ಹೆಂಗಳೆಯರ ಮನಗೆದ್ದ ಜಾಕೆಟ್‌ ಬ್ಲೌಸ್‌


Team Udayavani, Oct 18, 2019, 5:00 AM IST

e-17

ನಾರಿಯರ ಮನ ಗೆದ್ದಿರುವ ಸೀರೆಯಲ್ಲಿ ವಿವಿಧ ವಿನ್ಯಾಸಗಳು ಹುಟ್ಟಿಕೊಂಡಿವೆ. ಮಹಿಳೆಯರಿಗೆ ಎಷ್ಟೇ ಬೇರೆ ಉಡುಪುಗಳಿದ್ದರೂ ಸೀರೆ ಉಟ್ಟಾಗ ಅವರ ಸೌಂದರ್ಯ ದುಪ್ಪಟ್ಟಾಗುತ್ತದೆ. ಅದರಲ್ಲೂ ಇತ್ತೀಚೆಗೆ ಹೆಂಗಳೆಯರಿಗೆಂದೆ ಸೀರೆಯಲ್ಲೇ ನವ ನವೀನ ರೀತಿಯ ಡಿಸೈನ್‌ಗಳು ಬರುತ್ತಿದ್ದು ಮಹಿಳೆಯರ ಈ ವಿನ್ಯಾಸಗಳಿಗೆ ಮಾರು ಹೋಗುತ್ತಿದ್ದಾರೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಜಾಕೆಟ್‌ ಬ್ಲೌಸ್‌ ಸೀರೆಯ ಅಂದವನ್ನು ಇಮ್ಮಡಿಗೊಳಿಸುತ್ತಿದೆ. ಈಗ ಸೀರೆ ಉಟ್ಟಾಗ ಧರಿಸಲೆಂದೇ ವಿಶೇಷ ವಿನ್ಯಾಸದ ಜಾಕೆಟ್‌ಗಳು ಲಭ್ಯವಾಗುತ್ತಿವೆೆ. ಇನ್ನು ಮಹಿಳೆಯರು ಸೀರೆಗೊಪ್ಪುವಂತಹ ಜಾಕೆಟ್‌ಗಳನ್ನು ಆಯ್ಕೆಗನುಸಾರವಾಗಿ ಖರೀದಿಸಬಹುದಾಗಿದೆ.

ಇದು ಸಾಮಾನ್ಯವಾಗಿ ಶಾರ್ಟ್‌ ಕುರ್ತಿಯಷ್ಟು ಉದ್ದ ಇದ್ದು, ಎರಡು ಬದಿಗಳಲ್ಲಿ ಕುರ್ತಿಗಳಿಗಿರುವಂತೆ ಸೈಡ್‌ ಕಟ್‌ ಇರುತ್ತದೆ. ಇದರಲ್ಲಿ ಕಾಲರ್‌ ನೆಕ್‌, ಉದ್ದ ತೋಳು ತುಂಬಾ ಚೆಂದವಾಗಿ ಕಾಣುತ್ತದೆ. ಅದಲ್ಲದೆ ಬ್ಲೌಸ್‌ನ ಮೆರಗು ಹೆಚ್ಚಿಸಲು ಮಹಿಳೆಯರು ಸೀರೆಯನ್ನು ವಿಭಿನ್ನ ರೀತಿಯಲ್ಲಿ ಉಟ್ಟು ಮಿಂಚುತ್ತಿದ್ದಾರೆ. ಉತ್ತರ ಭಾರತದಲ್ಲಿ ಸೆರಗನ್ನು ಮುಂಭಾಗಕ್ಕೆ ಹಾಕಿ ಉಡುವಾಗ ಈ ಜಾಕೆಟ್‌ ಬ್ಲೌಸ್‌ ಆಕರ್ಷಕವಾಗಿ ಕಾಣುತ್ತದೆ.

ಜಾಕೆಟ್‌ ಸ್ಟೈಲ್‌
ದಿನಕ್ಕೊಂದು ಫ್ಯಾಷನ್‌ ಪರಿಚಯಿಸುವ ಬಾಲಿವುಡ್‌ ತಾರೆಯರು ಕೂಡ ಪಾರ್ಟಿ, ಇನ್ನಿತರ ಸಮಾರಂಭಗಳಿಗೆ ಈ ರೀತಿಯ ಜಾಕೆಟ್‌ ಬ್ಲೌಸ್‌ ಅನ್ನು ಉಟ್ಟು ಸಂಭ್ರಮಿಸುತ್ತಿದ್ದಾರೆ. ಇದು ನಟಿಯರಿಗಷ್ಟೇ ಅಲ್ಲ, ಕಾಲೇಜು ಸಮಾರಂಭ ಅಥವಾ ಮನೆಗಳಲ್ಲಿ ಆಗುವ ಕೆಲವು ಸಮಾರಂಭಗಳಲ್ಲಿ ತೊಟ್ಟು ವಿಭಿನ್ನ ಲುಕ್‌ನಲ್ಲಿ ಮಿಂಚಬಹುದಾಗಿದೆ. ಅದಲ್ಲದೆ ಸೀರೆಗಳಲ್ಲಿ ವಿಭಿನ್ನ ರೀತಿಯ ವಿನ್ಯಾಸಗಳು ಬಂದಿರುವುದು ಗೊತ್ತೆ ಇದೆ. ಅದರಲ್ಲಿ ಹಿಂದಿನ ಕಾಲದವರು ಉಡುತ್ತಿದ್ದ ಕಚ್ಚೆ ಸೀರೆಯ ಹಾಗೇ ಇರುವ ಈ ದೋತಿ ಸೀರೆಗಳಿಗೆ ಈ ಚಾಕೆಟ್‌ ಬ್ಲೌಸ್‌ಗಳು ಹೇಳಿ ಮಾಡಿಸಿದ್ದಾಗಿದೆ. ದೋತಿಗಳಿಗೆ ಬ್ಲೌಸ್‌ ಹೊಲಿಸುವಾಗ ಸಾಧ್ಯವಾದಷ್ಟು ಗಿಡ್ಡವಾಗಿರುವಂತೆ ನೋಡಿಕೊಳ್ಳಿ ಇಲ್ಲವಾದಲ್ಲಿ ಚೆಂದ ಕಾಣುವುದಿಲ್ಲ.

ಡಿಸೈನಿಂಗ್‌ ಚಾಕೆಟ್‌
ಸೀರೆಗೆ ಯಾವಾಗಲೂ ಕಾಂಟ್ರಾಸ್ಟ್‌ ಬಣ್ಣದ ಸ್ಲಿವ್‌ಲೆಸ್‌ ಜಾಕೆಟ್‌ ಧರಿಸುವುದು ಚೆನ್ನಾಗಿ ಕಾಣುತ್ತದೆ. ಆಗ ಕಾಂಬಿನೆಷನ್‌ ಎದ್ದು ಕಾಣುತ್ತದೆ. ಇವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆದಷ್ಟು ಸೀರೆ ತುಂಬಾ ಸಿಂಪಲ್‌ ಆಗಿರುವಂತೆ ನೋಡಿಕೊಳ್ಳಿ. ಹೆಚ್ಚೆಂದರೆ ತೆಳ್ಳಗಿರುವ ಬಾರ್ಡರ್‌ ಆದರೆ ಸಾಕು. ಆದರೆ ಜಾಕೆಟ್‌ ಮಾತ್ರ ತುಂಬಾ ಗ್ರ್ಯಾಂಡ್‌ ಆಗಿರಲಿ. ಅವುಗಳಲ್ಲಿ ಮೀರರ್‌ ವರ್ಕ್‌ ಅಥವಾ ಕಸೂತಿ ವರ್ಕ್‌ಗಳಿದ್ದರೆ ಇನ್ನು ಉತ್ತಮ. ಇದನ್ನು ಪಾರ್ಟಿ ವೇರ್‌ ಆಗಿಯೂ ತೊಡಬಹುದಾಗಿದೆ.

ಇನ್ನು ಸೀರೆಯ ಮೇಲೆ ಬರುವ ಜಾಕೆಟ್‌ಗಳಿರುತ್ತವೆ. ಇವು ಕೂಡ ಸೀರೆಗೆ ಒಪ್ಪುವಂತಿದ್ದರೆ ಉತ್ತಮ. ಜರ್ದೋಸಿ ಬಳಸಿ ಕಸೂತಿ ಮಾಡಿರುವ ಜಾಕೆಟ್‌ಗಳು ತುಂಬಾ ಚೆಂದವಾಗಿ ಕಾಣಿಸುತ್ತದೆ. ಇದು ಮಧ್ಯವಯಸ್ಕ ಮಹಿಳೆಯರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು ಸೀರೆಯ ಸೆರಗನ್ನು ಮೇಲೆ ಧರಿಸಿ ಅಥವಾ ಜಾಕೆಟ್‌ ಮೇಲೆ ಧರಿಸಿದರೂ ಎರಡೂ ಕೂಡ ನಿಮ್ಮ ಸೀರೆಯ ಅಂದ ವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

- ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

1-cid

ಸಿಐಡಿ‌; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cid

ಸಿಐಡಿ‌; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.