ಕೊಂಕಣ ರೈಲ್ವೇ: 102 ಕೋ.ರೂ. ನಿವ್ವಳ ಲಾಭ
Team Udayavani, Oct 17, 2019, 5:30 AM IST
ಉಡುಪಿ: ಕೊಂಕಣ ರೈಲ್ವೇ 2018-19ರ ಹಣಕಾಸು ವರ್ಷದಲ್ಲಿ 102 ಕೋ.ರೂ. ನಿವ್ವಳ ಲಾಭ ಗಳಿಸಿದೆ ಎಂದು ಕೊಂಕಣ ರೈಲ್ವೇಯ 29ನೇ ಸ್ಥಾಪನ ದಿನದಲ್ಲಿ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಂಜಯ ಗುಪ್ತ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಒಟ್ಟು 2,898 ಕೋ.ರೂ. ವ್ಯವಹಾರ ನಡೆಸಿದೆ. 1,561 ಕೋ.ರೂ. ಯೋಜನಾ ವ್ಯವಹಾರ ಮತ್ತು 1,264 ಕೋ.ರೂ. ನಿರ್ವಹಣ ವ್ಯವಹಾರ ಮಾಡಲಾಗಿದೆ.
ಕಳೆದ ಐದು ವರ್ಷಗಳಲ್ಲಿ 85.35 ಕೋ.ರೂ. ಮೊತ್ತವನ್ನು ಪ್ರಯಾಣಿಕರ ಮೂಲ ಸೌಲಭ್ಯಕ್ಕಾಗಿ ವೆಚ್ಚ ಮಾಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಮಡಗಾಂವ್, ಕರ್ಮಾಲಿ, ತಿವಿಮ್ ನಿಲ್ದಾಣಗಳನ್ನು 25 ಕೋ.ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಎಲ್ಲ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಸಿಗುತ್ತಿದೆ. ರೋಹಾದಿಂದ ವೀರ್ ವರೆಗೆ 46 ಕಿ.ಮೀ. ದೂರವನ್ನು ದ್ವಿಪಥವನ್ನಾಗಿ ಮಾಡಲಾಗುತ್ತಿದ್ದು ಮುಂದಿನ ಮಾರ್ಚ್‌ಗೆ ಮುಕ್ತಾಯಗೊಳ್ಳಲಿದೆ. ಇನ್ನಂಜೆ ಸೇರಿದಂತೆ 10 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 1,100 ಕೋ.ರೂ. ವೆಚ್ಚದ ವಿದ್ಯುದೀಕರಣ ಕಾಮಗಾರಿ 2021ರ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ.
ದೇಶದ ವಿವಿಧೆಡೆ ಪರಿಣತ ಎಂಜಿನಿಯರುಗಳ ತಂಡ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡು ನಿರ್ವಹಿಸುತ್ತಿದೆ. ಕೊಂಕಣ ರೈಲ್ವೇ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ಪರೀಕ್ಷಾ ವ್ಯವಸ್ಥೆ (ಎಟಿಇಎಸ್) ವಿವಿಧ ರೈಲ್ವೇ ವಲಯಗಳಲ್ಲಿ ಜಾರಿಗೊಂಡಿದೆ. ರೈಲ್ವೇ ಸುರಕ್ಷಾ ಪಡೆ 85 ಮಕ್ಕಳನ್ನು ವಿವಿಧ ನಿಲ್ದಾಣಗಳಲ್ಲಿ ರಕ್ಷಿಸಿದೆ. 2,257 ತಪ್ಪಿತಸ್ಥರಿಗೆ ದಂಡ ಶುಲ್ಕ ವಿಧಿಸಿದೆ. 1,622 ಅನಧಿಕೃತ ಮಾರಾಟಗಾರರು, 25 ಕಳ್ಳರನ್ನು ಬಂಧಿಸಿದೆ ಎಂದು ಅವರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.