ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳ ನೀಡಿ
Team Udayavani, Oct 16, 2019, 12:21 PM IST
ಹುಕ್ಕೇರಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವತಾವಾದಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳಾವಕಾಶ ನೀಡಬೇಕೆಂದು ವಿರಕ್ತಮಠದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಹುಕ್ಕೇರಿ ಶ್ರೀ ಬಸವ ಸಮಿತಿ ಸದಸ್ಯರು ಹಾಗೂ ನಾಗರಿಕರು ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಏಕತೆ ಹಾಗೂ ಸಮಾನತೆ ಸಂದೇಶ ಸಾರಿದ ಬಸವೇಶ್ವರರು ಅವರ ಹಿತೋಪದೇಶಗಳು ಹಾಗೂ ಅವರ ತತ್ವ-ಸಿದ್ಧಾಂತಗಳು ನಮ್ಮ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಹುಕ್ಕೇರಿ ಶ್ರೀಬಸವ ಸಮಿತಿ ಸದಸ್ಯರ ನೇತೃತ್ವದಲ್ಲಿ ತಾಲೂಕಿನ ನಾನಾ ಗ್ರಾಮಗಳ ಪ್ರಮುಖ ಸ್ಥಳದಲ್ಲಿ ಬಸವ ಮೂರ್ತಿ ಪ್ರತಿಷ್ಠಾಪನೆ ಮಾಡುವ ಉದ್ದೇಶ ಹೊಂದಲಾಗಿದೆ. ಆದ್ದರಿಂದ ತಾಲೂಕು ಆಡಳಿತ ಸೂಕ್ತ ಸ್ಥಳವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬಸವ ಸಮಿತಿ ಮುಖಂಡರಾದ ಸುಹಾಸ ನೂಲಿ, ಅಪ್ಪುಶ ತುಬಚಿ, ಬಸವೇಶ ಪಟ್ಟಣಶೆಟ್ಟಿ, ರಾಜು ಕುರಂದವಾಡೆ, ಚಂದ್ರಶೇಖರ ಗಂಗಣ್ಣವರ, ಭೀಮಶಿ ಗೋರಖನಾಥ, ಸಿ,ಜಿ. ಪಾಟೀಲ, ಮಹಾಂತೇಶ ಸಂಬಾಳ, ಆನಂದ ಜಿರಲಿ, ಸದಾಶಿವ ಕರೆಪ್ಪಗೋಳ, ಚಂದು ಮುತ್ತಾಳೆ ಸೇರಿದಂತೆ ಬಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.