ನಿಮ್ಮ ಸಾಮರ್ಥ್ಯ ಅರಿತುಕೊಳ್ಳಿ
Team Udayavani, Oct 16, 2019, 5:14 AM IST
ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಸಾಮಾನ್ಯ, ಉತ್ತಮ ಮತ್ತು ಅತ್ಯುತ್ತಮ ಎಂದು ಗುರುತಿಸುವುದು ಅವರ ಜ್ಞಾನ, ಶಕ್ತಿ, ಸಾಮರ್ಥ್ಯಗಳ ಆಧಾರದ ಮೇಲೆ. ಹಾಗಂತ ಹುಟ್ಟುವಾಗಲೆ ಎಲ್ಲರೂ ಜಾಣರಾಗಿ ಅಥವಾ ದಡ್ಡರಾಗಿಯೂ ಹುಟ್ಟುವುದಿಲ್ಲ. ಯಾರು ತಮ್ಮ ಸ್ವಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳು ತ್ತಾರೋ ಅವರು ಯಶಸ್ವಿಯಾಗುತ್ತಾರೆ, ಉಳಿದವರು ವಿಫಲರಾಗುತ್ತಾರೆ. ಆದರೆ ಇಲ್ಲಿ ಅವರ ಶಕ್ತಿ ಸಾಮರ್ಥ್ಯ ಗುರುತಿಸಿ ಅದಕ್ಕೆ ನೀರೆರೆದು ಪೋಷಿಸಬೇಕಾದದ್ದು ಶಿಕ್ಷಕರ ಕರ್ತವ್ಯ.
ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಅರಿತುಕೊಳ್ಳಿ
ಎಲ್ಲರೂ ಎಲ್ಲ ಕ್ಷೇತ್ರಗಳಲ್ಲಿ ಉತ್ತಮರಾಗಿರಲು ಸಾಧ್ಯವಿಲ್ಲ. ಆದರೆ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಮೊದಲು ಅರಿತುಕೊಳ್ಳಿ . ಆಗ ನಿಮ್ಮ ಸಾಮರ್ಥ್ಯಗಳ ಮೇಲೆ ಹೆಚ್ಚು ಪರಿಶ್ರಮ ಹಾಕಿದರೆ ಅದೇ ಕ್ಷೇತ್ರದಲ್ಲಿ ನೀವು ಯಶಸ್ಸು ಸಾಧಿಸಲು ಸಹಾಯಕವಾಗುತ್ತದೆ.
ತಾಳ್ಮೆ ಇರಲಿ
ತಾಳ್ಮೆ ಮನುಷ್ಯನಿಗೆ ಬೇಕಾದ ಅತೀ ಮುಖ್ಯ ಅಂಶ. ತಾಳ್ಮೆ ಇಲ್ಲವಾದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಅತೀ ಅವಶ್ಯ. ಯಶಸ್ಸು ಯಾವತ್ತಿಗೂ ಸುಲಿದ ಬಾಳೆ ಹಣ್ಣಲ್ಲ. ಅದಕ್ಕೆ ಪರಿಶ್ರಮ, ಪ್ರಯತ್ನಗಳು ಎಷ್ಟು ಮುಖ್ಯವೋ, ತಾಳ್ಮೆ ಅಷ್ಟೆ ಮುಖ್ಯ. ಓದಿನಲ್ಲಿ ತಾಳ್ಮೆ ಇದ್ದಲ್ಲಿ ಮಾತ್ರ ಯಶಸ್ಸುಗಳಿಸಬಹುದು ಏಕೆಂದರೆ ಅಲ್ಲಿ ಸ್ಪರ್ಧೆ ಅಧಿಕ.
ಮೊದಲ ಪ್ರಯತ್ನದಲ್ಲಿ ಸೋಲಾಗಬಹುದು, ಪದೇ ಪದೇ ಸೋಲಾದರೂ ಪ್ರಯತ್ನ ಮಾತ್ರ ನಿಲ್ಲಬಾರದು. ಸೋಲುಗಳು ನಿಮ್ಮ ಮೇಲೆರಗಿ ಮುಚ್ಚಿ ಹಾಕಲು ಪ್ರಯತ್ನಿಸಿದಾಗಲೆಲ್ಲಾ ತುಳಿದು ಮೇಲೆ ನಿಲ್ಲಲು ಕಲಿಯಿರಿ ಆಗ ಮಾತ್ರ ಯಶಸ್ಸಿನ ಶಿಖರಕ್ಕೇರಲು ಸಾಧ್ಯ.
ತಿಳಿದಿರುವುದನ್ನು ಹಂಚಿಕೊಳ್ಳಿ
ಬಿಚ್ಚಿಟ್ಟದ್ದು ಬೆಳೆಯಿತು, ಮುಚ್ಚಿದ್ದು ಕೊಳೆಯಿತು ಎನ್ನುವ ಗಾದೆ ಮಾತಿನಂತೆ ಜ್ಞಾನವನ್ನು ಹಂಚಿಕೊಂಡಷ್ಟು ಅದು ಇನ್ನಷ್ಟು ಹರವನ್ನು ಪಡೆದುಕೊಳ್ಳುತ್ತದೆ. ಗೊತ್ತಿರುವುದನ್ನು ಪರರೊಂದಿಗೆ ಹಂಚಿಕೊಳ್ಳಿ. ಆಗ ಮಾತ್ರ ಹೊಸ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಇಲ್ಲಿ ನನಗೆ ಗೊತ್ತಿರುವುದನ್ನು ನನ್ನ ಸಹಪಾಠಿಗೆ ಹೇಳಿದರೆ ಅವನು ಜಾಣನಾಗುತ್ತಾನೆ ಎನ್ನುವ ಅಭಿಪ್ರಾಯವೇ ಇದಕ್ಕೆ ಕಾರಣ. ಮೊದಲು ಇದನ್ನು ತೆಗೆದು ಹಾಕಿ.
ಶಿವಾನಂದ್ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.