ನ್ಯೂಡ್‌ ಕಲರ್‌ನೋಡಿ!

ಹಚ್ಚಿಯೂ ಹಚ್ಚದಂತಿರಬೇಕು...

Team Udayavani, Oct 16, 2019, 4:42 AM IST

u-7

ಕೆನ್ನೆ ಕೊಂಚ ಕೆಂಪಾಯಿತೇ, ತುಟಿಯ ರಂಗು ಹೆಚ್ಚೇ… ಮೇಕಪ್‌ ಮಾಡಿಕೊಳ್ಳುವಾಗ ಹುಡುಗಿಯರು ಹೀಗೆಲ್ಲಾ ಯೋಚಿಸುತ್ತಾರೆ. ಲಿಪ್‌ಸ್ಟಿಕ್‌ ಹಚ್ಚಬೇಕು, ಆದರೆ, ಬಣ್ಣ ಎದ್ದು ಕಾಣುವಷ್ಟು ಗಾಢವಾಗಿರಬಾರದು ಅಂತ ಬಯಸುವವರು, ನ್ಯೂಡ್‌ ಕಲರ್‌ಗಳಿಗೆ ಮೊರೆ ಹೋಗಬಹುದು…

ತುಟಿಗಳಿಗೆ ಲಿಪ್‌ಸ್ಟಿಕ್‌ ಹಚ್ಚಬೇಕು. ಆದರೆ, ಬಣ್ಣ ಹಚ್ಚಿಯೂ ಹಚ್ಚದಂತೆ ಕಾಣಬೇಕು ಅನ್ನುವುದು ಈಗಿನ ಸ್ಟೈಲ್‌. ಅದನ್ನೇ ನ್ಯೂಡ್‌ ಲಿಪ್‌ ಸ್ಟಿಕ್‌ ಎನ್ನುವುದು. ಮೈಬಣ್ಣಕ್ಕೆ ಹೋಲುವ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿ, ಮೇಕ್‌ ಅಪ್‌ ಮಾಡಿದರೂ ಮಾಡದೇ ಇರುವಂತೆ ಕಾಣುವುದು ಇದರ ಉದ್ದೇಶ!

ಮೊದಲೆಲ್ಲ ಲಿಪ್‌ಸ್ಟಿಕ್‌ಗಳು, ಕೆಂಪು, ಗುಲಾಬಿ, ತಿಳಿಗುಲಾಬಿಯಂಥ ಕೆಲವೇ ಕೆಲವು ಬಣ್ಣಗಳಲ್ಲಿ ದೊರೆಯುತ್ತಿದ್ದವು. ಆದರೆ, ಯಾವಾಗ ನ್ಯೂಡ್‌ ಕಲರ್ಡ್‌ ಟ್ರೆಂಡ್‌ ಶುರು ಆಯಿತೋ, ಬಗೆ ಬಗೆಯ ಮೈ ಬಣ್ಣಕ್ಕೆ ಹೋಲುವ ಬಣ್ಣಗಳ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಬಂದವು. ಮೇಕ್‌ಅಪ್‌ ಆರ್ಟಿಸ್ಟ್ ಗಳು ಈ ಬಣ್ಣಗಳ ಮೇಲೆ ಮತ್ತಷ್ಟು ಪ್ರಯೋಗಗಳನ್ನು ಮಾಡಿದ ಫ‌ಲವಾಗಿ, ಈ ಟ್ರೆಂಡ್‌, ಫ್ಯಾಷನ್‌ ಲೋಕದಲ್ಲಿ ಎವರ್‌ಗ್ರೀನ್‌ ಅನ್ನುವಂತೆ ಉಳಿದುಕೊಂಡಿದೆ. ತಿಳಿ ಬಣ್ಣ, ಗಾಢವಾದ ಬಣ್ಣ, ತಿಳಿಯೂ ಅಲ್ಲದ, ಗಾಢವೂ ಅಲ್ಲದ ಬಣ್ಣ… ಹೀಗೆ, ನ್ಯೂಡ್‌ ಕಲರ್ಡ್‌ ಲಿಪ್‌ ಸ್ಟಿಕ್‌ಗಳಲ್ಲಿ ಬಹಳಷ್ಟು ಆಯ್ಕೆಗಳಿವೆ.

ಬಣ್ಣಗಳೊಡನೆ ಆಟವಾಡಿ
ಪ್ರತಿ ನಿತ್ಯ ಕೆಂಪು, ಗುಲಾಬಿ, ಕೇಸರಿ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿ ಬೋರ್‌ ಆದವರು, ನ್ಯೂಡ್‌ ಕಲರ್‌ಗಳಿಂದ ಹೊಸ ಲುಕ್‌ ಪಡೆಯಬಹುದು. ಮೇಲಿನ ತುಟಿಗೆ ಒಂದು ಬಣ್ಣ, ಕೆಳಗಿನ ತುಟಿಗೆ ಇನ್ನೊಂದು ಬಣ್ಣ ಹಚ್ಚಿ, ಹೊಸಹೊಸ ಪ್ರಯೋಗಗಳನ್ನು ಮಾಡಬಹುದು. ಉದಾಹರಣೆಗೆ-ಮೇಲಿನ ತುಟಿಗೆ ಗಾಢ ಬಣ್ಣ, ಕೆಳಗಿನ ತುಟಿಗೆ ತಿಳಿ ಬಣ್ಣ ಹಚ್ಚಬಹುದು. ಶೇಡಿಂಗ್‌ ಟೆಕ್ನಿಕ್‌ ತಿಳಿದಿದ್ದರೆ, ಒಂದು ಬಣ್ಣದ ಜೊತೆ ಬೇರೆ ಯಾವೆಲ್ಲಾ ಬಣ್ಣ ಬಳಸಬಹುದೆಂದು ಪ್ರಯೋಗಿಸಿ ನೋಡಬಹುದು.

ಈ ರಂಗಿನಾಟವನ್ನು ಹೇಳಿಕೊಡುವ ವಿಡಿಯೊಗಳು, ಯೂಟ್ಯೂಬ್‌, ಇನ್‌ಸ್ಟಾಗ್ರಾಮ್‌ಗಳಲ್ಲಿ ಲಭ್ಯ. ಅವುಗಳನ್ನು ನೋಡಿ, ಮೈ ಬಣ್ಣಕ್ಕೆ ಹೊಂದುವಂತೆ ಯಾವೆಲ್ಲಾ ಬಣ್ಣಗಳನ್ನು ಹಚ್ಚಬಹುದು ಅಂತ ಖಾತ್ರಿಪಡಿಸಿಕೊಳ್ಳಬಹುದು.

ನ್ಯೂಡ್‌ ಟೆಕ್ನಿಕ್‌
ನ್ಯೂಡ್‌ ಶೇಡ್‌ ಜೊತೆ ಕಂದು ಬಣ್ಣ, ಮರೂನ್‌, ಸ್ವರ್ಣ (ಗೋಲ್ಡನ್‌ ಕಲರ್‌) ಮತ್ತು ಇತರ ಗಾಢ ಬಣ್ಣಗಳನ್ನು ಹಚ್ಚಬಹುದು. ಆದರೆ, ಬೇರೆ ಬಣ್ಣ ಆದಷ್ಟು ತಿಳಿಯಾಗಿರಬೇಕು, ಅಂದರೆ ಬಹಳಷ್ಟು ಕಡಿಮೆ ಪ್ರಮಾಣದಲ್ಲಿರಬೇಕು. ಇಲ್ಲವಾದರೆ ಮೇಕ್‌ಅಪ್‌ ಢಾಳಾಗಿ, ನ್ಯೂಡ್‌ ಲಿಪ್‌ಸ್ಟಿಕ್‌ನ ಉದ್ದೇಶವೇ ವ್ಯರ್ಥವಾಗುತ್ತದೆ!

ಮ್ಯಾಚ್‌ ಮಾಡಲೇಬೇಡಿ
ನ್ಯೂಡ್‌ ಲಿಪ್‌ ಕಲರ್‌ ಸ್ಟೈಲ್‌ನಲ್ಲಿ ಬೇರೊಂದು ಬಣ್ಣದ ಲಿಪ್‌ಲೈನರ್‌ನಿಂದ ತುಟಿಯ ಹೊರಗೆ ಔಟ್‌ ಲೈನ್‌ ಬಿಡಿಸುವಂತಿಲ್ಲ. ಒಂದು ವೇಳೆ ಬಿಡಿಸಲೇಬೇಕು ಎಂದರೆ, ಯಾವ ಬಣ್ಣದ ಲಿಪ್‌ಸ್ಟಿಕ್‌ ಹಚ್ಚುವಿರೋ, ಅದೇ ಬಣ್ಣದ ಔಟ್‌ ಲೈನರ್‌ ಬಳಸಿ.

ಉಟ್ಟ ಉಡುಪಿಗೆ ಮ್ಯಾಚ್‌ ಆಗುವಂತೆ ಈ ಬಣ್ಣಗಳನ್ನು ಬಳಸುವಂತಿಲ್ಲ. ಕಾಂಟ್ರಾÓr… ಕಲರ್‌ಗಳನ್ನೇ ಹಚ್ಚಿಕೊಳ್ಳಬೇಕು. ತಿಳಿಬಣ್ಣದ ಬಟ್ಟೆ ತೊಟ್ಟರೆ ಗಾಢ ಬಣ್ಣದ ಲಿಪ್‌ಸ್ಟಿಕ್‌, ಗಾಢ ಬಣ್ಣದ ಉಡುಪಿನ ಜೊತೆ ತಿಳಿ ಲಿಪ್‌ಸ್ಟಿಕ್‌ ಬಳಸಬೇಕು. ತೊಟ್ಟ ಉಡುಪಿಗೆ ಮ್ಯಾಚ್‌ ಆಗುವಂತೆ ಲಿಪ್‌ಸ್ಟಿಕ್‌ ಬಣ್ಣಗಳನ್ನು ಆಯ್ಕೆ ಮಾಡಿದರೆ ಉಡುಪೂ ಎದ್ದು ಕಾಣುವುದಿಲ್ಲ, ತುಟಿಯ ಬಣ್ಣಕ್ಕೂ ಮೆರಗು ಇರುವುದಿಲ್ಲ.

ಮೇಲೆ, ಕೆಳಗೆ ಒಂದೇ ಇರಲಿ
ಎಲ್ಲಕ್ಕಿಂತ ಮುಖ್ಯವಾದ ವಿಷಯ ಎಂದರೆ, ಮೇಲಿನ ತುಟಿಗೆ ಯಾವ ಬಗೆಯ ಲಿಪ್‌ಸ್ಟಿಕ್‌ ಬಳಸುತ್ತಿರೋ, ಅದನ್ನೇ ಕೆಳಗಿನ ತುಟಿಗೂ ಬಳಸಬೇಕು. ಉದಾ- ತಿಳಿ ಬಣ್ಣದ ಮ್ಯಾಟ್‌ ಲಿಪ್‌ಸ್ಟಿಕ್‌ ಅನ್ನು ಮೇಲಿನ ತುಟಿಗೆ ಹಚ್ಚಿದರೆ, ಗಾಢ ಬಣ್ಣದ ಮ್ಯಾಟ್‌ ಲಿಪ್‌ಸ್ಟಿಕ್‌ ಅನ್ನು ಕೆಳಗಿನ ತುಟಿಗೆ ಹಚ್ಚಬೇಕು. ಒಂದಕ್ಕೆ ಲಿಕ್ವಿಡ್‌, ಇನ್ನೊಂದಕ್ಕೆ ಪೌಡರ್‌ ಬಳಸುವಂತಿಲ್ಲ. ಹಾಗೆ ಮಾಡಿದರೆ, ಮಾತಾಡುವಾಗ, ತಿನ್ನುವಾಗ, ಬಣ್ಣಗಳು ಒಂದಕ್ಕೊಂದು ಉಜ್ಜಿ, ತುಟಿಗೆ ಏನೋ ಗಲೀಜು ಮೆತ್ತಿಕೊಂಡಂತೆ ಕಾಣುತ್ತದೆ!

ಯಾರಿಗೆ, ಯಾವ ಬಣ್ಣ?
1. ಫೇರ್‌ ಅಂಡ್‌ ಲೈಟ್‌ (ಬಿಳಿಯ ಬಣ್ಣದವರು)
ಬಿಳಿ ಚರ್ಮ ಹೊಂದಿರುವವರು ಪಿಂಕ್‌ ಅಂಡರ್‌ಟೋನ್‌ನ ನ್ಯೂಡ್‌ ಲಿಪ್‌ಸ್ಟಿಕ್‌ಗಳನ್ನು ಹಚ್ಚಿದರೆ ಚೆನ್ನ. ಇವರಿಗೆ, ಬ್ರೌನ್‌ ಅಂಡರ್‌ಟೋನ್‌ನ ಲಿಪ್‌ಸ್ಟಿಕ್‌ಗಳು ಹೊಂದುವುದಿಲ್ಲ.
2. ಮೀಡಿಯಂ ಅಂಡ್‌ ಆಲಿವ್‌ (ಗೋಧಿ ಬಣ್ಣದವರು)
ಬಹುತೇಕ ಎಲ್ಲ ಬಗೆಯ ನ್ಯೂಡ್‌ಲಿಪ್‌ಸ್ಟಿಕ್‌ಗಳು ಇವರಿಗೆ ಹೊಂದುತ್ತವೆ. ಆರೆಂಜ್‌ ಮತ್ತು ಯೆಲ್ಲೋ (ಕೇಸರಿ, ಹಳದಿ) ಹಾಗೂ ಕ್ಯಾರಮಲ್‌ ಅಂಡರ್‌ಟೋನ್‌ಗಳು ಹೆಚ್ಚು ಸೂಕ್ತ.
3. ಡಾರ್ಕ್‌ ಅಂಡ್‌ ಡಸ್ಕಿ (ಕೃಷ್ಣವರ್ಣೆಯರು)
ಲೈಟ್‌ ಅಂಡರ್‌ಟೋನ್‌ನ ಲಿಪ್‌ಸ್ಟಿಕ್‌ಗಳನ್ನು ಹೊರತುಪಡಿಸಿ, ಬೇರೆಲ್ಲವೂ ಇವರಿಗೆ ಚೆನ್ನಾಗಿ ಹೊಂದುತ್ತದೆ. ಚಾಕೊಲೇಟ್‌ ಬ್ರೌನ್‌, ಡಾರ್ಕ್‌ ಬ್ರೌನ್‌, ನ್ಯೂಡ್‌ ಶೇಡ್ಸ್‌ನ ರೆಡ್‌ ಅಂಡರ್‌ಟೋನ್‌ ಲಿಪ್‌ಸ್ಟಿಕ್‌ನಲ್ಲಿ ಸುಂದರವಾಗಿ ಕಾಣಬಹುದು.

1. ಒಣ ಚರ್ಮದಿಂದ ಆವೃತವಾದ ಅಧರಗಳಿಗೆ ಲಿಪ್‌ಸ್ಟಿಕ್‌ ಹಚ್ಚಿದರೆ, ಬೇಗ ಅಳಿಸಿ ಹೋಗುತ್ತದೆ. ಹಾಗಾಗಿ, ಮೊದಲು ಲಿಪ್‌ ಸðಬ್‌/ ಪೆಟ್ರೋಲಿಯಂ ಜೆಲ್ಲಿ ಹಚ್ಚಿ, ಸಾಫ್ಟ್ ಬ್ರಷ್‌ನಿಂದ ಉಜ್ಜಿ ಡ್ರೈ ಸ್ಕಿನ್‌ ಅನ್ನು ಹೋಗಲಾಡಿಸಿ.
2. ಲಿಪ್‌ ಪ್ರೈಮರ್‌/ ಫೌಂಡೇಷನ್‌ ಹಚ್ಚಿ, ತುಟಿಗಳಿಗೆ ತೇವಾಂಶ ನೀಡಿ. ನಂತರ, ಲಿಪ್‌ಸ್ಟಿಕ್‌ನ ಬಣ್ಣದ ಲಿಪ್‌ಲೈನರ್‌ನಿಂದ ತುಟಿಗಳಿಗೆ ಬಾರ್ಡರ್‌ ಹಾಕಿ.
3. ಚರ್ಮದ ಬಣ್ಣಕ್ಕೆ ಹೊಂದಿಕೆಯಾಗುವ ನ್ಯೂಡ್‌ ಕಲರ್‌ನ ಲಿಪ್‌ಸ್ಟಿಕ್‌ ಅನ್ನು ಹಚ್ಚಿಕೊಳ್ಳಿ.
4. ನಂತರ, ತುಟಿಯ ಬಣ್ಣ ಹರಡದಂತೆ ಲಿಪ್‌ಗ್ಲಾಸ್‌ ಸವರಿಕೊಳ್ಳಿ.
5. ನ್ಯೂಡ್‌ ಲಿಪ್‌ಸ್ಟಿಕ್‌ನಿಂದ ಸಿಂಪಲ್‌ ಲುಕ್‌ ಸಿಗುವುದರಿಂದ, ಕೆನ್ನೆಗಳಿಗೆ ಕೊಂಚ ರಂಗು ಕೊಡಿ ಅಥವಾ ಸ್ಮೋಕಿ ಐ ಮೇಕಪ್‌ ಮಾಡಿ.

ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.