ಶೇಣಿ ಶಾಲೆಯಲ್ಲಿ ಮಕ್ಕಳಿಗೆ ಕೃಷಿ ಪಾಠ

ನೆಟ್ಟು ಬೆಳೆಸುವುದರ ಜತೆಗೆ ಆಯಾಯ ಕಾಲಕ್ಕೆ ತಕ್ಕ ಪರಿಪಾಲನೆ

Team Udayavani, Oct 18, 2019, 5:59 AM IST

17KSDE4

ಪೆರ್ಲ: ಹಿಂದೆಲ್ಲ ನಮ್ಮ ಶಾಲಾ ಪಾಠ ಪುಸ್ತಕಗಳಲ್ಲೆಲ್ಲಾ “ಕೃಷಿತೋ ನಾಸ್ತಿ ದುರ್ಭಿಕ್ಷಂ’ ಅಂತ ಒಂದು ಉಲ್ಲೇಖವಿತ್ತು. ಆದರೆ ಈಗಿನ ಜನ ಕೃಷಿಯಿಂದ ವಿಮು ಖರಾಗುತ್ತಿದ್ದಾರೆ ಅನ್ನುವುದು ಆಧುನಿಕ ವಾದ. ಇದಕ್ಕೆ ಅಪವಾದ ಎನ್ನುವಂತೆ ಶಾಲೆಗಳಲ್ಲಿ ಮಕ್ಕಳಲ್ಲಿಯೇ ಕೈತೋಟ ಕೃಷಿ ಮಾಡಿಸಿಕೊಂಡು ಅದರ ಪಾಲನೆ, ಪೋಷಣೆಯ ಬಾಲಪಾಠವನ್ನು ಹೇಳಿ ಕೊಡುವಲ್ಲಿ ಇಲ್ಲೊಂದು ಶಾಲೆ ಗಮನ ಸೆಳೆಯುತ್ತದೆ.

ಎಣ್ಮಕಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶೇಣಿ ಶ್ರೀಶಾರದಾಂಬ ಎಯುಪಿ ಶಾಲೆಯಲ್ಲಾಗಿದೆ ಈ ರೀತಿಯ ಕೃಷಿ ಪಾಠ ಕಳೆದ ಹಲವಾರು ವರ್ಷಗಳಿಂದ ಒಂದು ಪರಿಪಾಠದಂತೆ ನಡೆದುಕೊಂಡು ಬಂದಿರುವುದು.

ಕೇರಳ ರಾಜ್ಯ ಸರಕಾರವು ಕೃಷಿ ಭವನದ ಮೂಲಕ ವಿತರಿಸುವ ತರಕಾರಿ ಬೀಜಗಳನ್ನು ಕಳೆದ ಹಲವಾರು ವರ್ಷಗಳಿಂದ ತಂದು ತಮ್ಮ ಶಾಲಾ ಅಸುಪಾಸಿನಲ್ಲಿ ಮಣ್ಣು ಅಗೆದು ಶಿಕ್ಷಕರು ಮತ್ತು ಮಕ್ಕಳು ಸೇರಿ ನೆಟ್ಟು ಬೆಳೆಸುವ ತರಕಾರಿ ಕೃಷಿ ಹುಲುಸಾಗಿ ಫಲ ನೀಡುವುದರ ಜತೆಗೆ ಮಕ್ಕಳ ಮಧ್ಯಾಹ್ನದ ಬಿಸಿ ಊಟದ ಸಂಬಾರಿಗೂ ಇದು ಸದುಪಯೋಗವಾಗಿದೆ.

ಅಕ್ಷರದ ಅಂಗಳದಲ್ಲಿ
ಕೃಷಿಯ ಬಾಲ ಪಾಠ
ಇಲ್ಲಿನ ಶಾಲಾ ಶಿಕ್ಷಕರು ವರ್ಷಂಪ್ರತಿ ಮುತುವರ್ಜಿ ವಹಿಸಿ ತರಕಾರಿ ಬೀಜ ಗಳನ್ನು ತಂದು ಹದಗೊಳಿಸಿದ ಜಾಗದಲ್ಲಿ ಮಕ್ಕಳ ಪುಟ್ಟ ಕೈಯಿಂದ ನೆಡಿಸಿ ಆಯಾಯ ಸಮಯಕ್ಕನುಗುಣವಾಗಿ ಹಾಕಬೇಕಾದ ನೀರಿನ ಪ್ರಮಾಣ, ಗೊಬ್ಬರ ಇನ್ನಿತರ ಕೃಷಿ ಪೋಷಣೆಯ ಕ್ರಮವನ್ನು ಸ್ವತ: ಪ್ರಾತ್ಯಕ್ಷಿಕೆಯಂತೆ ಬೋಧಿಸುವುದರ ಜತೆಗೆ ಮಕ್ಕಳಿಗೆ ಅನುಭವಯುಕ್ತವಾಗಿಸಲು ಇದೊಂದು ಸುಂದರ ಮಾರ್ಗವಾಗಿದೆ. ವರ್ಷಂಪ್ರತಿ ಇಲ್ಲಿ ಬೆಂಡೆ, ತೊಂಡೆ, ಅಲಸಂಡೆ, ಹಾಗಲ ಕಾಯಿ, ಟೊಮ್ಯಾಟೊ, ಸೌತೆ, ಹಸಿ ಮೆಣಸು, ಬಾಳೆ ಇನ್ನಿತರ ತರಕಾರಿಗಳನ್ನು ಬೆಳೆಸಲಾಗುತ್ತದೆ. ಇದು ಸಂಪದ್ಭರಿತವಾಗಿ ಫಲ ನೀಡಿದಾಗ ಮಕ್ಕಳ ಭೋಜನಕ್ಕೊಂದು ಪೋಷಕಯಕ್ತ ತರಕಾರಿ ಆಗಿ ಉಪಯೋಗವೂ ಆಗು ತ್ತದೆ. ಜತೆಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಕೃಷಿ ಕಾರ್ಯದ ಬಗ್ಗೆ ಒಲವು ಬೆಳೆಸಿ ಕೊಳ್ಳಲೊಂದು ಪ್ರೇರಣೆಯ ಹಾದಿಯೂ ಆಗಿರುವುದರಿಂದ ಇಂತಹ ಆದರ್ಶ ಕೃಷಿ ಕಾಯಕಗಳು ಅಲ್ಪ ಸ್ವಲ್ಪವಾದರೂ ಅಲ್ಲಲ್ಲಿ ಗೋಚರಿಸಬೇಕು. ಹಾಗಾದರೆ ಮಾತ್ರ “ಕೈ ಕೆಸರಾದರೂ ಬಾಯಿ ಮೊಸರು’ ಎಂಬ ಗಾದೆ ಮಾತಿಗೆ ಮಹತ್ವ ಬಂದು ಮುಂದಿನ ತಲೆಮಾರು ಕೃಷಿಯೆಡೆಗೆ ಆಸಕ್ತಿ ಬೆಳೆಸುವುದರೊಂದಿಗೆ ದೇಶ ವನ್ನು ಸುಭಿಕ್ಷೆಯತ್ತ ಕೊಂಡೊಯ್ಯಲು ಪ್ರರಣೆ ಸಿಗಲಿ.

ಪುಟ್ಟ ಪ್ರಯೋಗ
ಕಳೆದ ಕೆಲವು ವರ್ಷಗಳಿಂದ ಶೇಣಿ ಶಾಲೆಯಲ್ಲಿ ನಡೆಸುತ್ತಾ ಬಂದಿರುವ ಈ ಪುಟ್ಟ ಕೃಷಿ ಪ್ರಯೋಗ ಬಹುಮಟ್ಟಿನಲ್ಲಿ ಪ್ರಗತಿ ಕಂಡಿದೆ. ಇದರಿಂದಾಗಿ ಮಕ್ಕಳಿಗೂ, ಶಾಲೆಗೂ ಫಲಪ್ರದವಾಗಿದೆ. ಶಾಲೆಯ ಪಾಠದ ಜತೆಗೆ ವಿರಾಮದ ಅಥವಾ ಆಟದ ಸಮಯದಲ್ಲಿ ಇಂತಹ ಚಟುವಟಿಕೆಗೆ ಮಹತ್ವ ನೀಡಲಾಗುತ್ತದೆ.
– ಶ್ರೀಧರ ಮಾಸ್ತರ್‌ ಕುಕ್ಕಿಲ,
ಶಿಕ್ಷಕರು, ಪ್ರಗತಿಪರ ಕೃಷಿಕರು

ಟಾಪ್ ನ್ಯೂಸ್

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.