಿಸಿದ್ದು ದೇವರಾಜ ಅರಸು ಟ್ರಕ್ ಟರ್ಮಿನಲ್ ಸಹಕಾರದಲ್ಲಿ ನಿರ್ಮಿಸುವ ಯೋಜನೆಯಿದೆ. ಈಗಾಗಲೇ ಈ ಬಗ್ಗೆ ಎನ್‌ಎಂಪಿಟಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಅಲ್ಲಿರುವ ಜಾಗದಲ್ಲಿ ಟ್ರಕ್ ಟರ್ಮಿನಲ್‌ನ್ನು ಅವರೇ ನಿರ್ವಹಣೆ ಮಾಡುವುದಿದ್ದರೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ.
- ಗೋಕುಲ್ ದಾಸ್ ನಾಯಕ್, ಜಂಟಿ ನಿರ್ದೇಶಕರು, ಸಣ್ಣ ಕೈಗಾರಿಕೆ ಇಲಾಖೆ ದ.ಕ.
ಶೀಘ್ರ ಕ್ರಮಕ್ಕೆ ಆಗ್ರಹ
ದೇವರಾಜ ಅರಸು ಟ್ರಕ್ ಟರ್ಮಿನಲ್‌ಗೆ 12.5 ಎಕ್ರೆ ಪ್ರದೇಶದಲ್ಲಿ ನಿರ್ಮಾಣಕ್ಕೆ ಎನ್‌ಎಂಪಿಟಿಯು ಬೈಕಂಪಾಡಿ ಕೈಗಾರಿಕಾ ಪ್ರಾಂಗಣದ ಬಳಿ ಇರುವ ತನ್ನ ಜಾಗದಲ್ಲಿ ಏರ್‌ಸರ್ವೆ ಮಾಡಿದೆ. ಇದು ಆರಂಭಿಕ ಹಂತದಲ್ಲಿದೆ. ಸಣ್ಣ ಕೈಗಾರಿಕಾ ಸಂಘ ಬೈಕಂಪಾಡಿ ವತಿಯಿಂದ ನಾವು ಇದರ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ನೀಡಿದ್ದೇವೆ.ಇದಲ್ಲದೆ ಮಂಗಳೂರು ಬೆಂಗಳೂರು ಟ್ರಾನ್ಸ್‌ಫೋರ್ಟ್ ವ್ಯವಸ್ಥೆ ಬಲಪಡಿಸಲೂ ಮನವಿ ಮಾಡಿದ್ದೇವೆ.
-ಅಜಿತ್ ಕಾಮತ್, ಅಧ್ಯಕ್ಷರು ಸಣ್ಣ ಕೈಗಾರಿಕಾ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.