ಗಂಡನನ್ನೇ 5 ಲಕ್ಷಕ್ಕೆ ಆತನ ಪ್ರಿಯತಮೆಗೆ ಮಾರಿದ ಪತ್ನಿ… !
ಸಕ್ಕರೆನಾಡು ಮಂಡ್ಯದಲ್ಲೊಂದು ವಿಚಿತ್ರ ಘಟನೆ......
Team Udayavani, Oct 15, 2019, 6:57 PM IST
ಮಂಡ್ಯ: ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡನನ್ನೇ ಹೆಂಡತಿ 5 ಲಕ್ಷ ರೂಪಾಯಿಗೆ ಗಂಡನ ಪ್ರಿಯತಮೆಗೆ ಮಾರಿದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ವಿವರ :
ರಮ್ಯ ಎಂಬುವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಪತ್ನಿ ಕೈಗೆ ಸಿಕ್ಕಿ ಬಿದ್ದಿದ್ದ. ಈ ವೇಳೆ ಪತ್ನಿ ಮತ್ತು ಪ್ರಿಯತಮೆಯ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದು ನ್ಯಾಯ ತೀರ್ಮಾನಕ್ಕಾಗಿ ವಿಷಯ ಪಂಚಾಯ್ತಿ ಕಟ್ಟೆಗೆ ಬಂದಿತ್ತು.
ಪಂಚಾಯಿತಿಯಲ್ಲಿ ವಾದ ಪ್ರತಿವಾದಗಳು ನಡೆದವು ಕೊನೆಯಲ್ಲಿ ಪ್ರಿಯತಮೆ ಹೇಳಿಕೆ ಪ್ರಕಾರ ನಿನ್ನ ಗಂಡ ನನ್ನ ಬಳಿ 5 ಲಕ್ಷ ರೂ ಸಾಲ ಪಡೆದಿದ್ದಾನೆ ಅದನ್ನ ತೀರಿಸಿ ನಿನ್ನ ಗಂಡನನ್ನು ಕರೆದುಕೊಂಡು ಹೋಗು ಎಂದು ಸಂಬಂಧ ಇಟ್ಟು ಕೊಂಡಿದ್ದ ಮಹಿಳೆ ಪಂಚಾಯ್ತಿಯಲ್ಲಿ ಬೇಡಿಕೆ ಇಟ್ಟಿದ್ದಾಳೆ. ಇದನ್ನ ಕೇಳಿದ ಪತ್ನಿ ಇಂತಹ ಗಂಡ ನನಗೆ ಬೇಕಿಲ್ಲ, ಪೊಲೀಸ್ ಸ್ಟೇಷನ್ ಗೆ ಹೋಗಿ ಕೇಸ್ ಹಾಕ್ತಿನಿ ನಿಮ್ಮನ್ನು ಕೋರ್ಟ್ ಕಚೇರಿ ಅಲೆಸ್ತಿನಿ ಎಂದು ವಾದ ಮಾಡಿದ್ದಾಳೆ.
ಕಡೆಗೆ ಜೀವನಾಂಶಕ್ಕಾಗಿ ಪತ್ನಿ ಪತಿಗೆ 5 ಲಕ್ಷ ರೂ ಬೇಡಿಕೆ ಇಟ್ಟಿದ್ದಾಳೆ. ಇಟ್ಟು ಕೊಂಡವಳು 5 ಲಕ್ಷ ನಾನೇ ಕೊಡ್ತಿನಿ ಗಂಡನನ್ನು ಬಿಡುವಂತೆ ಪತ್ನಿಗೆ ಷರತ್ತು ಹಾಕಿದ್ದಾಳೆ. ಷರತ್ತಿಗೆ ಒಪ್ಪಿದ ಪತ್ನಿ ಮುಂದಿನ ತಿಂಗಳು ಹಣ ಕೊಟ್ಟು ಗಂಡನನ್ನು ಖರೀದಿಸುವಂತೆ ಸೂಚಿಸಿದ್ದಾಳೆ. ಹಣ ಕೊಟ್ಟ ವೇಳೆ ತಾಳಿ ಬಿಚ್ಚಿಟ್ಟು ಒಪ್ಪಂದ ಪತ್ರಕ್ಕೆ ಸಹಿ ಹಾಕಲು ಹೆಂಡತಿಯೂ ಒಪ್ಪಿಗೆ ನೀಡಿರುತ್ತಾಳೆ.
ರಾಜಿ ಪಂಚಾಯ್ತಿಯಲ್ಲಾದ ಮಹಿಳೆಯರಿಬ್ಬರ ಹಣದ ನ್ಯಾಯ ತೀರ್ಮಾನವನ್ನು ಕಂಡ ಗ್ರಾಮಸ್ಥರು ದಂಗಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.