ಸ್ತ್ರೀ ವೇಷದ ದಿವಾಕರ ಆವರ್ಸೆಗೆ ರಾಮ ನಾಯಿರಿ ಪ್ರಶಸ್ತಿ
Team Udayavani, Oct 18, 2019, 4:14 AM IST
ಬಡಗುತಿಟ್ಟಿನ ಅಪ್ರತಿಮ ಸ್ತ್ರೀವೇಷದಾರಿ ಎಳವೆಯಲ್ಲಿಯೇ ಅಸ್ತಂಗತರಾದ ಬ್ರಹ್ಮಾವರ ರಾಮ ನಾಯರಿಯವರ ಹೆಸರಿನಲ್ಲಿ ಬೆಂಗಳೂರಿನ ಯಕ್ಷ ಯಶಸ್ವಿ ಟ್ರಸ್ಟ್ ,ನಾಯರಿ ಸಂಘ ಬೆಂಗಳೂರು ಘಟಕದ ಮೂಲಕ ನೀಡುವ ರಾಮ ನಾಯರಿ ಸಂಸ್ಮರಣಾ ಪ್ರಶಸ್ತಿಯನ್ನು ಈ ಬಾರಿ ಬಡಗುತಿಟ್ಟಿನ ಶ್ರೇಷ್ಠ ಸ್ತ್ರೀ ವೇಷದಾರಿ,ರಾಮ ನಾಯರಿಯವರ ಒಡನಾಡಿ,ಜೂನಿಯರ್ ನಾಯರಿ ಎಂದೇ ಖ್ಯಾತರಾದ ಮಂದಾರ್ತಿ ಮೇಳದ ಸ್ತ್ರೀ ವೇಷಧಾರಿ ದಿವಾಕರ ಪೂಜಾರಿಯವರಿಗೆ ನೀಡಲಾಗುತ್ತದೆ.ಪ್ರಶಸ್ತಿ ಪ್ರದಾನ ಅ.19ರಂದು ಬೆಂಗಳೂರಿನ ಬಸವನಗುಡಿ ಪುತ್ತಿಗೆ ಮಠದ ಸಬಾಂಗಣದಲ್ಲಿ ನೆರವೇರಲಿದೆ.ಬಳಿಕ ನಾಯರಿಯವರಿಗೆ ಕೀರ್ತಿ ತಂದಿತ್ತ ನಾಗಶ್ರೀ ಪ್ರಸಂಗದ ಪ್ರದರ್ಶನ ನೆರವೇರಲಿದೆ.
ಸುಂದರವಾದ ರೂಪ, ಆಳಂಗ, ಸ್ತ್ರೀವೇಷಕೊಪ್ಪುವ ಸ್ವರಭಾರ,ಒನಪು ವಯ್ನಾರಗಳಿಂದ ನಿರಂತರ 32 ವರ್ಷ ಸ್ತ್ರೀವೇಷದಾರಿಯಾಗಿ ಜನಮನಗೆದ್ದ ದಿವಾಕರ ಪೂಜಾರಿಯವರು 4 ವರ್ಷ ರಾಮ ನಾಯರಿಯವರ ಒಡನಾಟದಿಂದ ಚುರುಕಿನ ನೃತ್ಯ,ಮಾತುಗಾರಿಕೆಯನ್ನು ಬಳುವಳಿಯಾಗಿ ಪಡೆದವರು.
ಏಳನೇ ತರಗತಿಗೆ ಕಲಿಕೆಗೆ ಶರಣು ಹೊಡೆದು ವಂಡಾರು ಬಸವ ನಾಯರಿಯವರ ಹೂವಿನಕೋಲು ಕಲಾವಿದರಾಗಿ ಯಕ್ಷಗಾನ ರಂಗಕ್ಕೆ ಸೇರ್ಪಡೆಗೊಂಡರು. ಹಾಸ್ಯಗಾರ ಆವರ್ಸೆ ಚಂದ್ರ ಕುಲಾಲರನ್ನು ಗುರುವಾಗಿ ಸ್ವೀಕರಿಸಿ ಹೆಜ್ಜೆಗಾರಿಕೆಯನ್ನೂ, ವಂಡಾರು ಬಸವ ನಾಯರಿಯವರಿಂದ ಅರ್ಥಗಾರಿಕೆಯನ್ನೂ ಕಲಿತ ಅವರು ಅಮೃತೇಶ್ವರಿ ಮೇಳದಲ್ಲಿ ಪ್ರಥಮವಾಗಿ ಗೆಜ್ಜೆ ಕಟ್ಟಿದರು.ಬಳಿಕ ಕೆಲವು ವರ್ಷಗಳ ನಂತರ ಅದೇ ಮೇಳದ ಪಧಾಾನ ಸ್ತ್ರೀವೇಷದಾರಿಯಾಗಿ ಮೂಡಿ ಬಂದದ್ದು ಅವರ ಸಾಧನೆಯೇ ಸರಿ.ಸಾಲಿಗ್ರಾಮ ಮೇಳದಲ್ಲಿ ಗುಂಡ್ಮಿ ಕಾಳಿಂಗ ನಾವಡರ ಭಾಗವತಿಕೆಗೆ ಹೆಜ್ಜೆ ಹಾಕಿದ್ದು ಅವರ ಹೆಚ್ಚುಗಾರಿಕೆ.ಅಲ್ಲಿ ಅರಾಟೆ ಮಂಜುನಾಥ, ದಯಾನಂದ ನಾಗೂರ್, ಹೊಸಂಗಡಿ ರಾಜೀವ ಶೆಟ್ಟಿ,ರಾಮ ನಾಯರಿ ಮುಂತಾದ ಸ್ತ್ರೀವೇಷದಾರಿಗಳು, ಜಲವಳ್ಳಿ ವೆಂಕಟೇಶ ರಾವ್, ಐರೋಡಿ ಗೋವಿಂದಪ್ಪ, ಬಳ್ಕೂರು ಕೃಷ್ಣ ಯಾಜಿ ಮುಂತಾದವರ ಒಡನಾಟದಿಂದ ಉತ್ತಮ ಸ್ತ್ರೀವೇಷಧಾರಿಯಾಗಿ ಮೂಡಿಬಂದರು. ಬಳಿಕ ಪೆರ್ಡೂರು, ಗೋಳಿಗರಡಿ, ಕಳುವಾಡಿ,ಬಚ್ಚಗಾರು ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರು ಸದ್ಯ ಮಂದಾರ್ತಿ ಮೇಳದಲಿದ್ದಾರೆ.
ಶೃಂಗಾರ ಪ್ರಧಾನವಾದ ಮಾಯಾ ಹಿಡಿಂಭೆ, ಮಾಯಾ ಶೂರ್ಪನಕೆ, ಶ್ವೇತಕುಮಾರ ಚರಿತ್ರೆಯ ತ್ರಿಲೋಕ ಸುಂದರಿ ರಂಭೆ, ಅಜಮುಖೀ, ಚಿತ್ರಾಕ್ಷಿ, ಭೀಷ್ಮೋತ್ಪತ್ತಿಯ ಸತ್ಯವತಿ, ಭ್ರಮರಕುಂತಳೆ ಮುಂತಾದ ಶೃಂಗಾರ ಪ್ರಧಾನ ವೇಷಗಳು ಅಪಾರ ಜನಮೆಚ್ಚುಗೆ ಪಡೆದಿದ್ದು ಇವುಗಳೆಲ್ಲಾ ರಾಮ ನಾಯರಿಯವರ ವೇಷದ ಪಡಿಯಚ್ಚಿನಂತೆ ಗೋಚರಿಸುತ್ತವೆ. ಶಶಿಪ್ರಭೆ, ದ್ರೌಪದಿ, ದಮಯಂತಿ, ಸೀತೆ ಸೈರೇಂಧ್ರಿ, ಮಂಡೋದರಿ ರುಚಿಮತಿ ಮುಂತಾದ ಪಾತ್ರಗಳಿಗೂ ಸಮಾನ ನ್ಯಾಯ ಒದಗಿಸಿದ್ದಾರೆ. ಜೋಡಾಟದ ಕಸೆವೇಷಗಳಾದ ಮೀನಾಕ್ಷಿ, ಪದ್ಮಗಂಧಿ, ದ್ರೌಪದಿ, ಸುಭದ್ರೆ, ಸತ್ಯಭಾಮೆ, ಮದನಾಕ್ಷಿ, ತಾರಾವಳಿ ಮುಂತಾದ ಪಾತ್ರಗಳು ಎದುರು ಮೇಳದ ಸ್ತ್ರೀವೇಷಧಾರಿಗಳಿಗೆ ಸಮಾನ ಸ್ಪರ್ಧೆಯನ್ನು ಒಡುªತ್ತಿದ್ದವು.
ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.