ಸತ್ಯಗೆ 305 ಕೋಟಿ ರೂ. ವೇತನ!
ಮೂಲ ವೇತನದಲ್ಲಿ ಶೇ. 66 ಹೆಚ್ಚಳ ಪಡೆದ ಮೈಕ್ರೋಸಾಫ್ಟ್ ಸಿಇಒ
Team Udayavani, Oct 18, 2019, 6:00 AM IST
ಸ್ಯಾನ್‌ಫ್ರಾನ್ಸಿಸ್ಕೋ: ಮೈಕ್ರೋ ಸಾಫ್ಟ್ ಸಿಇಒ, ಭಾರತೀಯ ಮೂಲದ ಸತ್ಯ ನಾದೆಳ್ಲ ಅವರ ವಾರ್ಷಿಕ ವೇತನ ಎಷ್ಟಿರ ಬಹುದು? ಬಹಳಷ್ಟು ಮಂದಿ ತಲೆಯಲ್ಲಿ ಇರುವ ಪ್ರಶ್ನೆ ಇದು. ಹಾಗೆಯೇ ಇದೇ ಮಂದಿ ಊಹೆಯನ್ನೂ ಮಾಡಿಕೊಳ್ಳ ಲಾಗದಷ್ಟು ವೇತನವನ್ನು ಸತ್ಯ ನಾದೆಳ್ಲ ಪಡೆಯುತ್ತಿದ್ದಾರೆ ಎಂದರೆ ನಂಬಲೇಬೇಕು…
ಹೌದು, ಸಾಫ್ಟ್ವೇರ್ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸತ್ಯ ನಾದೆಳ್ಲ ವಾರ್ಷಿಕವಾಗಿ 305 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಅಂದರೆ ಮಾಸಿಕ ಸರಿಸುಮಾರು 26 ಕೋಟಿ ರೂ.! ಪ್ರಸಕ್ತ ವರ್ಷದಲ್ಲಿ ನಾದೆಳ್ಲ ಅವರ ಮೂಲ ವೇತನದಲ್ಲಿ ಶೇ. 66ರಷ್ಟು ಏರಿಕೆಯಾಗಿದೆ. ಅದರಂತೆ ಅವರಿಗೆ 7.11 ಕೋಟಿ ರೂ. ಹೆಚ್ಚುವರಿ ವೇತನ ಸಿಕ್ಕಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ತಿಳಿಸಿದೆ.
“ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಅನುಬಂಧವನ್ನು ಹೆಚ್ಚಿಸಿದ ಸತ್ಯ ಅವರು ಕಂಪೆನಿಯನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ದಿದ್ದಾರೆ. ಕಂಪೆನಿಯ ಒಳಗೂ ಔದ್ಯೋ ಗಿಕ ಮನೋಭಾವವನ್ನು ಹೆಚ್ಚಿಸಿ, ಹೊಸ ತಂತ್ರಜ್ಞಾನ, ಉತ್ಪನ್ನಗಳ ಆಲೋಚನೆ ಗಳನ್ನು ಅನುಷ್ಠಾನಗೊಳಿಸಿ, ಮಾರುಕಟ್ಟೆ ಯನ್ನೂ ವಿಸ್ತರಿಸುವಲ್ಲಿ ಅಗಾಧ ಪರಿಶ್ರಮ ವಹಿಸಿದ್ದಾರೆೆ’ ಎಂದು ಸಂಸ್ಥೆ ಸತ್ಯ ಅವರನ್ನು ಶ್ಲಾ ಸಿದೆ.
599 ಕೋಟಿ ರೂ. ಪಡೆದಿದ್ದ ಸತ್ಯ!
2014ರಲ್ಲಿ ಸ್ಟೀವ್ ಬಾಲ್ಮರ್‌ರಿಂದ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದ ಸತ್ಯ, ಮೊದಲ ವರ್ಷದಲ್ಲಿ 599 ಕೋಟಿ ರೂ.ಗಳನ್ನು ವೇತನ ರೂಪದಲ್ಲಿ ಪಡೆದಿದ್ದರು. ಅದು ಅವರ ಆವರೆಗಿನ ವೃತ್ತಿಜೀವನದ ಅತೀ ಹೆಚ್ಚು ವೇತನವಾಗಿತ್ತು.
ಎಲಾನ್ ಮಾಸ್ಕ್ಗೆ 3,651 ಕೋ. ವೇತನ
ಭಾರತೀಯರಿಗೆ ಸತ್ಯ ನಾದೆಳ್ಲ ವೇತನ ಹೆಚ್ಚೇ ಅನಿಸಬಹುದು. ಆದರೆ ಜಗತ್ತಿನಲ್ಲೇ ಅತೀ ಹೆಚ್ಚು ವೇತನ ಪಡೆಯುವ ಸಿಇಒ ಎಲಾನ್ ಮಾಸ್ಕ್. ಟೆಸ್ಲಾ ಕಂಪೆನಿಯ ಸಿಇಒ ಆಗಿರುವ ಮಾಸ್ಕ್ಗೆ ವಾರ್ಷಿಕವಾಗಿ 3,651 ಕೋಟಿ ರೂ. ವೇತನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.