ಭೀಕರ ಚಂಡಮಾರುತಕ್ಕೆ ತತ್ತರಿಸಿದ ಜಪಾನ್: ಸಾವಿನ ಸಂಖ್ಯೆ 74ಕ್ಕೆ ಏರಿಕೆ
Team Udayavani, Oct 16, 2019, 7:54 AM IST
ಟೋಕಿಯೋ: 60 ವರ್ಷಗಳಲ್ಲೇ ಬೀಸಿದ ಪ್ರಬಲ ಚಂಡಮಾರುತ ಜಪಾನನ್ನು ಅಕ್ಷರಶಃ ನರಕಸದೃಶವಾಗಿಸಿದ್ದು ಸಾವಿನ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. 300 ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಕಾಣೆಯಾದವರಿಗೆ ಹುಡುಕಾಟ ತೀವ್ರಗೊಂಡಿದೆ.
ಕಳೆದ ವಾರ ಜಪಾನ್ ದ್ವೀಪ ಸಮೂಹದಲ್ಲಿ ಪ್ರಬಲ ಹಗಿಬೀಸ್ ಚಂಡಮಾರುತ ಕಾಣಿಸಿಕೊಂಡಿದ್ದು ಭಾರೀ ಮಳೆಯಿಂದ ಆರು ಮಿಲಿಯನ್ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಲಾಗಿತ್ತು. 52 ನದಿಗಳು ಪ್ರವಾಹಕ್ಕೆ ಸಿಲುಕಿದ್ದವು . ಪುಕುಶಿಮಾ ಪ್ರಾಂತ್ಯದಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದ್ದು ಜಪಾನ್ ಪ್ರಧಾನಿ ಶಿಂಜೊ ಅಬೆ 710 ಮಿಲಿಯನ್ ಯೆನ್ ಪರಿಹಾರ ಘೋಷಿಸಿದ್ದಾರೆ.
ಹಗಿಬೀಸ್ ಎಂದರೆ ಫಿಲಿಪಿನೋ ಭಾಷೆಯಲ್ಲಿ “ವೇಗ’ ಎಂದು ಅರ್ಥ. ಇದು ಉತ್ತರ-ವಾಯವ್ಯದತ್ತ ಮುನ್ನುಗ್ಗಿ, ಗಂಟೆಗೆ 162 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದೆ.60 ವರ್ಷಗಳ ಹಿಂದೆ ಅಂದರೆ 1958ರಲ್ಲಿ ಟೋಕಿಯೋಗೆ ಅಪ್ಪಳಿಸಿದ್ದ ಚಂಡಮಾರುತವು 1,200ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿತ್ತು. ಈ ದುರಂತದಲ್ಲಿ 5 ಲಕ್ಷದಷ್ಟು ಮನೆಗಳು ಜಲಾವೃತವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.