ಶತಮಾನಗಳು ಕಳೆದರೂ ತೀರದ ಹಸಿವಿನ ಸಮಸ್ಯೆ
ಇಂದು ವಿಶ್ವ ಆಹಾರ ದಿನ
Team Udayavani, Oct 16, 2019, 5:39 AM IST
ಆಹಾರ ಕೊರತೆ ಜಾಗತಿಕ ಸಮಸ್ಯೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ಸಾಮಾಜಿಕ ಆರ್ಥಿಕ ಅಂಶಗಳು ಆಹಾರ ಅಲಭ್ಯತೆಗೆ ಕಾರಣವಾಗಿವೆ. ಇದು ಅಭಿವೃದ್ಧಿ ಕುಂಠಿತಗೊಳ್ಳಲೂ ಕಾರಣವಾಗುತ್ತದೆ. ಆಹಾರ ಸಮಸ್ಯೆ ಕುರಿತು ಅರಿವು ಮೂಡಿಸಲು ಮತ್ತು ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಹೇಳಲು ಅ.16ರಂದು ವಿಶ್ವಾದ್ಯಂತ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ.
ಹಿನ್ನೆಲೆ ಏನು?
1945 ಅ.16ರಲ್ಲಿ ವಿಶ್ವ ಸಂಸ್ಥೆ ತನ್ನ ಪ್ರಮುಖ ಅಂಗ ಸಂಸ್ಥೆಯಾಗಿ ರೋಮ್ ದೇಶದಲ್ಲಿ “ಆಹಾರ ಮತ್ತು ಕೃಷಿ ಸಂಸ್ಥೆ’ (ಫುಡ್ ಆ್ಯಂಡ್ ಅಗ್ರಿಕಲ್ಚರಲ್ ಆರ್ಗನೈಜೇಶನ್) ಮುಖ್ಯ ಕಚೇರಿಯನ್ನು ಸ್ಥಾಪನೆ ಮಾಡಿದ್ದು, ಈ ದಿನದ ಗೌರವಾರ್ಥವಾಗಿ “ವಿಶ್ವ ಆಹಾರ ದಿನ’ವನ್ನು ಆಚರಿಸಲಾಗುತ್ತಿದೆ.
1981ರಲ್ಲಿ ಪ್ರಾರಂಭ
ವಿಶ್ವ ಆಹಾರ ದಿನವನ್ನು ನವೆಂಬರ್ 1979ರಲ್ಲಿಯೇ ಆಹಾರ ಮತ್ತು ಕೃಷಿ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಆರಂಭಿಸಿದ್ದರೂ ಜಗತ್ತಿನಾದ್ಯಂತ ಅಧಿಕೃತವಾಗಿ 1981ರಿಂದ ಜಾರಿಗೆ ಬಂದಿದೆ. ಪ್ರತಿ ವರ್ಷ ಅಕ್ಟೋಬರ್ 16ರಂದು ಆಹಾರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ನಮ್ಮ ಕಾರ್ಯಗಳೇ ನಮ್ಮ ಭವಿಷ್ಯ
ಈ ವರ್ಷ “ನಮ್ಮ ಕಾರ್ಯಗಳೇ ನಮ್ಮ ಭವಿಷ್ಯ’ ಎಂಬ ಹ್ಯಾಶ್‌ಟ್ಯಾಗ್‌ನಡಿ ಅಭಿಯಾನ ಆರಂಭಿಸಲಾಗಿದೆ. ಹಸಿವು ರಹಿತ ಜಗತ್ತಿಗಾಗಿ ಆರೋಗ್ಯಕಾರಿ ಪಥ್ಯ ಎಂಬ ಧ್ಯೇಯ ವಾಕ್ಯವನ್ನು ಸಂಸ್ಥೆ ಹೊಂದಿದೆ.
82.16 ಕೋಟಿ
2018ರ ಅಂಕಿ-ಅಂಶದ ಪ್ರಕಾರ 82.16 ಕೋಟಿಗೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಪ್ರತಿ 9 ಜನರಲ್ಲಿ ಓರ್ವ ಆರೋಗ್ಯಕರ ಜೀವನ ನಡೆಸಲು ಬೇಕಾಗುವ ಆಹಾರ ಪಡೆಯಲು ವಿಫಲವಾಗುತ್ತಿದ್ದಾರೆ.
ಪ್ರತಿ ಸೆಕೆಂಡಿಗೆ 1 ಸಾವು
ಪ್ರಪಂಚಾದ್ಯಂತ ಪ್ರತಿ ಸೆಕೆಂಡಿಗೆ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಈ ವರ್ಷ 3.6 ಕೋಟಿ ಜನರು ಹಸಿವಿನಿಂದ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ.
ಪ್ರಮುಖ ಉದ್ದೇಶ
ಕೃಷಿ ಅಭಿವೃದ್ಧಿ ಮೂಲಕ ಜಗತ್ತಿನಾದ್ಯಂತ ಹಸಿವು ಮುಕ್ತ ಸಮಾಜ ನಿರ್ಮಾಣ ಮತ್ತು ಬಡತನ ನಿರ್ಮೂಲನೆ ಪ್ರಮುಖ ಉದ್ದೇಶವಾಗಿದೆ.
5 ದಶಲಕ್ಷ
ಕಳೆದ ವರ್ಷ ನಡೆದ ಸಮೀಕ್ಷೆ ಒಂದರ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದು, ಈ ಪೈಕಿ 5 ವರ್ಷದ ಒಳಗಿನ ಮಕ್ಕಳ ಪ್ರಮಾಣ ಹೆಚ್ಚಿದೆ.
ಶೇ.40 ರಷ್ಟು ವ್ಯರ್ಥ
ವಿಶ್ವ ಸಂಸ್ಥೆಯ “ಆಹಾರ ಮತ್ತು ಕೃಷಿ ಸಂಸ್ಥೆ’ಯ ಪ್ರಕಾರ ಭಾರತದಲ್ಲಿ ಶೇ.40 ಪ್ರಮಾಣದಷ್ಟು ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿವೆ.
103 ನೇ ಸ್ಥಾನ
ಕಳೆದ ವರ್ಷದ ವಿಶ್ವ ಆಹಾರ ಸೂಚ್ಯಂಕದ ಅಂಕಿ-ಅಂಶದ ಪ್ರಕಾರ ಆಹಾರ ಕೊರತೆ ಸಮಸ್ಯೆ ಎದುರಿಸುತ್ತಿರುವ ದೇಶಗಳ ಪೈಕಿ ಭಾರತ 103ನೇ ಸ್ಥಾನಿಯಾಗಿದೆ.
ಭಾರತದ ಪರಿಸ್ಥಿತಿ ಏನು?
90 ಲಕ್ಷ
ಪ್ರತಿವರ್ಷ ಹಸಿವಿನಿಂದ ಸಾಯುತ್ತಿರುವವರ ಸಂಖ್ಯೆ
· ದೇಶದಲ್ಲಿ 19.44 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ.
· ಶೇ.20.8ರಷ್ಟು 5 ವರ್ಷದೊಳಗಿನ ಮಕ್ಕಳು ಆಹಾರದ ಕೊರತೆಯಿಂದ ಕಡಿಮೆ ತೂಕ ಹೊಂದುತ್ತಿದ್ದಾರೆ.
· ಆಹಾರದ ಕೊರತೆಯಿಂದ ಶೇ.37.9ರಷ್ಟು 5 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ.
· ಶೇ.51.4ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ.
ಆಹಾರ ಸಮಸ್ಯೆ ಇರುವ ಟಾಪ್ 10 ದೇಶಗಳು
(2018 ಅಂಕಿ-ಅಂಶ ಪ್ರಕಾರ )
· ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
· ಚಾದ್
· ಯೆಮೆನ್
· ಮಡಗಾಸ್ಕರ್
· ಜಾಂಬಿಯಾ
· ಸಿಯೆರಾ ಲಿಯೋನ್
· ಹೈಟಿ
· ಸೂಡಾನ್
· ಅಫ್ಘಾನಿಸ್ಥಾನ
· ಟಿಮೋರ್ ಲಿಸ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.