ದೇಲಂಪಾಡಿ: ಗ್ರಾಮದಲ್ಲಿಯೇ ಮೊದಲ ಸಿಂಗಾರಿ ಮೇಳ ಕಲಾ ತಂಡ
Team Udayavani, Oct 15, 2019, 5:57 AM IST
ದೇಲಂಪಾಡಿ: ಗ್ರಾಮೀಣ ಪ್ರದೇಶಗಳಲ್ಲಿ ಕಲಾ ತಂಡಗಳು ಹೊರಹೊಮ್ಮುವುದು ಪ್ರಶಂಸನೀಯ. ಇತ್ತೀಚಿನ ದಿನಗಳಲ್ಲಿ ಯುವಕರ ತಂಡ ಕಲಾ ಸೇವೆಯಲ್ಲಿ ಮುಂದುವರಿಯುತ್ತಿದೆ. ಗ್ರಾಮಗಳಲ್ಲಿ ಹೆಚ್ಚಾಗಿ ಯುವಕ ಮಂಡಲ, ನ್ಪೋರ್ಟ್ಸ್ ಕ್ಲಬ್, ಆರ್ಟ್ಸ್ ಕ್ಲಬ್‌ಗಳನ್ನು ಆರಂಭಿಸುತ್ತಿದ್ದ ಯುವ ಮನಸ್ಸು ಇಲ್ಲಿ ಸಿಂಗಾರಿ ಮೇಳಕ್ಕೆ ಮಾರು ಹೋಗಿದೆ. ದೇಲಂಪಾಡಿಯ ಒಂದಷ್ಟು ಯುವಕರ ತಂಡ ಚೆಂಡೆ ಮೇಳದಲ್ಲಿ ಸಿಂಗಾರಿ ಮೇಳವನ್ನು ಅಭ್ಯಸಿಸಿ ರಂಗ ಪ್ರವೇಶಕ್ಕೆ ಅಣಿಯಾಗಿದೆ.
ಕೇರಳ ಚೆಂಡೆಗೆ ಅದರ¨ªೆ ಆದ ವೈವಿಧ್ಯತೆ ಮೆರಗು ಇದೆ. ಕೇರಳ ಚೆಂಡೆ ಮೇಳದಲ್ಲಿ ಸಿಂಗಾರಿ ಮೇಳವೂ ಪ್ರಸಿದ್ಧಿ ಹೊಂದಿದೆ. ಧಾರ್ಮಿಕ ಕಾರ್ಯಕ್ರಮದ ಹಸುರು ಹೊರೆಕಾಣಿಕೆ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷ ಆಕರ್ಷಣೆಯಾಗಿ ಹಲವು ಸಂದರ್ಭಗಳಲ್ಲಿ ಸಿಂಗಾರಿ ಮೇಳದ ಚೆಂಡೆಯ ಸದ್ದು ಮೊಳಗುತ್ತದೆ. ಕುಣಿತವೂ ಜತೆಗೂಡುತ್ತದೆ. ಕರಾವಳಿ ಭಾಗದ ಸಮಾರಂಭಗಳಲ್ಲಿ ಹೆಚ್ಚಾಗಿ ಹೊರಜಿÇÉೆಯ ಕೇರಳಿಗರು ಚೆಂಡೆಮೇಳ ಪ್ರದರ್ಶಿಸುತ್ತಾರೆ. ಕೇರಳ ಕರ್ನಾಟಕ ಗಡಿ ಗ್ರಾಮಗಳಲ್ಲಿ ಸಿಂಗಾರಿ ಮೇಳ ತಂಡ ಚಿಗುರೊಡೆದಿದ್ದು ಮೊದಲ ಸಲ.
ತಂಡದ ಹಿನ್ನೆಲೆ
ದೇಲಂಪಾಡಿ ಗ್ರಾಮದ ಒಟ್ಟು 28 ಮಂದಿ ತಂಡದಲ್ಲಿ¨ªಾರೆ. ಚೆಂಡೆ ಕಲಿಯುವ ಆಸಕ್ತಿಯಿಂದಲೇ ಎಲ್ಲರೂ ಒಟ್ಟಾಗಿ¨ªಾರೆ. ಚೆಂಡೆ, ಡೋಲು, ತಾಳ ಮೂರು ವಿಭಾಗಗಳಲ್ಲಿ ಪ್ರದರ್ಶನ ನೀಡಲು ತರಬೇತಿ ಪಡೆದಿ¨ªಾರೆ. ತಂಡಕ್ಕೆ ಶ್ರೀ ಶಾಸ್ತರ ಸಿಂಗಾರಿ ಮೇಳ ಮಣಿಯೂರು ಎಂಬ ಹೆಸರಿಡಲಾಗಿದೆ. ಕೇರಳ ಭಾಗದ ಚೆಂಡೆಕಲೆಯಲ್ಲಿ ಪರಿಣಿತಿ ಪಡೆದ ರಾಜೇಶ್ ನೆಲ್ಲಿಕುನ್° ಅವರು ತರಬೇತಿ ನೀಡಿ¨ªಾರೆ. ಕೂಡ್ಲು ಶಿವಶೈಲು ಸಿಂಗಾರಿ ಮೇಳ ಆರಂಭಿಸಿದ ಅವರ ತಂvಬ್ಲೂ ವಿಲನ್ಸ್ ಎಂದೇ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಹಲವು ತಂಡಗಳು ಇವರಿಂದ ತರಬೇತಿ ಪಡೆದು ಯಶಸ್ವಿ ಸಿಂಗಾರಿ ಮೇಳ ತಂಡ ಕಟ್ಟಿವೆ.
ಐದು ತಿಂಗಳ ತರಬೇತಿ
ಐದು ತಿಂಗಳು ಮಣಿಯೂರು ಶ್ರೀ ಶಾಸ್ತರ ದೇವಸ್ಥಾನದಲ್ಲಿ ತರಬೇತಿ ನಡೆಯಿತು. ಎಲ್ಲ ದಿನ ರಾತ್ರಿ ಎರಡು ಗಂಟೆ ಹೊತ್ತು ಅಭ್ಯಾಸ ನಡೆಸುತ್ತಿದ್ದರು. ವಾರದಲ್ಲಿ ಒಂದು ದಿನ ರವಿವಾರ ತರೆಬೇತುದಾರ ರಾಜೇಶ್ ಅವರಿಗೆ ತರಬೇತಿ ನೀಡುತ್ತಿದ್ದರು. ಆರಂಭದಲ್ಲಿ ಮರದ ತುಂಡು ಬಳಸಿ ಕಲ್ಲಿಗೆ ಬಡಿದು ತರಬೇತಿ.
ಅನಂತರದ ತಿಂಗಳುಗಳಲ್ಲಿ ಚೆಂಡೆಯಲ್ಲಿ ಅಭ್ಯಾಸ ಮಾಡಿದ್ದರು. ಇದೀಗ ಚೆಂಡೆ ಕಲಿತು ರಂಗಪ್ರವೇಶಕ್ಕೆ ತಂಡ ಸಿದ್ಧವಾಗಿದೆ. ಅ. 17ರಂದು ಒಡಿಯೂರು ದೇವಸ್ಥಾನದಲ್ಲಿ ಇವರ ರಂಗ ಪ್ರವೇಶ ನಡೆಯಲಿದೆ.
ಕಲಿಯುವ ಆಸಕ್ತಿ ಇತ್ತು
ಕಾಸರಗೋಡಿನಿಂದ ಇಲ್ಲಿಗೆ ತುಂಬಾ ದೂರವಿದೆ. ಆದರೂ ಇವರ ಕಲಿಯುವ ಆಸಕ್ತಿ ಕಂಡು ತರಬೇತಿ ನೀಡಲು ಒಪ್ಪಿಕೊಂಡೆ. ವಾರದಲ್ಲಿ ಒಂದು ದಿನ ತರಬೇತಿ ನೀಡುತ್ತಿದ್ದೆ. ವಾರವಿಡೀ ಅದನ್ನು ಅಭ್ಯಾಸವನ್ನು ಅವರು ಮಾಡುತ್ತಿದ್ದರು. ಈಗ ಪೂರ್ಣ ತರಬೇತಿ ಪಡೆದು ರಂಗ ಪ್ರವೇಶಕ್ಕೆ ಸಿದ್ಧವಾಗಿ¨ªಾರೆ.
– ರಾಜೇಶ್ ನೆಲ್ಲಿಕುನ್ನು, ತರಬೇತುದಾರ
ಸತತ ಅಭ್ಯಾಸ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಚೆಂಡೆ ಮೇಳಗಳನ್ನು ನೋಡಿ ಕಲಿಯುವ ಆಸಕ್ತಿ ಉಂಟಾಯಿತು. ಸ್ನೇಹಿತರೊಂದಿಗೆ ಹೇಳಿ ಕೊಂಡಾಗ ಉತ್ಸಾಹ ತೋರಿದರು. ಹಾಗಾಗಿ 5 ತಿಂಗಳ ಅಭ್ಯಾಸದಿಂದ ಸಿಂಗಾರಿ ತಂಡ ಕಟ್ಟಿ ದೆವು. ಈಗ ಕಲೆಯೊಂದು ಕಲಿತ ತೃಪ್ತಿ ಇದೆ.
– ಸಾಯಿನಾಥ್ ರೈ ಮಣಿಯೂರು ತಂಡದ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.