ಗೊಂದಲದ ನಡುವೆಯೇ ಟೆಂಡರ್ ಪ್ರಕ್ರಿಯೆ !
ಗುತ್ತಿಗೆ ಅವಧಿ ನ. 18ಕ್ಕೆ ಮುಕ್ತಾಯ
Team Udayavani, Oct 17, 2019, 5:18 AM IST
ಸುರತ್ಕಲ್ ಟೋಲ್‌ಗೇಟ್‌ನ ಚಿತ್ರಣ
ಸುರತ್ಕಲ್: ಇಲ್ಲಿನ ಟೋಲ್ ಗೇಟ್ ಗುತ್ತಿಗೆ ನವೀಕರಣಕ್ಕೆ ಹೆದ್ದಾರಿ ಇಲಾಖೆ ಪ್ರಕ್ರಿಯೆ ಆರಂಭಿಸಿದೆ. ಈಗಿನ ಕೇಶವ ಅಗರವಾಲ್ ಕಂಪೆನಿಯ ಗುತ್ತಿಗೆ ಅವ ಧಿ ನ. 18ಕ್ಕೆ ಮುಕ್ತಾಯಗೊಳ್ಳಲಿದೆ. ಮನಪಾ ವ್ಯಾಪ್ತಿಯ ಸುರತ್ಕಲ್‌ನಲ್ಲಿ ಟೋಲ್‌ಗೇಟ್ ಕಾರ್ಯನಿರ್ವಹಿಸುತ್ತಿದೆ. ನವಮಂಗಳೂರು ಬಂದರು ಇಲ್ಲಿರುವು ದರಿಂದ ಎನ್‌ಎಂಪಿಟಿ ಪೊರ್ಟ್ ರೋಡ್ ಎಂದು ಮರುನಾಮ ಕರಣ ಮಾಡಿ, ಟೋಲ್ ಪಡೆಯುತ್ತಿದೆ.
ಹೆದ್ದಾರಿ ಇಲಾಖೆ ಅಧಿಧೀನದಲ್ಲಿ ರುವ ಇರ್ಕಾನ್ ಸಂಸ್ಥೆ ನಿರ್ಮಿಸಿದ ಈ ಟೋಲ್‌ನಲ್ಲಿ ಬಿ.ಸಿ. ರೋಡ್‌ನಿಂದ ಸುರತ್ಕಲ್‌ವರೆಗೆ ಸಂಚಾರ ಮಾಡುವ ಜನತೆ ಟೋಲ್ ಪಾವತಿಸುತ್ತಿದ್ದಾರೆ. ಕೇಶವ ಅಗರವಾಲ್ ಗುತ್ತಿಗೆ ಕಂಪೆನಿ 2018ರ ಸುಂಕ ವಸೂಲಿ ಜವಾಬ್ದಾರಿ ವಹಿ ಸಿಕೊಂಡಿದ್ದು, ದಿನಕ್ಕೆ 9 ಲಕ್ಷ ರೂ. ಮಿಕ್ಕಿ ಸಂಗ್ರಹಿಸಿ ಹೆದ್ದಾರಿ ಇಲಾಖೆಯ ಬೊಕ್ಕಸಕ್ಕೆ ನೀಡುವ ಗುರಿ ಹೊಂದಿದೆ. ಈ ಬಾರಿ ಗುತ್ತಿಗೆ ನವೀಕರಣ ದಿನಕ್ಕೆ 10 ಲಕ್ಷ ರೂ. ದಾಟುವ ಸಾಧ್ಯತೆಯಿದೆ. ಇದೀಗ ಗುತ್ತಿಗೆ ಪಡೆದಿರುವ ಕಂಪೆನಿ ನಷ್ಟದಲ್ಲಿರುವುದಾಗಿ ಹೇಳಿ ಸ್ಥಳೀಯ ವಾಹನಗಳಿಂದಲೂ ಸುಂಕ ವಸೂಲಿಗೆ ಮುಂದಾಗಿತ್ತು.
ಪಾಲಿಕೆಯ ಒಳಗೆ ಟೋಲ್ ಸಂಗ್ರಹ
ಕಾನೂನು ಬಾಹಿರವೆಂದು ಸ್ಥಳೀಯ ಸಂಘ – ಸಂಸ್ಥೆಗಳು ತೀವ್ರ ಹೋರಾಟ ನಡೆಸಿದ್ದವು. ಹಲವು ಬಾರಿ ಟೋಲ್ ಗುತ್ತಿಗೆ ನವೀಕರಣ ಇಲ್ಲ ಎಂಬ ಜನಪ್ರತಿನಿಧಿ ಗಳ ಭರವಸೆ ಮೇರೆಗೆ ಹೋರಾಟ ಸ್ಥಗಿತಗೊಳಿಸಿದ್ದವು. ಆದರೆ ಟೋಲ್ ಗುತ್ತಿಗೆ ನಡೆದು ಮತ್ತೆ ಆರಂಭವಾಗಿತ್ತು. ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಸವಾರರೂ ಟೋಲ್ ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕರ ಆಕ್ರೋಶ
ಬಂಟ್ವಾಳ – ಸುರತ್ಕಲ್ ನಡುವೆ ಈ ಹಿಂದಿನ ಇರ್ಕಾನ್ ಸಂಸ್ಥೆ ರಸ್ತೆ ನಿರ್ಮಿಸಿದ ಟೋಲ್ ಮೂಲಕ ಸುಂಕ ವಸೂಲಿ ಮಾಡುತ್ತಿದೆ. ಮುಕ್ಕ ಬಳಿಕ ನವಯುಗ್ ಸಂಸ್ಥೆ ರಸ್ತೆ ನಿರ್ಮಿಸಿದ್ದು, ಗುಣಮಟ್ಟದಲ್ಲಿಯೂ ಮುಂದಿದೆ. ಇದೀಗ ಎರಡು ಕಂಪೆನಿಗಳು ಅಕ್ಕಪಕ್ಕ ರಸ್ತೆ ನಿರ್ಮಾಣ ಮಾಡಿರುವುದರಿಂದ ಹೆದ್ದಾರಿ ಇಲಾಖೆ ಸುರತ್ಕಲ್, ಹೆಜಮಾಡಿ ಮತ್ತು ಬ್ರಹ್ಮರಕೂಟ್ಲು ಬಳಿ ಅತೀ ಕಡಿಮೆ ಅಂತರದಲ್ಲಿ ಟೋಲ್ ವಸೂಲಿಗೆ ಆದೇಶ ನೀಡಿರುವುದು ಸರಿಯಲ್ಲ. ಈ ಬಾರಿ ಟೋಲ್ ಕೇಂದ್ರವನ್ನು ಮುಚ್ಚಲೇಬೇಕು. ಸಂಸದರು, ಶಾಸಕರು ಈ ನಿಟ್ಟಿನಲ್ಲಿ ಕಠಿನ ನಿರ್ಧಾರ ಕೈಗೊಳ್ಳಬೇಕು. ಈ ಮೂಲಕ ಜನತೆಗೆ ನ್ಯಾಯ ಒದಗಿಸಬೇಕು ಎಂದು ಹೇಳುತ್ತಾರೆ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ. ಇದೀಗ ಮತ್ತೆ ಟೋಲ್ ಮುಚ್ಚುವ ಹೋರಾಟಕ್ಕೆ ವಿವಿಧ ಸಂಘಟನೆಗಳು ತಯಾರಿ ನಡೆಸಿವೆ.
ಅಧಿಕಾರಿಗಳಲ್ಲಿ ಮಾತುಕತೆ
ಸುರತ್ಕಲ್ ಟೋಲ್‌ಗೇಟ್ ಮುಚ್ಚಬೇಕು ಇಲ್ಲವೆ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸಬೇಕು ಎಂದು ಹೆದ್ದಾರಿ ಇಲಾಖೆಗೆ ಪತ್ರ ಬರೆದು ವಿನಂತಿಸಿದ್ದೆ. ಈ ಬಾರಿಯೂ ಅಧಿ ಕಾರಿಗಳನ್ನು ಕಂಡು ಈ ಬಗ್ಗೆ ಒತ್ತಾಯಿಸಲಾಗುವುದು.
– ನಳಿನ್ ಕುಮಾರ್‌ಕಟೀಲು, ಸಂಸದರು
ಟೋಲ್‌ಗೇಟ್ ಮುಚ್ಚಲು ಒತ್ತಾಯ
ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ಬಿಜೆಪಿ ಒತ್ತಾಯಿಸುತ್ತದೆ. ಕಡಿಮೆ ಅಂತರದಲ್ಲಿ ಸುರತ್ಕಲ್ ಟೋಲ್‌ಗೇಟ್ ಇರುವುದನ್ನು ಮುಚ್ಚಬೇಕು ಇಲ್ಲವೆ ತಾಂತ್ರಿಕ ಅಡಚಣೆ ನಿವಾ ರಿಸಿ, ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನ ಮಾಡಬೇಕು ಎಂಬುದು ನಮ್ಮ ಆಗ್ರಹ.
- ಡಾ| ಭರತ್ ಶೆಟ್ಟಿ ವೈ., ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.