ಕೃಷ್ಣ ಸುಂದರಿಯ ವೆಬ್ ಸೀರೀಸ್
Team Udayavani, Oct 18, 2019, 5:11 AM IST
ಹಿಂದಿ ಚಿತ್ರರಂಗದಲ್ಲಿ ಇತ್ತೀಚೆಗೆ ಸಿನಿಮಾಗಳಿಗಿಂತ ವೆಬ್ ಸೀರೀಸ್‌ಗಳೇ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ. ಹೌದು, ಕಳೆದ ಎರಡು ವರ್ಷಗಳಿಂದ ಹಿಂದಿಯಲ್ಲಿ ಬರುತ್ತಿರುವ ವೆಬ್ ಸೀರೀಸ್‌ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಅದರಲ್ಲೂ ನಿಧಾನವಾಗಿ ಬಾಲಿವುಡ್‌ನ ಅನೇಕ ನಿರ್ಮಾಪಕರು, ನಿರ್ದೇಶಕರು ವೆಬ್ ಸೀರೀಸ್‌ಗಳ ನಿರ್ಮಾಣದತ್ತ ಆಸಕ್ತರಾಗುತ್ತಿದ್ದು, ಹಿಂದಿಯಲ್ಲಿ ವೆಬ್ ಸೀರೀಸ್ ಮಾರುಕಟ್ಟೆ ಕೂಡ ದೊಡ್ಡದಾಗುತ್ತಿದೆ. ಇಂಥ ವೆಬ್ ಸೀರೀಸ್‌ಗಳತ್ತ ಈಗ ಬಾಲಿವುಡ್‌ನ ಸ್ಟಾರ್ ನಟ, ನಟಿಯರೂ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಬಾಲಿವುಡ್‌ನ ಅನೇಕ ನಟಿಯರ ಚಿತ್ತ ಸದ್ಯ ಇಂಥ ವೆಬ್ ಸೀರಿಸ್‌ಗಳತ್ತ ನೆಟ್ಟಿದ್ದು, ಅನೇಕರು ವೆಬ್ ಸೀರೀಸ್‌ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಇದೀಗ, ಬಾಲಿವುಡ್‌ನ ಕೃಷ್ಣ ಸುಂದರಿ ನಟಿ ಕಾಜೋಲ್ ಕೂಡ ಅಂಥದ್ದೇ ವೆಬ್ ಸೀರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೌದು, ಕಾಜಲ್ ಸದ್ಯ ತ್ರಿಭಂಗ ಎಂಬ ವೆಬ್ ಸೀರೀಸ್‌ನಲ್ಲಿ ಅಭಿನಯಿಸುತ್ತಿದ್ದು, ಇದರ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ತ್ರಿಭಂಗ ಎಂಬುದು ಒಡಿಸ್ಸಿಯ ನೃತ್ಯ ಪ್ರಕಾರದ ಒಂದು ಭಂಗಿ. ಹೀಗಿರುವಾಗ, ಈ ಸರಣಿ ಕೂಡ ನೃತ್ಯದ ಮೇಲೆ ಇರುತ್ತದೆಯೇ ಎನ್ನುವ ಕುತೂಹಲ ಇದೆ. ತ್ರಿಭಂಗ ಒಂದೇ ಕುಟುಂಬದ ಮೂರು ಹೆಣ್ಣುಮಕ್ಕಳ ಕಥೆಯಾಗಿದ್ದು, ಈ ಸರಣಿಯ ಪ್ರಮುಖ ಪಾತ್ರವನ್ನು ಕಾಜೋಲ್ ನಿರ್ವಹಿಸುತ್ತಿದ್ದಾರೆ. ಉಳಿದಂತೆ ತನ್ವಿ ಅಝ್ಮಿ ಮಿಥಿಲಾ ಪಾಲ್ಕರ್ ಮೊದಲಾದವರು ಇದರ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ವೆಬ್ ಸೀರೀಸ್ ಅನ್ನು ರೇಣುಕಾ ಶಹನೆ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ತಮ್ಮ ತ್ರಿಭಂಗ ವೆಬ್ ಸೀರೀಸ್ ಬಗ್ಗೆ ಮಾತನಾಡುವ ಕಾಜೋಲ್ , “ಇದು 1980ರ ಕಾಲಘಟ್ಟದ ಕೌಟುಂಬಿಕ ಮೌಲ್ಯವನ್ನು ಹೇಳುವ ವೆಬ್‌ಸೀರೀಸ್. ಇಲ್ಲಿ ಪ್ರತಿ ಪಾತ್ರಗಳು ನೋಡು ಗರನ್ನು ಭಾವುಕರನ್ನಾಗಿಸುತ್ತದೆ. ಇಂಥದ್ದೊಂದು ವೆಬ್ ಸೀರೀಸ್ ಭಾಗವಾಗಿರುವುದಕ್ಕೆ ನನಗೂ ಖುಷಿಯಾಗುತ್ತಿದೆ. ಪ್ರೇಕ್ಷಕರ ಪ್ರತಿಕ್ರಿ ಯೆಯನ್ನು ನೋಡಲು ಕಾತುರಳಾಗಿದ್ದೇನೆ’ ಎಂದಿದ್ದಾರೆ. ಇನ್ನೊಂದು ವಿಶೇಷವೆಂದರೆ, ಕಾಜೋಲ್ ಪತಿ, ನಟ ಅಜಯ್ ದೇವಗನ್ ಈ ತ್ರಿಭಂಗ ವೆಬ್ ಸೀರೀಸ್ ನಿರ್ಮಾಣ ಮಾಡುತ್ತಿದ್ದಾರೆ. ಒಟ್ಟಾರೆ ಈಗಾಗಲೇ, ರಾಧಿಕಾ ಅಪ್ಟೆ, ಕೈರಾ ಅಡ್ವಾಣಿ, ಮನೀಶಾ ಕೊಯಿರಾಲಾ, ಭೂಮಿ ಪಡೆ°àಕರ್, ಅಮಲಾ ಪೌಲ್ ಮೊದಲಾದ ನಟಿಯರು ವೆಬ್ ಸೀರೀಸ್‌ನಲ್ಲಿ ಮಿಂಚಿ ಸಕ್ಸಸ್ ಆಗಿರುವಾಗ, ಈಗ ಕಾಜೋಲ್ ವೆಬ್ ಸೀರೀಸ್‌ಗೆ ಬರಲು ತಯಾರಿ ನಡೆಸುತ್ತಿದ್ದು, ತ್ರಿಭಂಗ ಕಾಜೋಲ್ ಕೈ ಹಿಡಿಯಲಿದೆಯಾ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.