ಕೊಳಚೆ ನೀರಿನ ಕೆರೆಯಂತಾಗಿದೆ ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿ
ಅವೈಜ್ಞಾನಿಕ ಕಾಮಗಾರಿ
Team Udayavani, Oct 15, 2019, 5:04 AM IST
ಮಲ್ಪೆ: ರಾಜ್ಯದ ಅತೀ ದೊಡ್ಡ ಮೀನುಗಾರಿಕಾ ಸರ್ವ ಋತು ಬಂದರಾದ ಮಲ್ಪೆ ಬಂದರಿನಲ್ಲಿ ಈ ಹಿಂದೆ ಉತ್ತರ ಭಾಗದಲ್ಲಿ ನಿರ್ಮಾಣಗೊಂಡ ಮೀನು ಇಳಿಸುವ ದಕ್ಕೆಯಲ್ಲಿ ಕೊಳಚೆ ನೀರು ಶೇಖರಣೆ ಗೊಂಡು ಸಾಂಕ್ರಾಮಿಕ ರೋಗ ಭೀತಿ ಅವರಿಸಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ಈಗಿರುವ ಒಂದು ಮತ್ತು ಎರಡನೇ ಹಂತದ ಬಂದರಿಗೆ ಹೊಂದಿಕೊಂಡು ಉತ್ತರ ಭಾಗದಲ್ಲಿ ಸುಮಾರು 75 ಮೀಟರ್ ಉದ್ದದ ಜೆಟ್ಟಿಯನ್ನು ನಿರ್ಮಿಸಲಾಗಿತ್ತು. ಆದರೆ ಜೆಟ್ಟಿಯ ಅವೈಜ್ಞಾನಿಕ ಕಾಮಗಾರಿ ಯಿಂದಾಗಿ ನೀರು ಹರಿದು ಹೋಗದೆ ಅಲ್ಲೆ ನಿಂತು ಕೊಳಚೆ ಯಾಗಿ ನೂರಾರು ಸಮಸ್ಯೆಗಳು ಉಂಟಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಮೀನು ಶೇಖರಣೆಗೆ ಉಪ ಯೋಗಿಸುತ್ತಿದ್ದ ಮೀನಿನ ಜತೆಯಲ್ಲಿ ಮಂಜುಗಡ್ಡೆಯ ಅನುಪಯುಕ್ತ ಕೊಳಚೆ ನೀರು ಜತೆಗೆ ಮಳೆನೀರು ಇಲ್ಲಿಯೇ ಶೇಖರಣೆಗೊಂಡು ಸುತ್ತಮುತ್ತಲಿನ ವಾತಾವರಣ ದುರ್ವಾಸನೆಯಿಂದ ಗಬ್ಧೆದ್ದು ಹೋಗಿದೆ. ಈ ಕೊಳಚೆ ನೀರಿನಿಂದ ಮೀನನ್ನು ಹೊತ್ತು ಸಾಗಿಸುವ ಮಹಿಳೆಯರ, ಪುರುಷರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಮಾತ್ರವಲ್ಲದೆ ಇದರ ಪಕ್ಕದಲ್ಲಿಯೇ ಚಿಕ್ಕ ಹೊಟೇಲ್‌ಗಳು ಹಾಗೂ ಅಂಗಡಿಗಳಿದ್ದು, ನಿಂತಿರುವ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಹೆಚ್ಚಾಗಿದೆ. ಸರಕಾರ ಬಂದರುಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿಯನ್ನು ವೆಚ್ಚದಲ್ಲಿ ಯೋಜನೆಯನ್ನು ಹಾಕಿಕೊಳ್ಳುತ್ತದೆ. ಆದರೆ ಅದರನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ಎಡವುತ್ತಿದೆ ಎನ್ನುವುದಕ್ಕೆ ಸ್ಪಷ್ಟ ನಿರ್ದಶನವಾಗಿದೆ.
6 ಇಂಚಿನ ತೋಡು
ಬಂದರಿನ ಮುಖ್ಯದ್ವಾರದಿಂದ ಟೆಬಾ¾ ಶಿಪ್‌ಯಾರ್ಡ್ ಇರುವ ಸ್ಥಳದವರೆಗೆ ಸುಮಾರು 400 ಮೀ. ನಷ್ಟು ಉದ್ದದ ಕಾಂಕ್ರಿಟ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ಅಗಲ ಕಿರಿದಾಗ ಈ ರಸ್ತೆಗೆ ಡಿವೈಡರ್ ಬಳಸಿ ಒಂದು ಬದಿಯಲ್ಲಿ ಕೇವಲ 6ಇಂಚಿನಷ್ಟು ಮಾತ್ರ ಚರಂಡಿಯನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ಅಗಲ ಕಿರಿದಾದ ಈ ರಸ್ತೆಯಲ್ಲಿ ಹಿಂದಿನಿಂದ ಬರುವ ವಾಹಕ್ಕೆ ದಾರಿ ಮಾಡಲು ಹೋದರೆ ತೋಡಿಗೆ ಬೀಳಬೇಕಾದ ಪ್ರಸಂಗ ಎದುರಾಗುತ್ತದೆ. ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂದ ಮಹಿಳೆ ಒಬ್ಬರ ವಾಹನ ಟಯರ್ ತೋಡಿನಲ್ಲಿ ಸಿಕ್ಕಿಕೊಂಡ ಪ್ರಸಂಗ ನಡೆದಿದೆ.
ಮೂಗು ಮುಚ್ಚಿ ಸಾಗುವ ಪ್ರವಾಸಿಗರು
ಕೊಳಚೆ ನೀರು ಹರಿದು ಹೋಗದೆ ಜೆಟ್ಟಿಯಲ್ಲಿ ನಿಂತು ಪಾಚಿಕಟ್ಟಿ ದುರ್ವಾಸನೆ ಬೀರುತ್ತಿದೆ. ಮೀನುಗಾರರು ಇಲ್ಲಿ ಮೂಗು ಮುಚ್ಚಿಕೊಂಡೆ ನಿತ್ಯದ ಕಾಯಕವನ್ನು ಮಾಡಬೇಕಾಗಿದೆ. ಸೈಂಟ್ ಮೇರಿ ದೀÌಪಕ್ಕೆ ಹೋಗುವ ಪ್ರವಾಸಿಗರು ಇದರ ಪಕ್ಕದಲ್ಲೇ ಸಾಗುತ್ತಿದ್ದು ಮೂಗು ಮುಚ್ಚಿಕೊಂಡು ಹೋಗದೆ ಅನ್ಯಮಾರ್ಗ ಇಲ್ಲವಾಗಿದೆ. ನಿಮಯದ ಪ್ರಕಾರ ಇಲ್ಲಿ ಪ್ರತಿದಿನ ಸ್ವತ್ಛತೆಯ ಕಾರ್ಯ ನಡೆಯಬೇಕು, ಆದರೆ ಈ ಭಾಗದಲ್ಲಿ ಆ ಕೆಲಸ ನಿತ್ಯ ನಡೆಯುತ್ತಿಲ್ಲ. ಇಲ್ಲಿನ ಸ್ವತ್ಛತೆಯನ್ನು ನಿರ್ವಹಣೆಯನ್ನು ಮಾಡುತ್ತಿರುವ ಗುತ್ತಿಗೆದಾರರು ಸ್ವತ್ಛತೆಯ ಬಗ್ಗೆ ಸಂಪೂರ್ಣ ನಿರ್ಲಕ್ಷéವನ್ನು ವಹಿಸುತ್ತಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಇಲ್ಲಿ ಪ್ಲಾಸ್ಟಿಕ್ ಬಾಟಲಿ, ಇನ್ನಿತರ ಉಪಯೋಗಿಸಿದ ವಸ್ತುಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಜನರು ಓಡಾಡಲು ಕಷ್ಟವಾಗುತ್ತಿದೆ. ಶೇಖರಣೆಗೊಂಡ ಮಳೆ ನೀರು ಮತ್ತು ಮೀನಿನ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಕೈಗೊಳ್ಳದಿರುವುದು ಸಮಸ್ಯೆ ಉಂಟಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎನ್ನುತ್ತಾರೆ ಅಂಗಡಿ ಮಾಲಕರು.
ಸಮಸ್ಯೆ ಅನೇಕ
ನಿಂತ ಕೊಳಚೆ ನೀರಿನ ಸ್ಥಳದಲ್ಲಿಯೇ ನಿಂತುಕೊಂಡು ತಂದ ಮೀನನ್ನು ಬೋಟಿನಿಂದ ಇಳಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಮೀನನ್ನು ಲೋಡ್, ಅನ್‌ಲೋಡ್ ಮಾಡಲು ಸಮಸ್ಯೆಯಾಗುತ್ತಿದೆ. ಕೊಳಚೆ ನೀರು ಹರಿದು ಹೋಗಲು ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
– ಶಶಿಧರ್ ಕಾಂಚನ್ ಬೀಚ್, ಮೀನುಗಾರರು
ಮನವಿ ಮಾಡಿದ್ದೆವು
ಈ ಹಿಂದೆ ಇಲ್ಲಿನ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಜೆಟ್ಟಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಇಳಿಜಾರಾಗಿ ನಿರ್ಮಿಸುವಂತೆ ಎಂಜಿನಿಯರ್ ಅವರಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ರಸ್ತೆಯ ವಿಸ್ತರಣೆ ಬಗ್ಗೆಯೂ ರೂಪು ರೇಷೆಯನ್ನು ನೀಡಲಾಗುತ್ತಿತ್ತು. ಆದರೆ ಎಲ್ಲವೂ ಅವೈಜ್ಞಾನಿಕವಾಗಿ ನಡೆದಿದೆ.
-ಸತೀಶ್ ಕುಂದರ್, ಮಾಜಿ ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ
ಶೀಘ್ರದಲ್ಲಿ ಕಾಮಗಾರಿ
ಹೊಸ ಜೆಟ್ಟಿ ಮಾಡುವಾಗ ಎರಡೂ ಕಡೆ ಸ್ಲೋಪ್ ಕೊಟ್ಟು ವೇಸ್ಟ್ ನೀರು ಹೋಗಲಿಕ್ಕೆ ಮಧ್ಯೆದಲ್ಲಿ ಡ್ರೈನ್ ಕೊಟ್ಟಿದ್ದರು. ಡ್ರೈನ್ ಪ್ರಾಪರ್ ಆಗದ ಕಾರಣ ಕ್ಲೋಸ್ ಮಾಡಲಾಗಿತ್ತು. ಹಾಗಾಗಿ ನೀರು ನಿಲ್ಲಲು ಶುರುವಾಯಿತು. ಈಗ ಜೆಟ್ಟಿ ಸ್ಲೋಪ್‌ಗೆ ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆಗಳು ಮುಗಿದಿವೆ. ಇನ್ನು 20-25 ದಿವಸಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
-ಶಿವಕುಮಾರ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.