ಟಾಯ್ಲೆಟ್ ಪಿಟ್ ನಿರ್ಮಾಣ: ಸ್ಥಳೀಯರಲ್ಲಿ ಆತಂಕ!
Team Udayavani, Oct 15, 2019, 5:24 AM IST
ಉಡುಪಿ: ಉಡುಪಿ ಸಿಟಿ ಬಸ್ಸು ತಂಗುದಾಣದ ಸಮೀಪ ನಿರ್ಮಾಣವಾಗುತ್ತಿರುವ ನರ್ಮ್ ಬಸ್ಸು ತಂಗುದಾಣದಲ್ಲಿ ಈಗ ಟಾಯ್ಲೆಟ್ ಪಿಟ್ ನಿರ್ಮಾಣವಾಗುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ತ್ಯಾಜ್ಯ ನೀರು ಸಮೀಪದಲ್ಲಿರುವ ಮನೆ, ಅಂಗಡಿಗಳಿಗೆ ಹರಡಬಹುದು ಎಂಬುವುದು ಇಲ್ಲಿನವರ ಅಭಿಪ್ರಾಯ.
ಅಕ್ಟೋಬರ್ 2017ರಲ್ಲಿ ಈ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಇದೀಗ ಅಂತಿಮ ಹಂತದಲ್ಲಿದೆ. ಕೇವಲ ಬಸ್ಸು ತಂಗುದಾಣ ಮಾತ್ರವಲ್ಲದೆ ವಾಣಿಜ್ಯ ಬಳಕೆಗೆ ಉಪಯೋಗವಾಗುವಂತೆ ಮಾಡುವ ಮೂಲಕ ಆದಾಯ ಗಳಿಸುವ ಉದ್ದೇಶವನ್ನೂ ಕೆಎಸ್ಸಾರ್ಟಿಸಿ ಹೊಂದಿದೆ.
ಯಾವುದೇ ಹಾನಿಯಿಲ್ಲ
ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವಂತೆ ನಗರಸಭೆಯ ಅನುಮತಿ ಪಡೆದು ನಗರಸಭೆಯ ಮಾರ್ಗಸೂಚಿಯಂತೆಯೇ ಈ ಟಾಯ್ಲೆಟ್ ಪಿಟ್‌ಗಳನ್ನು ರಚಿಸಲಾಗಿದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ವೈಜ್ಞಾನಿಕವಾಗಿ ನಿರ್ಮಾಣ
ಕೆಎಸ್ಸಾರ್ಟಿಸಿ ನರ್ಮ್ ಬಸ್ ತಂಗುದಾಣದಲ್ಲಿ ನಗರಸಭೆಯ ಅನುಮತಿ ಪಡೆದೇ ಶೌಚಗುಂಡಿ ನಿರ್ಮಾಣ ಮಾಡಲಾಗುತ್ತಿದೆ. ನಗರಸಭೆಯ ಅನುಸೂಚಿಯಂತೆ ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ. ಇದರಿಂದಾಗಿ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. -ರಾಘವೇಂದ್ರ,ಪರಿಸರ ಅಭಿಯಂತರರು. ಉಡುಪಿ ನಗರಸಭೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.