ಕಾಮಿಕ್ ಆರ್ಟ್ ಹವ್ಯಾಸದ ಜತೆಗೆ ಆದಾಯ
Team Udayavani, Oct 16, 2019, 5:18 AM IST
ಕಾಮಿಕ್ ಆರ್ಟ್ ಅಥವಾ ಕಾಟೂìನ್ ಎಂಬುದು ಒಂದು ಕಲೆ. ಚಿತ್ರಗಳ ಮೂಲಕ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುವುದು ಕಾಮಿಕ್ ಆರ್ಟ್‌ನ ವೈಶಿಷ್ಟ. ಹಾಸ್ಯ ಮಿಶ್ರಿತ ಲಘು ವ್ಯಂಗ್ಯದಿಂದ ಕೆಲವು ಘಟನೆಗಳನ್ನು ವಿವರಿಸುವುದು ಇದರ ಮತ್ತೂಂದು ಶೈಲಿ. ಒಂದು ಕಾಲದಲ್ಲಿ ಕೇವಲ ಕಲೆಯಾಗಿ ಮಾತ್ರ ಗುರುತಿಸಲ್ಪಟ್ಟ ಕಾಮಿಕ್ ಆರ್ಟ್‌ನ ಶೈಲಿ ಇಂದು ಬದಲಾಗಿದೆ. ಇದು ಈಗ ಒಂದು ಉದ್ಯಮವೆಂದರೂ ತಪ್ಪಾಗಲಾರದು. ಅದರಲ್ಲಿ ಹಲವಾರು ಅವಕಾಶಗಳಿವೆ. ಕೇವಲ ಪತ್ರಿಕೆಯಲ್ಲಿ ಮಾತ್ರ ಕಾಮಿಕ್‌ಗಳು ಪ್ರಕಟವಾಗುವುದಿಲ್ಲ. ಬದಲಾಗಿ ಪುಸ್ತಕಗಳ ರೂಪದಲ್ಲಿ ಕಾಮಿಕ್‌ಗಳು ಪ್ರಕಟವಾಗುತ್ತವೆ.
ಪಾರ್ಟ್ ಟೈಂ ಹಾಗೂ ಫುಲ್ ಟೈಂ
ಈ ಎರಡೂ ವೇಳೆಗಳಲ್ಲೂ ಉದ್ಯಮಕ್ಕೆ ಕಾಮಿಕ್‌ನಲ್ಲಿ ಅವಕಾಶವಿದೆ. ನಿಮ್ಮ ಕೆಲಸ ಬೇರೆಯಾಗಿದ್ದು, ಕಾರ್ಟೂನ್ ಬಿಡಿಸುವುದು ನಿಮ್ಮ ಹವ್ಯಾಸವಾಗಿದ್ದರೆ ಕಾಮಿಕ್ ರೈಟಿಂಗ್‌ನ್ನು ಪಾರ್ಟ್ ಟೈಂ ಉದ್ಯೋಗವಾಗಿ ಆಯ್ಕೆ ಮಾಡಿಕೊಳ್ಳಬಹುದು. ಆಸಕ್ತಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಳ್ಳುವವರಾದರೆ ಫುಲ್‌ಟೈಂ ಕೆಲಸವಾಗಿಯೂ ಪರಿವರ್ತಿಸಿಕೊಳ್ಳಬಹುದು. ಯಾವುದಾದರೂ ಒಂದು ಸಂಸ್ಥೆಯಿಂದ ಕಾಮಿಕ್ ಆರ್ಟ್‌ನಲ್ಲಿ ಪದವಿ ಪಡೆದುಕೊಂಡು ಒಂದು ಸಂಸ್ಥೆ ಆರಂಭಿಸಬಹುದು. ದಿನನಿತ್ಯದ ಓದಿನ ಜತೆಗೆ ಹೊಸತನ್ನು ಹುಡುಕುವ ಹವ್ಯಾಸವಿದ್ದರೆ ಈ ಉದ್ಯಮದಲ್ಲಿ ಯಶಸ್ಸು ಖಂಡಿತ.
ವಿದ್ಯಾರ್ಥಿಗಳ ಆದಾಯ ಮೂಲ
ಚಿತ್ರ ಬಿಡಿಸುವ ಹವ್ಯಾಸವಿರುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಆದಾಯ ಮೂಲವೇ ಸರಿ. ಉತ್ತಮ ಕಾಮಿಕ್‌ಗಳನ್ನು ಪತ್ರಿಕೆಗಳಿಗೆ ಕೊಡುವುದು, ಇನ್ನೊಬ್ಬರ ಚಿತ್ರ ಬಿಡಿಸುವುದರ ಮೂಲಕ ಹಣ ಸಂಪಾದನೆ ಮಾಡಬಹುದು.
ಕಾಮಿಕ್ ಬುಕ್‌ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅವುಗಳನ್ನು ಓದುವವರ ಸಂಖ್ಯೆಯೂ ಅಧಿಕವಾಗಿದೆ. ಆ ಕಾರಣಕ್ಕೆ ಈ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶವೂ ಅಧಿಕವಾಗಿದೆ. ಕಾಲೇಜಿಗೆ ಹೋಗುತ್ತಾ ಒಂದಷ್ಟು ಹಣ ಸಂಪಾದಿಸಬೇಕೆಂದು ಬಯಸುವ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಇದ್ದು, ವ್ಯಂಗಚಿತ್ರಗಳನ್ನು ಚಿತ್ರಿಸುವ ಉತ್ಸಾಹವಿದ್ದರೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು
ಕಾಮಿಕ್ ಆರ್ಟಿಸ್ಟ್ ಆಗುವುದು ಹೇಗೆ?
ಕಾಮಿಕ್ ಆರ್ಟ್ ಎಂಬುದು ಒಂದು ಡಿಗ್ರಿಯಾಗಿದ್ದು ಇದರಲ್ಲಿ ಡಿಜಿಟಲ್ ಹಾಗೂ ನಾರ್ಮಲ್ ಕಾಮಿಕ್‌ನ ಬಗ್ಗೆ ಕಲಿಯಲು ಅವಕಾಶಗಳಿವೆ. ಅಥವಾ ಯಾವುದೇ ಡಿಗ್ರಿ ಪಡೆದರೂ ಕಾಮಿಕ್ ರಚನೆಯಲ್ಲಿ ತೊಡಗಿಸಿಕೊಳ್ಳಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ ಹಾಗೂ ಚಿತ್ರ ಬಿಡಿಸುವ ಕಲೆ. ಯಾವುದೇ ಒಂದು ವಿಷಯವನ್ನು ನೋಡಿದಾಗಲೂ ಅದನ್ನು ಹೊಸತಾಗಿ ಹೇಗೆ ಬರೆಯಬಹುದು ಎಂದು ತಿಳಿದುಕೊಂಡವನು ಉತ್ತಮ ಕಾಮಿಕ್ ಬರಹಗಾರನಾಗಲು ಸಾಧ್ಯ. ಕಾಮಿಕ್ ಆರ್ಟ್ ಡಿಗ್ರಿ ಪ್ರೊಫೆಶನಲ್ ಡಿಗ್ರಿಯಾಗಿದ್ದು, ಕೆಲಸ ಲಭಿಸುತ್ತದೆ.
– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.