ಗಂಟುಮೂಟೆ: ರೂಪಾ ರಾವ್ ಸೃಷ್ಟಿಸಿದ ಪ್ರೇಮಕಾವ್ಯ!
Team Udayavani, Oct 16, 2019, 6:43 PM IST
ಗಂಟುಮೂಟೆ ಎಂಬ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಕನ್ನಡದ ಪ್ರೇಕ್ಷಕರನ್ನೆಲ್ಲ ಥ್ರಿಲ್ ಆಗಿಸಿತ್ತು. ಬಹುತೇಕರು ಅದನ್ನು ನೋಡಿ ತಮ್ಮ ನೆನಪುಗಳನ್ನೆಲ್ಲ ಮತ್ತೆ ನೇವರಿಸಿ ನೋಡಿಕೊಂಡು ಪುಳಕಿತರಾಗಿದ್ದರು. ಅದರಲ್ಲಿನ ಹಶ್ಕೂಲು ಹುಡುಗ ಹುಡುಗಿಯ ಪ್ರೇಮ ಸಲ್ಲಾಪ, ಅದರಾಚೆಗಿನ ಕೆಲ ಅಂಶಗಳ ಹೊಳಹಿನಿಂದ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದರು. ಒಂದು ಯಶಸ್ವಿ ಟ್ರೇಲರ್ ಎಂಥಾ ಲಕ್ಷಣಗಳನ್ನು ಹೊಂದಿರಬೇಕೋ ಅದನ್ನೆಲ್ಲ ಹೊಂದಿದ್ದ ಈ ಟ್ರೇಲರ್ ಯೂಟ್ಯೂಬ್‌ನಲ್ಲಿಯೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿತ್ತು.
ಈ ಚಿತ್ರದ ಮೂಲಕವೇ ರೂಪಾ ರಾವ್ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಷ್ಟಕ್ಕೂ ಇವರೇನು ಅಪರಿಚಿತರಲ್ಲ. ಈಗಾಗಲೇ ಒಂದಷ್ಟು ಕಿರು ಚಿತ್ರಗಳು ಮತ್ತು ವೆಬ್ ಸೀರೀಸ್ ಮೂಲಕ ಹೆಸರು ಮಾಡಿರುವವರು. ಕೇವಲ ಕನ್ನಡ ಮಾತ್ರವಲ್ಲದೇ ಇತರೇ ಭಾಷೆಗಳಲ್ಲಿಯೂ ಆ ವೆಬ್ ಸೀರೀಸ್ ಹೆಸರುವಾಸಿಯಾಗಿತ್ತು. ಅದರಲ್ಲಿಯೂ ಕೂಡಾ ರೂಪಾ ರಾವ್ ಹದಿಹರೆಯದ ಹೆಣ್ಣೊಬ್ಬಳ ಒಡಲ ಮರ್ಮರವನ್ನು ಧ್ವನಿಸುವಂಥಾ ರೀತಿಯಲ್ಲಿ ದೃಶ್ಯ ಕಟ್ಟಿದ್ದರು.
ಗಂಟುಮೂಟೆಯೊಳಗೂ ಸಹ ಅವರು ಅಂಥಾದ್ದೇ ಬೆರಗುಗಳನ್ನಿಟ್ಟಿದ್ದಾರೆ. ಇದು ತೊಂಬತ್ತರ ದಶಕದಲ್ಲಿ ನಡೆಯೋ ಹೈಸ್ಕೂಲು ದಿನಗಳ ಪ್ರೇಮ ಕಥಾನಕದ ಚಿತ್ರ. ತೀರಾ ಹೆಚ್ಚೆನೂ ಹಳೆಯದಲ್ಲವಾದರೂ ಆ ಕಾಲದ ಫೀಲಿಂಗ್ಸ್ಗೂ ಈ ಕಾಲದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದು ಭಾವನೆಗಳೆಲ್ಲ ಬೆರಳ ಮೊನೆಗೆ ಬಾರದೆ ಹೃದಯದಲ್ಲಿಯೇ ಬೆಚ್ಚಗೆ ಉಳಿದುಕೊಂಡಿದ್ದ ಕಾಲ. ಅಂಥಾ ಹೊತ್ತಿನಲ್ಲಿ ಸಿನಿಮಾ ದೃಶ್ಯಗಳಿಗೂ ಬದುಕಿಗೂ ಥಳುಕು ಹಾಕಿಕೊಂಡ ಮನಸ್ಥಿತಿಯ ಹುಡುಗಿಯ ಕಣ್ಣಲ್ಲಿ ಪ್ರೇಮದ ಭಾವಗಳನ್ನು ನೋಡೋ ಪ್ರಯತ್ನ ಗಂಟುಮೂಟೆಯಲ್ಲಿದೆ. ಈ ಚಿತ್ರ ಈ ವಾರವೇ ತೆರೆಗಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.