ನಿಡಶೇಸಿ ಕೆರೆಯಲ್ಲಿ ಬಾನಾಡಿಗಳ ಕಲರವ
Team Udayavani, Oct 15, 2019, 2:19 PM IST
ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆ ಭರ್ತಿಯಾಗಿದ್ದು, ಬಾನಾಡಿಗಳ ಆಶ್ರಯ ತಾಣವಾಗುತ್ತಿದೆ. ಕೆರೆಯಲ್ಲಿ ಈಗ ಬಾನಾಡಿಗಳ ಚಿಲಿಪಿಲಿ ಕೇಳಿ ಬರುತ್ತಿದ್ದು, ಪಕ್ಷಿ ಪ್ರಿಯರನ್ನು ಸಂತಸಗೊಳಿಸಿದೆ. ಪಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕೆರೆಯಂಗಳದಲ್ಲಿ ಪಕ್ಷಿಗಳಿಗಾಗಿಯೇ ನಿರ್ಮಿಸಿದ ನಡುಗಡ್ಡೆಗಳಲ್ಲಿ ಅವು ಆಶ್ರಯ ಪಡೆದಿವೆ.
ಪಕ್ಷಿಗಳ ಸಂತಾನಾಭಿವೃದ್ಧಿಗೆ ಪ್ರಸಕ್ತ ಸ್ಥಳವೆನಿಸಿದ ಈ ಕೆರೆಗೆ ಚುಕ್ಕೆ ಬಾತು, ಬಣ್ಣದ ಕೊಕ್ಕರೆ, ಬೆಳ್ಳಕ್ಕಿ, ಬಿಳಿ, ಕರಿ ಬಣ್ಣದ ಕೆಂಬರಲ್ಲು ಬೂದುಬಕ, ಹುಲ್ಲಂಕಿ, ಗುಳ ಮುಳಕ, ಮೆಟ್ಟಗಾಲು ಹಕ್ಕಿ, ಟಿಟ್ಟಿಬಾ ಮೊದಲಾದ ಪಕ್ಷಿಗಳು ಕಂಡು ಬಂದಿವೆ. ಕೆರೆ ಸುತ್ತಲೂ ಗಿಡಗಳಿಲ್ಲದೇ ಇರುವುದರಿಂದ ಪಕ್ಷಿಗಳು ಬಹುತೇಕ ಸಮಯವನ್ನು ಕೆರೆ ನಡುಗಡ್ಡೆಗಳಲ್ಲಿ ಕಳೆಯುತ್ತಿವೆ. ಕೆಲ ಪಕ್ಷಿಗಳು ತೋಟ ಪಟ್ಟಿಗಳಲ್ಲಿರುವ ಗಿಡಗಳನ್ನೇ ಆಶ್ರಯಿಸುತ್ತಿವೆ.
ಕಂಗೊಳಿಸುತ್ತಿದೆ ಕೆರೆ: ನಿಡಶೇಸಿ ಕೆರೆ 320 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಬಾರಿ ಸುರಿದ ಮಳೆಗೆ 250 ಎಕರೆ ಪ್ರದೇಶದಲ್ಲಿ ನೀರು ಆವರಿಸಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಂಡ ಈ ಕೆರೆ ಸುತ್ತಮುತ್ತ ತೋಟಪಟ್ಟಿಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಅಂತರ್ಜಲವೂ ವೃದ್ಧಿಸಿದೆ. ಎರಡು ವರ್ಷಗಳಿಂದ ಬತ್ತಿದ್ದ ಕೆರೆಯತ್ತ ಪ್ರಾಣಿ-ಪಕ್ಷಿಗಳು ಮುಖ ಮಾಡಿರಲಿಲ್ಲ. ಹೀಗಾಗಿ ಅಲ್ಲಲ್ಲಿ ನೀರಿನ ಅರವಟ್ಟಿಗೆ ಇಡಲಾಗಿತ್ತು. ಆದರೀಗ ಕೆರೆ ಭರ್ತಿಯಾಗಿ ಸಂತಸ ಇಮ್ಮಡಿಗೊಳಿಸಿದೆ.
ಸತತ ಬರದಿಂದ ನಿಡಶೇಸಿ ಕೆರೆ ಬತ್ತಿದ್ದರಿಂದ ದೇಶ, ವಿದೇಶದ ಹಕ್ಕಿಗಳು ಬರಲಿಲ್ಲ. ಇದೀಗ ಕೆರೆಗೆ ಭರಪೂರ ನೀರು ಬಂದಿದ್ದು, ಸದ್ಯ ದೇಶಿ ಹಕ್ಕಿಗಳನ್ನು ಮಾತ್ರ ಕಾಣಬಹುದಾಗಿದೆ. ನವೆಂಬರ್, ಡಿಸೆಂಬರ್ ವೇಳೆ ಚಳಿ ಹೆಚ್ಚಾಗುವ ಹಿನ್ನೆಲೆಯಲ್ಲಿ ವಿದೇಶಿ ಹಕ್ಕಿಗಳ ಆಗಮನ ನಿರೀಕ್ಷೆ ಇದೆ. ಕೆರೆ ಅಭಿವೃದ್ಧಿ ಸಂದರ್ಭದಲ್ಲಿ ಕೆರೆ ದಡದಲ್ಲಿದ್ದ ಗಿಡಗಳನ್ನು ತೆರವುಗೊಳಿಸಲಾಗಿದ್ದು, ಸದ್ಯ ಪಕ್ಷಿಗಳು ಕೂರಲು ಗಿಡಗಳ ವ್ಯವಸ್ಥೆ ಇಲ್ಲ. ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಬೇಗ ಬೆಳೆಯುವ ಗಿಡ, ಪೊದೆ ಸಸ್ಯಗಳನ್ನು ನೆಡುವುದರಿಂದ ಪಕ್ಷಿಗಳ ವಿಶ್ರಾಂತಿ-ಗೂಡು ಕಟ್ಟಲು ಸಹಕಾರಿಯಾಗಲಿದೆ. –ಅಮರೇಗೌಡ ಪಾಟೀಲ ಜಾಲಿಹಾಳ, ಪಕ್ಷಿತಜ್ಞ
-ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.