20 ಎಕರೆ ಕೃಷಿ ಭೂಮಿಯಲ್ಲಿ ಭತ್ತ ಬೆಳೆದ ಸಾಧನೆ
ಸಂಕಲಕರಿಯ: ತರಾತುರಿಯಲ್ಲಿ ಪೈರು ಕಟಾವು
Team Udayavani, Oct 17, 2019, 5:39 AM IST
ಬೆಳ್ಮಣ್: ಅಕಾಲಿಕವಾಗಿ ಸುರಿಯುತಿರುವ ಭಾರೀ ಮಳೆಗೆ ಕರಾವಳಿ ಭಾಗದ ಕೃಷಿಕರಿಗೆ ತಾವು ಬೆಳೆದ ಭತ್ತದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಸಾಲ ಮಾಡಿ ಬೆಳೆ ಬೆಳೆದು ಕಟಾವಿಗೆ ಬಂದಾಗ ಸುರಿಯುತ್ತಿರುವ ಅಕಾಲಿಕ ಮಳೆ ಗ್ರಾಮೀಣ ಭಾಗದ ರೈತರ ನಿದ್ದೆ ಕೆಡಿಸಿದೆ.
ಸಂಕಲಕರಿಯದ ಯುವ ಸಾಧಕ ಕೃಷಿಕ ತನ್ನ ಹಿರಿಯರ ಜಮೀನಿನ ಜತೆ ಸುಮಾರು 20 ಎಕರೆ ಕೃಷಿ ಭೂಮಿಗಳಲ್ಲಿ ಭತ್ತದ ಬೆಳೆ ಬೆಳೆದಿದ್ದರು. ಇದೀಗ ಅವೆಲ್ಲವೂ ಕಟಾವಿಗೆ ಬಂದಿದ್ದು ಪ್ರತೀ ದಿನ ಮಧ್ಯಾಹ್ನ ಆರಂಭವಾಗುತ್ತಿರುವ ಮಳೆ ಇವರ ಕೃಷಿ ಕಾಯಕಕ್ಕೆ ಅಡ್ಡಿಯಾಗಿದೆ. ಪ್ರತಿ ದಿನ ಮಧ್ಯಾಹ್ನ ಮಳೆ ಆರಂಭವಾಗುತ್ತಿದ್ದು ಬೆಳೆದು ನಿಂತ ಪೈರುಗಳನ್ನು ಯಂತ್ರದ ಮೂಲಕ ಕಟಾವು ಮಾಡಿ ತರಾತುರಿಯಲ್ಲಿ ಗೋಣಿಚೀಲಗಳಿಗೆ ತುಂಬಿಸಲಾಗುತ್ತಿದೆ.
ಭತ್ತ ಸೇಫ್
ಯಂತ್ರಗಳ ಮೂಲಕ ಕಟಾವು ಮಾಡಿ ಭತ್ತವನ್ನು ಕೂಡಲೇ ಗೋಣಿಚೀಲಗಳ ಮೂಲಕ ತುಂಬಿ ಸಾಗಿಸಲಾಗುತ್ತಿದ್ದರೂ ಬೆಲೆ ಬಾಳುವ ಬೈಹುಲ್ಲುಗಳು ಗದ್ದೆಯಲ್ಲೇ ಇದ್ದು ಮಳೆ ನೀರಿಗೆ ಕೊಳೆಯುತ್ತಿವೆ. ಈ ಕಾರಣಕ್ಕಾಗಿ ಅತಿಯಾಗಿ ಬರುತ್ತಿರುವ ಮಳೆ ಕರಾವಳಿಯ ಕೃಷಿಕರಿಗೆ ಇದೀಗ ಶಾಪವಾಗತೊಡಗಿದೆ.
ಮುಂಡ್ಕೂರು, ಬೆಳ್ಮಣ್‌ಗಳಲ್ಲಿ ಕಟಾವು ಯಂತ್ರಗಳು ರೆಡಿ
ಮುಂಡ್ಕೂರು ಹಾಗೂ ಬೆಳ್ಮಣ್ ಬಾಗದಲ್ಲಿ ಭತ್ತ ಕಟಾವು ಯಂತ್ರಗಳು ಸಿದ್ಧವಾಗಿದ್ದು ಗಂಟೆಗೆ 2,200 ರೂ. ದರದಲ್ಲಿ ಶಿವಮೊಗ್ಗದ ಮಾಲತೇಶ ಎಂಬವರು ಈ ಯಂತ್ರಗಳನ್ನು ಒದಗಿಸುತ್ತಿದ್ದಾರೆ. ಈಗಾಗಲೇ 4 ಕಟಾವು ಯಂತ್ರಗಳು ಮುಂಡ್ಕೂರು ಪರಿಸರದಲ್ಲಿ ಓಡಾಡುತ್ತಿವೆ. ಬೈಹು ಲ್ಲು ಕಟ್ಟುವ ಯಂತ್ರಗಳೂ ಸಜ್ಜಾಗಿದ್ದು ಕೂಲಿಯಾಳುಗಳ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಸಹಕಾರಿಯಾಗಿವೆ.
ಒಟ್ಟಾರೆಯಾಗಿ ಮಳೆಯ ನಡುವೆ ತರಾತುರಿಯಲ್ಲಿ ಕಟಾವು ಕಾರ್ಯ ಮುಗಿಸುವ ಹುನ್ನಾರದಲ್ಲಿರುವ ಕರಾವಳಿಯ ಕೃಷಿಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.