INX ಮಾಧ್ಯಮ ಪ್ರಕರಣ; ಸಿಬಿಐನಿಂದ ಚಾರ್ಜ್ ಶೀಟ್, ಚಿದಂಬರಂ, ಪೀಟರ್ ಸೇರಿ 14 ಮಂದಿ ಆರೋಪಿಗಳು
Team Udayavani, Oct 18, 2019, 2:21 PM IST
ನವದೆಹಲಿ: ಐಎನ್ ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದ್ದು, ಕೇಂದ್ರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸೇರಿದಂತೆ 14 ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.
ಐಎನ್ ಎಕ್ಸ್ ಮಾಧ್ಯಮ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಶುಕ್ರವಾರ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಪೀಟರ್ ಮುಖರ್ಜಿ ಸೇರಿದಂತೆ 14 ಆರೋಪಿಗಳ ಹೆಸರು ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಚಿದಂಬರಂ ಹಲವಾರು ವಾರಗಳ ಕಾಲ ತಿಹಾರ್ ಜೈಲುವಾಸ ಅನುಭವಿಸಿದ್ದರು. ಗುರುವಾರ ದೆಹಲಿ ಕೋರ್ಟ್ ಚಿದಂಬರಂ ಅವರನ್ನು ಅಕ್ಟೋಬರ್ 24ರವರೆಗೆ ಇ.ಡಿ ವಶಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ನಂತರ ಜಾರಿ ನಿರ್ದೇಶನಾಲಯ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಚಿದಂಬರಂ ಅವರನ್ನು ವಿಚಾರಣೆಗೊಳಪಡಿಸಿ ಬಂಧಿಸಿತ್ತು.
ಆಗಷ್ಟ್ 12ರಂದು ಐಎನ್ ಎಕ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಎರಡು ತಿಂಗಳ ಕಾಲದಿಂದ ಚಿದಂಬರಂ ಸಿಬಿಐ ಮತ್ತು ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಚಾರಣೆ ನಂತರ ಚಾರ್ಜ್ ಶೀಟ್ ಸಲ್ಲಿಸಿರುವ ಸಿಬಿಐ, ಚಿದಂಬರಂ, ಪೀಟರ್ ಮುಖರ್ಜಿ, ಕಾರ್ತಿ ಚಿದಂಬರಂ, ಭಾಸ್ಕರ್(ಕಾರ್ತಿ ನಿಕಟವರ್ತಿ), ಮಾಜಿ ಕಾರ್ಯದರ್ಶಿ ಆರ್.ಪ್ರಸಾದ್, ಮಾಜಿ ನಿರ್ದೇಶಕ ಪ್ರಬೋಧ್ ಸಕ್ಸೇನಾ, ಜಂಟಿ ಕಾರ್ಯದರ್ಶಿ ಅನುಪ್ ಪೂಜಾರಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಸಿಧುಶ್ರೀ ಖುಲ್ಲಾರ್ , ಐಎನ್ ಎಕ್ಸ್ ಮೀಡಿಯಾ, ಎಎಸ್ ಸಿಪಿಲ್ ಮತ್ತು ಚೆಸ್ ಮ್ಯಾನೇಜ್ ಮೆಂಟ್ ಅನ್ನು ಆರೋಪಿಗಳು ಎಂದು ಹೆಸರು ಉಲ್ಲೇಖಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.